ಲಕ್ಷ್ಮಣ ಸವದಿಗೆ ಬಿಜೆಪಿ ಮಿಷನ್2023 ಟಾರ್ಗೆಟ್ ಹೊಣೆಗಾರಿಕೆ..!?

ಲಕ್ಷ್ಮಣ ಸವದಿಗೆ ಬಿಜೆಪಿ ಮಿಷನ್2023 ಟಾರ್ಗೆಟ್ ಜವಾಬ್ದಾರಿ
ಬೆಳಗಾವಿ: ಸಂಘಟನಾ ಚತುರ, ಮುತ್ಸದ್ಧಿ ರಾಜಕಾರಣಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸಂಗಪ್ಪ ಸವದಿ ಅವರಿಗೆ ಮತ್ತೆ ಬಿಜೆಪಿ ಹೈಕಮಾಂಡ್ ಹೊಸ ಜವಾಬ್ದಾರಿಯನ್ನ ನೀಡಿದೆ.. ಈಗ ಲಕ್ಷ್ಮಣ ಸವದಿ ಭಾರತೀಯ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇದು ಲಕ್ಷ್ಮಣ ಸವದಿ ಅಭಿಮಾನಿಗಳು ಮತ್ತು ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.ಇನ್ನೂ ಬಿಜೆಪಿ ಮಿಷನ್2023 ಟಾರ್ಗೆಟ್ ನ ಜವಾಬ್ದಾರಿ ಲಕ್ಷ್ಮಣ ಸವದಿ ಹೆಗಲಿಗೆ..!!?

ಹೌದು…ಕರ್ನಾಟಕ ಬಿಜೆಪಿ ಪಕ್ಷದಲ್ಲಿ ಅಥಣಿ ಮತಕ್ಷೇತ್ರದಿಂದ ಪ್ರತಿನಿಧಿಸುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನಾಯಕತ್ವವನ್ನ ಗುರುತಿಸಿ ಬಿಜೆಪಿ ಹೈಕಮಾಂಡ್ ಮತ್ತೆ ಪಕ್ಷ ಸಂಘಟನೆ ಕಾರ್ಯದ ಜವಾಬ್ದಾರಿಯನ್ನ ನೀಡಿದೆ.
ಯಡಿಯೂರಪ್ಪ ಸರ್ಕಾರದಲ್ಲಿ ಲಕ್ಷ್ಮಣ ಸವದಿ ರಾಜ್ಯವನ್ನ ಅಥಣಿಯತ್ತ ತಿರುಗಿ ನೋಡುವತಂಹ ದಾಖಲೆ ಮತಗಳಿಂದ ಜಯಭೇರಿ ಸಾಧಿಸಿದ್ದರು..ಆಗ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಆಗಿದ್ದರು..ತದನಂತರ ಬಿಜೆಪಿ ಅಧಿಕಾರಕ್ಕೆ ಬಂದಾಗಲೇಲ್ಲ ಲಕ್ಷ್ಮಣ ಸವದಿ ಮಂತ್ರಿಯಾಗಿ ಕಾರ್ಯವನ್ನ ನಿರ್ವಹಣೆ ಮಾಡಿದ್ದಾರೆ.. ರಾಜ್ಯದ ಮತ್ತು ಜವಾಬ್ದಾರಿ ಕೊಟ್ಟ ಇಲಾಖೆ ಅಭಿವೃದ್ಧಿ ಜೊತೆಗೆ ಗಮನಾರ್ಹ ಬದಲಾವಣೆ ತರುವ ಮೂಲಕ ತಮ್ಮ ಸಾಮರ್ಥ್ಯ ವನ್ನ ಪ್ರದರ್ಶಿಸಿದ್ದರು.. ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಸೋತರು ಸಹ ಪಕ್ಷದ ವರಿಷ್ಠರು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿತು..

ಆಗಲೂ ಲಕ್ಷ್ಮಣ ಸವದಿ ರಾಜ್ಯಾದ್ಯಂತ ಸಂಚರಿಸಿ ರೈತರ ಪರ ಗಟ್ಟಿ ಧ್ವನಿಯನ್ನ ಎತ್ತಿದ್ದರು..ಆನಂತರ ಲಕ್ಷ್ಮಣ ಸವದಿಗೆ ಉಪ ಮುಖ್ಯಮಂತ್ರಿ ಸ್ಥಾನದೊಂದಿಗೆ ಎರಡು ಖಾತೆಗಳು ಸಿಕ್ಕಿದ್ದವು..ಬದಲಾದ ರಾಜಕಾರಣದಲ್ಲಿ ಲಕ್ಷ್ಮಣ ಸವದಿ ಸಂಪುಟದಿಂದ ಹೊರಗೆ ಉಳಿದ್ರು…ಮತ್ತೆ ಲಕ್ಷ್ಮಣ ಸವದಿ ರಣತಂತ್ರ ದಿಂದ ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ರು…ಆಗ್ಲೇ ಮತ್ತೆ ಬಿಜೆಪಿ ವರಿಷ್ಠರು ಹೊಸ ಜವಾಬ್ದಾರಿ ನೀಡುವ ಭರವಸೆಯನ್ನ ನೀಡಿದ್ರು..ಅದರಂತೆ ಈಗ ಲಕ್ಷ್ಮಣ ಸಾಹುಕಾರ್ ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಗಾದೆ ಒಳಿದು ಬಂದಿದೆ..

ಮುಂದಿನ2023 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರ ಕ್ಕೆ ತೆಗೆದುಕೊಂಡು ಬರುವ ನಿಟ್ಟಿನಲ್ಲಿ ಪಕ್ಷದ ಶಿಸ್ತಿನ ಸಿಪಾಯಿಗೆ ಬಹುದೊಡ್ಡ ಜವಾಬ್ದಾರಿ ಸಿಕ್ಕಿದೆ.. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಹೆಚ್ಚಿನ ಶಾಸಕರು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಲಕ್ಷ್ಮಣ ಸವದಿಗೆ ಜವಾಬ್ದಾರಿ ನೀಡಿದಂತಾಗಿದೆ…ಇನ್ನೂ ಲಕ್ಷ್ಮಣ ಸವದಿಗೆ ಜವಾಬ್ದಾರಿ ನೀಡುವ ಮೂಲಕ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲೂ ಸಂಚಲನ ಮೂಡಿಸಿದೆ..ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನ ಇನ್ನಷ್ಟು ಸುಭದ್ರಗೊಳಿಸುವ ಹೊಣೆಗಾರಿಕೆಯನ್ನು ಲಕ್ಷ್ಮಣ ಸವದಿ ಹೆಗಲಿಗೆ ಮುಂದಿನಗಳಲ್ಲಿ ಪಕ್ಷ ವರಿಷ್ಠರು ನೀಡುವ ಸಾಧ್ಯತೆಯಿದೆ.