ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ಪೃಥ್ವಿ ಸಿಂಗ್

ಬೆಳಗಾವಿ: ಬಿಜೆಪಿ ಎಸಿ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯ, ಸಮಾಜ ಸೇವಕ ಪೃಥ್ವಿ ಸಿಂಗ್ ಅರುಣ ಕೋಲ್ಕರ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನ ಉದ್ಘಾಟಿಸಿದ್ರು.

ಬುಧವಾರ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬೆನಕನಹಳ್ಳಿ ಗ್ರಾಮದಲ್ಲಿ ನಡೆದ ಫುಲ್ ಪಿಚ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಸಮಾರಂಭ ಮುಖ್ಯ ಅತಿಯಾದ ಪೃಥ್ವಿ ಸಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದ್ರು..ಯುವಕರು ಕ್ರೀಡಾ ಮನೋಭಾವನ್ನ ಬೆಳಸಿಕೊಳ್ಳಬೇಕು..ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ..ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಕ್ರೀಡೆ ಯುವಕರನ್ನ ದೈಹಿಕವಾಗಿ ಮಾನಸಿಕವಾಗಿ ಸದೃಢ ಗೊಳಿಸುತ್ತದೆ.ಗ್ರಾಮೀಣ ಪ್ರದೇಶದ ದೇಶಿ ಕ್ರೀಡೆಗಳನ್ನ ಉಳಿಸಿ ಬೆಳೆಸುವ ಕಾರ್ಯವನ್ನ ಮಾಡಬೇಕಿದೆ ಎಂದು ಹೇಳಿದ್ರು..

ಅಲ್ಲದೇ ಯುವಕರ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಪ್ರಮುಖವಾಗಿದೆ.ಯಾವುದೇ ದುಶ್ಚಟಗಳಿಗೆ ಒಳಗಾಗದೇ ಯುವಕರು ತಮ್ಮ ಆರೋಗ್ಯದತ್ತ ಗಮನ ಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಠಲ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಡಾ.ರಾಜು ಪಾಟೀಲ್, ಶೇಖರ್ ತಳವಾರ, ಡಾ.ಸತೀಶ ಚೌಗುಲೆ ಸೇರಿ ವಿವಿಧ ಗಣ್ಯರು ಭಾಗವಹಿಸಿದ್ದರು.