ಅನಿಲ್ ಬೆನಕೆಗೆ ಬೆಳಗಾವಿ ನಾಗರಿಕ ಸನ್ಮಾನ

ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಅವರ ಜನಪರ, ಬಡವರ ಪರ ಕಾಳಜಿಗೆ ಈಗ ತುಂಬಾ ಮೆಚ್ಚುಗೆ ವ್ಯಕ್ತವಾಗಿದ್ದು, ಅನಿಲ್ ಬೆನಕೆ ಅವರನ್ನ ಬೆಳಗಾವಿ ವಿವಿಧ ಸಂಘಟನೆಗಳ ಪರವಾಗಿ ನಾಗರಿಕ ಸಮ್ಮಾನ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಹೌದು…ಗಡಿ ಜಿಲ್ಲೆ ಬೆಳಗಾವಿ ದೊಡ್ಡದಾಗಿದೆ..18 ಜನ ಶಾಸಕರು, ಇಬ್ಬರೂ ಸಂಸದರು, ಓರ್ವ ಎಂಎಲಸಿ, ಓರ್ವ ರಾಜ್ಯಸಭಾ ಸದಸ್ಯರು ಇದ್ದಾರೆ..ಆದ್ರೆ ಬೆಳಗಾವಿ ಜಿಲ್ಲಾ ಆಸ್ಪತ್ರೆ ಮಾತ್ರ ಅನೇಕ ಸಮಸ್ಯೆಗಳ ಆಗರವಾಗಿತ್ತು..50 ಲಕ್ಷ ಜನ ಸಂಖ್ಯೆ ಇರುವ ಬೆಳಗಾವಿಯ ಬಹುತೇಕ ಬಡವರು, ಮಧ್ಯಮ ವರ್ಗದ ಜನರಿಗೆ ಜಿಲ್ಲಾ ಆಸ್ಪತ್ರೆಯೇ ಆಸರೆ..ಇಂತಹ ಜಿಲ್ಲಾ ಆಸ್ಪತ್ರೆ ಅಭಿವೃದ್ಧಿ ಗೆ ಈವರೆಗೂ ಬೆಳಗಾವಿಯ ಯಾವೊಬ್ಬ ಜನಪ್ರತಿನಿಧಿಗಳು ಗಮನ ಹರಿಸಿರಲಿಲ್ಲ.. ಆದ್ರೆ ಶಾಸಕ ಅನಿಲ್ ಬೆನಕೆ ಶಾಸಕರಾದ ದಿನದಂದ ಬೀಮ್ಸ್ ಅಡಿಯಲ್ಲಿ ಬರುವ ಜಿಲ್ಲಾ ಆಸ್ಪತ್ರೆ ಅಭಿವೃದ್ಧಿ ಗೆ ಕಠಿಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ.

ಅದರಲ್ಲೂ ಹೆರಿಗೆ ವಿಭಾಗ, ಚಿಕ್ಕ ಮಕ್ಕಳ ವಿಭಾಗ ಸೇರಿದಂತೆ ಆಸ್ಪತ್ರೆ ವಿವಿಧ ವಿಭಾಗದಲ್ಲಿ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ, ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳನ್ನ ಹಂತ ಹಂತವಾಗಿ ಕಲ್ಪಿಸುವ ಕಾರ್ಯವನ್ನ ಮಾಡುತ್ತಿದ್ದಾರೆ..ಅದರಲ್ಲೂ ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರು ಬೀಮ್ಸ್ ನ ಆಡಳಿತ ಅಧಿಕಾರಿ ಆದ ಕ್ಷಣದಿಂದವ ಬೀಮ್ಸ್ ಆಸ್ಪತ್ರೆ ಆಡಳಿತ ಮತ್ತು ಸೇವೆ ಯಲ್ಲಿ ಮಹೋನ್ನತರ ಬದಲಾವಣೆ ಬಂದಿದೆ..

ಇನ್ನೂ ಕಾರ್ಮಿಕ ಸಂಘಗಳು, ರೈತರು, ವಿವಿಧ ಸಂಘಟನೆಗಳು ಶಾಸಕ ಅನಿಲ್ ಬೆನಕೆ ಅವರ ಗಮನಕ್ಕೆ ತಂದ ಪ್ರತಿಯೊಂದು ಸಮಸ್ಯೆಗಳಿಗೆ ಅಷ್ಟು ಮುತುವರ್ಜಿಯಿಂದ ಸ್ಪಂದಿಸುವ ಕಾರ್ಯವನ್ನ ಅನಿಲ್ ಬೆನಕೆ ಮಾಡುತ್ತಿದ್ದಾರೆ.. ಹೀಗಾಗಿ ಕಾರ್ಮಿಕ ಮುಖಂಡ ಎನ್.ಆರ್.ಲಾತೂರ್ ನೇತೃತ್ವದ ಬೆಳಗಾವಿ ನಾಗರಿಕರು ಶಾಸಕ ಅನಿಲ್ ಬೆನಕೆ ಅವರ ಕಚೇರಿ ಗೆ ತೆರಳಿ ಸನ್ಮಾನ ಮಾಡಿದ್ದಾರೆ… ಶಾಸಕರನ್ನ ಗೌರವಿಸುವ ಮೂಲಕ ಜನನಾಯಕ ಸೇವೆಯನ್ನ ಮುಕ್ತಕಂಠದಿಂದ ಕೊಂಡಾಡಿದ್ದಾರೆ..