ಕರ್ನಾಟಕ

ಅದ್ಭುತ ಸೂಪರ್ ಕಾಪ್ ಎಸ್ಪಿ ಲಕ್ಷ್ಮಣ ನಿಂಬರಗಿ

ಎಸ್ಪಿ ಲಕ್ಷ್ಮಣ ನಿಂಬರಗಿ ವರ್ಗಾವಣೆ; ಬೆಳಗಾವಿ ಜನರಿಗೆ ಬೇಸರ ತಂದ ಸರ್ಕಾರ ಕ್ರಮ

ಬೆಳಗಾವಿ: ಬೆಳಗಾವಿ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಬೆಂಗಳೂರಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ…ಆದ್ರೆ ಸರ್ಕಾರದ ಈ ಕ್ರಮ ಬೆಳಗಾವಿ ಜಿಲ್ಲೆ ಜನರಿಗೆ ಅತೀವ ಬೇಸರ ತಂದಿದೆ.

ಬೆಳಗಾವಿ ಜಿಲ್ಲೆಯ ಕಂಡ ದಕ್ಷ, ಪ್ರಾಮಾಣಿಕ, ಖಡಕ್ ಹಾಗೂ ಹೃದಯವಂತ ಐಪಿಎಸ್ ಅಧಿಕಾರಿಗಳಿಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಮುಂಚೂಣಿ ಸಾಲಿನಲ್ಲಿ ನಿಲ್ಲುತ್ತಾರೆ… ಪೊಲೀಸ್ ಇಲಾಖೆ ಅಂದ್ರೆ ಪ್ರತಿ ದಿನವೂ ಸವಾಲಿನ ಕೆಲಸವೇ ಸರಿ..ಅದರಲ್ಲೂ ಗೋವಾ ಕರ್ನಾಟಕ, ಮಹಾರಾಷ್ಟ್ರದ ರಾಜ್ಯಗಳನ್ನ ಸಂಪರ್ಕ ಸೇತು ಅಂದ್ರೆ ಅದು ಬೆಳಗಾವಿ ಜಿಲ್ಲೆ.. ಹತ್ತಹತ್ತಿರ 50 ಲಕ್ಷ ಜನ ಸಂಖ್ಯೆ ಇರೋ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಎಂದಿಗೂ ಹದಗೆಡದಂತೆ ಎಚ್ಚರಿಕೆ ವಹಿಸಿದವರು ಎಸ್ಪಿ ಲಕ್ಷ್ಮಣ ನಿಂಬರಗಿ.

ಮೂರು ವರ್ಷಕ್ಕೂ ಅಧಿಕ ಕಾಲ ಬೆಳಗಾವಿ ಎಸ್ಪಿ ಆಗಿ ಅವರು ಮಾಡಿದ ಸೇವೆ, ಕರ್ತವ್ಯ ಪ್ರಜ್ಞೆ ಹಾಗೂ ಮಾನವೀಯತೆ ಮೆರೆದ ಖಡಕ್ ಅಧಿಕಾರಿ ಇವರು..ಎಸ್ಪಿ ಆಗಿ ಬಂದ ತಕ್ಷಣವೇ ಲಕ್ಷ್ಮಣ ನಿಂಬರಗಿ ಸರ್ ಗೆ ಮೊದಲು ಎದುರಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ 2018 ರಲ್ಲಿ ಸಂಭವಿಸಿದ ಜಲಪ್ರಳಯ..ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿ ಸಪ್ತನದಿಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿತ್ತು..ಶೇ 70 ರಷ್ಟು ಜಿಲ್ಲೆ ಪ್ರದೇಶಗಳು ನೀರಿನಿಂದ ಜಲಾವೃತಗೊಂಡ ಸಂದರ್ಭದಲ್ಲಿ ಲಕ್ಷಾಂತರ ಜನರನ್ನ ಸುರಕ್ಷಿತವಾಗಿ ಸ್ಥಳಾಂತರ ಕಾರ್ಯ ಆಗಿರಲೀ , ಏರ್ ಲಿಫ್ಟ್ ಸೇರಿ ನಡೆದ ನೂರಾರು ರಕ್ಷಣಾ ಕಾರ್ಯಾಚರಣೆಗಳು ಯಶಸ್ವಿಯಾಗಿದ್ದು ಲಕ್ಷ್ಮಣ ನಿಂಬರಗಿ ಅವರ ನಾಯಕತ್ವದಲ್ಲಿ ಅನ್ನೋದು ವಿಶೇಷ..

