26 ರೌಡಿಗಳಿಗೆ ಬೆಳಗಾವಿ ಕಮೀಷನರ್ ಪೊಲೀಸರ ಶಾಕ್..! ಮೂವರು ರೌಡಿಗಳ ಅರೇಸ್ಟ್?

ರೌಡಿಗಳಿಗೆ ಬೆಳಗಾವಿ ಪೊಲೀಸರು ಶಾಕ್; ಮಾರಕಾಸ್ತ್ರ ಸಮೇತ ಮೂವರು ರೌಡಿಗಳ ಅರೇಸ್ಟ್!
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಬೆಳ್ಳಂ ಬೆಳಗ್ಗೆ ರೌಡಿಗಳಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ.. ಬೆಳಗಾವಿ ಪೊಲೀಸ್ ಕಮೀಷನರ್ ಕಚೇರಿ ವ್ಯಾಪ್ತಿಯ 26 ರೌಡಿಗಳ ಮನೆ ಮೇಲೆ ಬೆಳಗಿನ ಜಾವ ಪೊಲೀಸರು ಧಿಡೀರ ದಾಳಿ ನಡೆಸಿ, ಸರ್ಚ್ ಮಾಡಿದ್ದಾರೆ…

ಬೆಳಗಾವಿ ಲಾ ಆಂಡ್ ಆರ್ಡರ್ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಈ ಪೊಲೀಸ್ ಕಾರ್ಯಾಚರಣೆ ನಡೆದಿದೆ. ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿ 26 ರೌಡಿಗಳ ಮನೆ ಮೇಲೆ ದಾಳಿ ನಡೆಸಿ ರೌಡಿಗಳಲ್ಲಿ ಪೊಲೀಸರು ಭಯ ಹುಟ್ಟಿಸಿದ್ದಾರೆ..


ಅದರಲ್ಲೂ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟೀಮನಿ ನೇತೃತ್ವದ ಮಾರ್ಕೆಟ್ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಮಾಳಮಾರುತಿ ಸಿಪಿಐ ಸುನೀಲ್ ಪಾಟೀಲ್ ತಂಡದ ಕಾರ್ಯಾಚರಣೆಯಲ್ಲಿ ರೌಡಿಗಳ ಮನೆಯಲ್ಲಿ ಮಾರಕಾಸ್ತ್ರ ಗಳು ಪತ್ತೆಯಾಗಿವೆ. ಅದರಲ್ಲೂ ಬೆಳಗಿನ ಜಾವಾ ಆಯಾ ಪೊಲೀಸ್ ಠಾಣೆ ವ್ಯಾಪ್ತಿ ಕಾರ್ಯಾಚರಣೆಯಲ್ಲಿ
ಮೂವರು ರೌಡಿಗಳ ಮನೆಯಲ್ಲಿ ಮಾರಕಾಸ್ತ್ರ ಪತ್ತೆಯಾಗಿದೆ.



ರೌಡಿಗಳಾದ ರುಕ್ಮಿಣಿ ನಗರದ ನಿವಾಸಿ ಶ್ರೀಧರ ತಳವಾರ 29, ಮಾಧ್ವಾರ ರಸ್ತೆಯ ನಿವಾಸಿ ವಿನಾಯಕ ಪ್ರಧಾನ 45, ಖಂಜರ್ ಗಲ್ಲಿ ನಿವಾಸಿ ಅಲ್ತಾಫ್ ಸುಬೇದಾರ 36 ಮನೆಯಲ್ಲಿ ವಿವಿಧ ಮಾರಕಾಸ್ತ್ರ ಸಿಕ್ಕಿದ್ದು, ಈ ಮೂವರು ರೌಡಿಗಳನ್ನ ಮಾಳಮಾರುತಿ, ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.. ಇತ್ತೀಚಿನ ದಿನಗಳಲ್ಲಿ ಬೆಳಗಾವಿಯಲ್ಲಿ ನಗರದ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ..ಈ ರೌಡಿಗಳ ಹುಟ್ಟಡಗಿಸಲು ಈ ಪೊಲೀಸ್ ಕಾರ್ಯಾಚರಣೆಯನ್ನ ನಡೆಸಲಾಗಿದೆ..