ಗುಡ್ ನ್ಯೂಸ್

ಹಸಿವು ನೀಗಿಸಿದ್ರು..ಫುಡ್ ಔಷಧೀಯ ಕಿಟ್ ತಲುಪಿಸಿದ್ರು..ಈಗ ಪರಿಹಾರ ಚೆಕ್ ವಿತರಿಸಿದ್ರು ಶಾಸಕ ಅನಿಲ್ ಬೆನಕೆ

ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕೊರೊನಾದಿಂದ ಮೃತಪಟ್ಟ 26 ಕುಟುಂಬಗಳಿಗೆ ಬಿಜೆಪಿ ಶಾಸಕ ಅನಿಲ್ ಬೆನಕೆ ಸರ್ಕಾರದಿಂದ ಪರಿಹಾರ ಚೆಕ್ ಕೊಡಿಸುವ ಕಾರ್ಯವನ್ನ ಸದ್ದಿಲ್ಲದೆ ಮಾಡುತ್ತಿದ್ದಾರೆ..

ಯಸ್.. ಮೊದಲ ಲಾಕಡೌನ್ ನಲ್ಲಿ ಬಡವರ ಹಸಿವು ನೀಗಿಸಿದ್ರು..ಎರಡನೇ ಲಾಕಡೌನ್ ನಲ್ಲಿ ಹಸಿವಿನೊಂದಿ ಔಷಧೀಯ ಕಿಟ್ ಪೂರೈಸಿದ್ರು..ಎರಡು ಅಲೆಯಲ್ಲಿ ನೂರಾರು ಜನರು ಮೃತಪಟ್ಟರು.. ಸರ್ಕಾರದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಮುತುವರ್ಜಿಯಿಂದ ಅವರ ಕುಟುಂಬಗಳಿಗೆ ಒಂದು ಲಕ್ಷ ರುಪಾಯಿ ಚೆಕ್ ವಿತರಿಸುವ ಕಾಯಕವನ್ನ ಶಾಸಕ ಅನಿಲ್ ಬೆನಕೆ ಮಾಡುತ್ತಿದ್ದಾರೆ.

ಹಾಗೇ ನೋಡಿದ್ರೆ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕೊರೊನಾದಿಂದ ಮೃತಪಟ್ಟರು ಸಂಖ್ಯೆ ಕಡಿಮೆ ಏನು ಇಲ್ಲ.. ಅದರಲ್ಲೂ ಮೊದಲ ಮತ್ತು ಎರಡನೇ ಅಲೆಯಲ್ಲಿ ಮೃತಪಟ್ಟರು 50 ಕ್ಕೂ ಅಧಿಕ ಕುಟುಂಬಗಳು ಸರ್ಕಾರದ ಪರಿಹಾರಕ್ಕಾಗಿ ಅರ್ಜಿಯನ್ನ ಸಲ್ಲಿದ್ದಾರೆ..ಹೀಗೆ ಅರ್ಜಿ ಸಲ್ಲಿಸಿದ ಕುಟುಂಬಗಳ ದಾಖಲೆಗಳ ವಿಲೇವಾರಿ ತ್ವರಿತವಾಗಿ ಮಾಡುವಂತೆ ಅಧಿಕಾರಿಗಳ ದುಂಬಾಲು ಬಿದ್ದಿದ್ದಾರೆ ಶಾಸಕ ಅನಿಲ್ ಬೆನಕೆ. ಇದೇ ಕಾರಣಕ್ಕೆ ಈವರೆಗೂ26 ಕುಟುಂಬಗಳಿಗೆ ಪರಿಹಾರದ ಮೊತ್ತ ಕೈ ಸೇರಿದಂತಾಗಿದೆ. ಇನ್ನೂ ಕೆಲವೊಂದಿಷ್ಟು ಅರ್ಜಿಗಳಲ್ಲಿ ಸೂಕ್ತ ದಾಖಲೆಗಳ ಕೊರತೆ ಹಾಗೂ ಕೆಲವೊಂದು ಪ್ರಕರಣದಲ್ಲಿ ಆರಟಿಪಿಸಿಆರ ವರದಿ ಇಲ್ಲದೇ ಇರುವುದು ತೊಡಕಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯಾವುದೇ ಫಲಾನುಭವಿಗಳು ಸರ್ಕಾರದ ಪರಿಹಾರದಿಂದ ವಂಚಿತರಾಗಬಾರದು..ಆ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಅವರಿಗೂ ನ್ಯಾಯ ಒದಗಿಸುವ ಕಾರ್ಯವನ್ನ ಮಾಡುವುದಾಗಿ ಶಾಸಕ ಅನಿಲ್ ಬೆನಕೆ ಸಂತ್ರಸ್ತರಿಗೆ ಭರವಸೆ ನೀಡಿದ್ದಾರೆ. ಕೊರೊನಾ ಮೊದಲು ಅಲೆಯ ಲಾಕಡೌನ್ ನಲ್ಲಿ ನಿತ್ಯವೂ ಸಾವಿರ ಜನ ಬಡವರ ಮನೆ ಬಾಗಿಲಿಗೆ ಊಟವನ್ನ ತಲುಪಿಸುವ ಮೂಲಕ ಅವರ ಹಸಿವು ನೀಗಿಸುವ ಕೆಲಸವನ್ನ ಮಾಡಿದೆ..ಆದ ಬಳಿಕ ಬಂದ ಎರಡನೇ ಅಲೆಯಲ್ಲೂ ಬಡವರಿಗೆ ಊಟ, ಫುಡ್ ಕಿಟ್ ಜೊತೆಗೆ ಜೊತೆಗೆ ಔಷಧೀಯ ಕಿಟಗಳನ್ನ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನ ಅನಿಲ್ ಬೆನಕೆ ಮಾಡುವ ಮೂಲಕ ಅವರ ನೆರವಿಗೆ ನಿಂತಿದ್ದರು..ಈಗ ಮೂರನೇ ಅಲೆ ಆತಂಕ ಸೃಷ್ಟಿಯಾಗಿದೆ..ಈ ಎರಡು ಅಲೆಯಲ್ಲಿ ಆದ ವೈದ್ಯಕೀಯ ಲೋಪಗಳು ಆಗದಂತೆ ಎಚ್ಚರ ವಹಿಸಲು ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ..

Related Articles

Leave a Reply

Your email address will not be published. Required fields are marked *

Back to top button
error: Content is protected !!