ಕರ್ನಾಟಕ

ಕುಂದಾನಗರಿಯಲ್ಲಿ ನಿರವಿಘ್ನದಿಂದ ಐತಿಹಾಸಿಕ ಗಣೇಶೋತ್ಸವ ಮೆರವಣಿಗೆ, ವಿಸರ್ಜನೆ..!

ಕುಂದಾನಗರಿಯಲ್ಲಿ ನಿರವಿಘ್ನದಿಂದ ಗಣೇಶೋತ್ಸವ ಮೆರವಣಿಗೆ, ವಿಸರ್ಜನೆ ಸಂಪನ್ನ

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಮೂರ್ತಿಗಳ ಐತಿಹಾಸಿಕ ಮೆರವಣಿಗೆ, ಲಂಬೋದರನ ವಿಸರ್ಜನೆ ನಿರವಿಘ್ನದಿಂದ ಸಂಪನ್ನವಾಗಿದೆ.

ಬೆಳಗಾವಿ ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯಾ ನೇತೃತ್ವದಲ್ಲಿ ಕೈಗೊಂಡ ಬಿಗಿ ಪೊಲೀಸ್ ಭದ್ರತೆಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆ ವಿಸರ್ಜನೆ ಮಂಗಲಮಯವಾಗಿ ಪೂರ್ಣಗೊಂಡಿದೆ..

ದೇಶದಲ್ಲಿ ಮುಂಬೈ ನಂತರ ಕುಂದಾನಗರಿ ಬೆಳಗಾವಿಯಲ್ಲಿಯೇ ಅದ್ಧೂರಿ ಯಾಗಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯುತ್ತದೆ.

ಎರಡು ಕೋವಿಡ್ ಕಾರಣದಿಂದ ಬೆಳಗಾವಿ ಗಣೇಶೋತ್ಸವ ಸಂಭ್ರಮ ಮಂಕಾಗಿತ್ತು.ಆದ್ರೆ ಈ ಬಾರೀ ಗಣೇಶೋತ್ಸವ ಮತ್ತದೇ ಐತಿಹಾಸಿಕ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದೆ.


ಸ್ವಾತಂತ್ರ್ಯ ಹೋರಾಟದ ಪ್ರಯುಕ್ತ ವಾಗಿ ಬೆಳಗಾವಿಯಲ್ಲಿ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾನೆ ಆರಂಭಿಸಿದ್ರು. ಸ್ವಾತಂತ್ರ್ಯ ಪೂರ್ವ ಆರಂಭಗೊಂಡ ಸಾರ್ವಜನಿಕ ಗಣೇಶೋತ್ಸವ ಉತ್ಸವಕ್ಕೆ ಬೆಳಗಾವಿಯಲ್ಲಿ 100 ವರ್ಷ ಕ್ಕೂ‌ ಅಧಿಕವಾದ ಇತಿಹಾಸವಿದೆ. ಹೀಗಾಗಿ ಬೆಳಗಾವಿಯಲ್ಲಿ ನಡೆಯುವ ಮೂರು ಹಬ್ಬಗಳು ದೇಶದ ಗಮನವನ್ನ ಸೆಳೆಯುತ್ತವೇ. ಕನ್ನಡ ರಾಜ್ಯೋತ್ಸವ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಹಾಗೂ ಗಣೇಶೋತ್ಸವ ಮೆರವಣಿಗೆ..

ಹಾಗೇ ನೋಡಿದ್ರೆ ಬೆಳಗಾವಿಯಲ್ಲಿ 382 ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾನೆ ಆಗುತ್ತವೆ..ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾನೆ ಸಂಖ್ಯೆ ಹೆಚ್ಚಾಗುತ್ತಲೇ ಇವೆ..ಅದರಲ್ಲೂ ಬೆಳಗಾವಿ ನಗರದ ವಿವಿಧ ಪ್ರದೇಶದ ಸಾರ್ವಜನಿಕ ಗಣೇಶ ಮೂರ್ತಿಗಳು ನಗರದ ಸಂಭಾಜಿ ವೃತ್ತ ದಲ್ಲಿ ಸಮ್ಮಿಲನಗೊಳ್ಳುತ್ತವೆ..ಇಲ್ಲಿಂದ ಸರದಿ ಸಾಲಿನಲ್ಲಿ ಕಿರ್ಲೋಸ್ಕರ್ ರಸ್ತೆ, ತಿಲಕ ಚೌಕ್, ಶನಿ ಮಂದಿರ ಮಾರ್ಗವಾಗಿ ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆ ಗೊಳ್ಳುತ್ತವೆ..

ಈ ಬಾರಿ ಅದ್ಧೂರಿ ಗಣೇಶೋತ್ಸವ ಕ್ಕೆ ಬಿಜೆಪಿ ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯಾ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಸಂಪನ್ನಗೊಂಡಿದೆ

ಚುನಾವಣಾ ವರ್ಷ ಆಗಿದ್ದರಿಂದ ಮತ್ತು ಗಣೇಶೋತ್ಸವ ಮುನ್ನಾದಿನದಿಂದಲೇ ವೀರ್ ಸಾರ್ವಕರ್ ಹವಾ ಸದ್ದು ಮಾಡಿದ್ದರಿಂದ ಬೆಳಗಾವಿ ಪೊಲೀಸ್ ನಿದ್ದೆಗೆಡಿಸಿತ್ತು..ಆದ್ರೆ ಪೊಲೀಸ್ ಇಲಾಖೆ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶದಲ್ಲಿ ಬೀಗಿ ಪೊಲೀಸ್ ಭದ್ರತೆ ನಿಯೋಜಿಸಿದ ಫಲವಾಗಿ ಸಂಭ್ರಮ ಸಡಗರದೊಂದಿಗೆ ಮಂಗಲಮಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!