ಇನ್ನೂ ಇಡೀ ಜಗತ್ತೆ ಕೊರೊನಾ ಮೂರು ಅಲೆಗಳ ಸಂದರ್ಭದಲ್ಲಿ ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿ ಕೋವಿಡ್ ಚೆಕ್ ಪೋಸ್ಟ್ ಪರಿಣಾಮಕಾರಿ ಆಗಿ ಕಾರ್ಯ ನಿರ್ವಹಿಸಿದರ ಹಿಂದೆ ಎಸ್ಪಿ ಲಕ್ಷ್ಮಣ ನಿಂಬರಗಿ ಅವರ ಸಮಯ ಪ್ರಜ್ಞೆ, ಪೊಲೀಸ್ ಅಧಿಕಾರಿಗಳು,ಸಿಬ್ಬಂದಿ ವಾರಿಯರ್ಸ್‌ ಆಗಿ ಜವಾಬ್ದಾರಿ ನಿರ್ವಹಿಸಲು ಸ್ಫೂರ್ತಿ ಆದವರೇ ಲಕ್ಷ್ಮಣ ನಿಂಬರಗಿ.


ಇನ್ನೂ ಖಾನಾಪುರದ ಅರ್ಬಾಜ್ ಮರ್ಡರ್ ಕೇಸ್, ಯಮಕನಮರಡಿ ಮತಕ್ಷೇತ್ರಲ್ಲಿ ಆದ ಶಿವಾಜಿ ಮೂರ್ತಿ ಗಲಾಟೆ, ಗಡಿಯಲ್ಲಿ ಶಿವಸೇನೆ ಪುಂಡಾಟ್, ಸವದತ್ತಿ ಡಿಸಿಸಿ ಬ್ಯಾಂಕ್ ಕಳ್ಳತನ, ಪೊಲೀಸ್ ಪರೀಕ್ಷೆಯಲ್ಲಿ ಅಕ್ರಮ, ಅಧಿವೇಶನ ಸಂದರ್ಭದಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕುವದಂತೆ ಜಾಗರೂಕತೆಯಿಂದ ತೆರೆ ಹಿಂದೆಯೇ ಇದ್ದುಕೊಂಡು ಕರ್ತವ್ಯ ನಿಭಾಯಿಸಿದವರು..ಅಸಂಖ್ಯಾತ ನೊಂದವರಿಗೆ, ಕಷ್ಟದಲ್ಲಿ ಇದ್ದವರಿಗೆ ದಾರಾಳವಾಗಿ ನೆರವಿಗೆ ನಿಂತು ನ್ಯಾಯ ಒದಗಿಸಿದ ಅಧಿಕಾರಿ. ಬೆಳಗಾವಿ ರಾಜಕಾರಣದ ವ್ಯವಸ್ಥೆಯಲ್ಲಿ ಎಲ್ಲವನ್ನ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡವರು..ಇಂತಹ ಅದ್ಭುತ, ಖಡಕ್ ಅಧಿಕಾರಿ ವರ್ಗಾವಣೆ ಈಗ ಬೆಳಗಾವಿಗರಿಗೆ ಬೇಸರ ತರಿಸಿದ್ದು ಮಾತ್ರ ಸುಳ್ಳಲ್ಲ..

Related Articles

Leave a Reply

Your email address will not be published. Required fields are marked *

Back to top button
error: Content is protected !!