ನವರಾತ್ರಿ ದಾಂಡಿಯಾ ನೈಟ್ಸ್;ಬೆಳಗಾವಿಗರ ಮನಸ್ಸು ಗೆದ್ದ ಶಾಸಕ ಅನಿಲ್ ಬೆನಕೆ

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕಲರಫುಲ್ ದಾಂಡಿಯಾ ನೈಟ್ಸ್ ಮತ್ತು ಕ್ರೀಡಾಕೂಟ ಆಯೋಜನೆ ಮೂಲಕ ಜನರ ಮನಸ್ಸು ಗೆದ್ದ ಬಿಜೆಪಿ ಶಾಸಕ ಅನಿಲ್ ಬೆನಕೆ.

ಹೌದು… ಬೆಳಗಾವಿಯಲ್ಲಿ 9 ದಿನಗಳ ನವರಾತ್ರಿ ಸಂಭ್ರಮ ಅದ್ಧೂರಿಯಾಗಿ ತೆರೆ ಕಂಡಿದೆ..ಅದರಲ್ಲೂ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಈ ಬಾರಿ ನವರಾತ್ರಿ, ದಸರಾ ಹಬ್ಬದ ಸಂಭ್ರಮ ಜೋರಾಗಿತ್ತು..ಯಾಕೆಂದರೆ ಕೋವಿಡ್ ಸಂಕಷ್ಟ ದಿಂದ ಆರ್ಥಿಕವಾಗಿ ಸುಧಾರಿಸುವತ್ತ ಜನರ ಮುಖ ಮಾಡಿದ್ದಾರೆ.. ಇನ್ನೂ ಹಬ್ಬ ಹರಿದಿನಗಳೂ ಬಂದ್ರು ಬೆಳಗಾವಿಯಲ್ಲಿನ ಆಚರಣೆ ತುಂಬಾ ವಿಶೇಷವಾಗಿ ಇರುತ್ತದೆ.

ಹೀಗಾಗಿ ಈ ಬಾರಿಯ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಶಾಸಕ ಅನಿಲ್ ಬೆನಕೆ ಆಯೋಜಿಸಿದ್ದ ದಾಂಡಿಯಾ ನೈಟ್ಸ್, ಮಕ್ಕಳಿಗಾಗಿ ಏರ್ಪಸಿದ್ದ ಕ್ರೀಡೆಗಳು ಇಡೀ ಕುಟುಂಬವೇ ನವರಾತ್ರಿ ಸಂಭ್ರಮದಲ್ಲಿ ತೊಡಗಿಸಿಕೊಳ್ಳುವಂತಾಯಿತು.

ದಾಂಡಿಯಾ ನೈಟ್ ಕಲರವ: ನಗರದ ಸರದಾರ ಮೈದಾನದಲ್ಲಿ ಬಿಜೆಪಿ ಶಾಸಕ ಅನಿಲ್ ಬೆನಕೆ ಬೆಳಗಾವಿ ಜನತೆಗಾಗಿ ಉಚಿತವಾಗಿಯೇ ದಾಂಡಿಯಾ ನೈಟ್ ಆಯೋಜನೆ ಮಾಡಿದ್ದರು. ಪ್ರತಿ ದಿನವೂ ಸಾವಿರಾರು ಜನರು ಡಿಜೆ ಸಂಗೀತ ಕ್ಕೆ ದಾಂಡಿಯಾ ಹೆಜ್ಜೆ ಹಾಕಿ ಡ್ಯಾನ್ಸ್ ಮಾಡಿದ್ರು…ಮಕ್ಕಳು, ಯುವಕ ಯುವತಿಯರು ಹಾಗೂ ಮಹಿಳೆಯರು ಕೂಡಾ ಪ್ರತಿ ದಿನವೂ ಈ ದಾಂಡಿಯಾ ನೈಟ್ಸ್ ಗೆ ಸಾಕ್ಷಿಯಾದ್ರು..ಅದರಲ್ಲೂ ಹೆಣ್ಣುಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರಿಂದ ಸ್ವಯಂ ಶಾಸಕಅನಿಲ್ ಬೆನಕೆ ಅವರೇ ಅವರ ಸುರಕ್ಷಿತೆಗೆ ವಿಶೇಷ ಕಾಳಜಿವಹಿಸಿದ್ದರು.ಈ ಹಿಂದೆಂದೂ ಕಾಣದಷ್ಟು ನವರಾತ್ರಿ ಸಂಭ್ರಮವನ್ನ ಜನರು ಅನುಭವಿಸುವಂತೆ ಶಾಸಕ ಅನಿಲ್ ಬೆನಕೆ ಕಾರ್ಯಕ್ರಮಗಳನ್ನು ಆಯೋಜಿಸಿ ಸೈ ಎಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಮಕ್ಕಳಿಗಾಗಿ ಕ್ರೀಡಾಕೂಟ, ಪೇಂಟಿಂಗ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಿದ್ದರು.. ಅಲ್ಲದೇ ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿತ್ತು.

ಇನ್ನೂ ಚುನಾವಣೆ ವರ್ಷ ಆಗಿದ್ದರಿಂದ ಜನರ ಮಧ್ಯೆ ಇದ್ದು ಕೆಲಸ ಮಾಡುವುದರ ಜೊತೆಗೆ ಜನರ ಅಭಿರುಚಿ ತಕ್ಕಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಮತದಾರ ಪ್ರಭುಗಳ ಮನಸ್ಸು ಗೆಲುವು ಕಾರ್ಯವನ್ನ ಮಾಡುತ್ತಿದ್ದಾರೆ..