ಸೈಲೆಂಟ್ ಆಗಿಯೇ ಗಮನ ಸೆಳೆದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ

ಸೈಲೆಂಟ್ ಆಗಿಯೇ ಗಮನ ಸೆಳೆದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ
ಬೆಳಗಾವಿ:ಬೆಳಗಾವಿ ಎರಡು ಸ್ಥಾನ ಪರಿಷತ್ ಚುನಾವಣೆ ಗೆ ಬಿಜೆಪಿ ಅಭ್ಯರ್ಥಿ ಯಾಗಿ ಮಹಾಂತೇಶ ಕವಟಗಿಮಠ ಮೂರು ಬಾರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಇಂದು ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಘಟಾನುಘಟಿ ನಾಯಕರು ಸಮಾವೇಶ ಗೊಂಡರು. ಕನ್ನಡ ಸಾಹಿತ್ಯ ಭವನದಿಂದ ಜನಜಾತ್ರೆ ಮಾಡದೇ ಮಹಾಂತೇಶ ಕವಟಗಿಮಠ ಬಿಜೆಪಿ ನಾಯಕರೊಂದಿಗೆ ಪಾದಯಾತ್ರೆ ಮೂಲಕ ವೇ ಜಿಲ್ಲಾಧಿಕಾರಿ ಕಚೇರಿ ಗೆ ತೆರಳಿದ್ರು.. ಚುನಾವಣಾ ಅಧಿಕಾರಿ ಆರ.ವೆಂಕಟೇಶ ಕುಮಾರ್ ಅವರಿಗೆ ಮಹಾಂತೇಶ ಕವಟಗಿಮಠ ಬಿಜೆಪಿ ಅಭ್ಯರ್ಥಿ ಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ರು..

ಈ ಸಂದರ್ಭದಲ್ಲಿ ಮಾಜಿ ರಮೇಶ್ ಜಾರಕಿಹೊಳಿ, ಸಚಿವರಾದ ಉಮೇಶ್ ಕತ್ತಿ, ಶಶಿಕಲಾ ಜೋಲ್ಲೆ, ಸಂಸದರಾದ ಮಂಗಲ್ ಅಂಗಡಿ, ಅಣ್ಣಾಸಾಹೇಬ್ ಜೋಲ್ಲೆ, ಶಾಸಕರಾದ ಅಭಯ ಪಾಟೀಲ್ ಅನಿಲ್ ಬೆನಕೆ, ಮಹಾದೇವಪ್ಪ ಯಾದವಾಡ, ಮಹೇಶ ಕುಮಟಳ್ಳಿ, ಆನಂದ ಮಾಮನಿ ಸೇರಿ ಬಿಜೆಪಿ ಹಾಲಿ ಮಾಜಿ ಶಾಸಕರು ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಸಾಥ್ ನೀಡಿದ್ರು…

ಇನ್ನೂ ನಾಮಪತ್ರ ಸಲ್ಲಿಕೆ ಮುನ್ನವೇ ಬಿಜೆಪಿ ನಾಯಕರು ಮಹಾಂತೇಶ ಕವಟಗಿಮಠ ಗೆಲುವಿನ ವಿಶ್ವಾಸವನ್ನ ಹೊರಹಾಕಿದ್ರು.. ಅತ್ತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ. ಮೊದಲೇ ಮತ ಬಿಜೆಪಿ ಅಭ್ಯರ್ಥಿ ಗೆ ಎರಡನೇ ಮತ ಕಾಂಗ್ರೆಸ ಸೋಲಿಸಲು ಹಾಕ್ತಿವಿ. ಈ ಬಗ್ಗೆ ಇದೇ 29 ರಂದು ದೆಹಲಿಯ ವರಿಷ್ಠರ ಜೊತೆಗೆ ಚರ್ಚೆ ನಡೆಸಿ ತೀರ್ಮಾನ ಮಾಡ್ತಿವಿ ಎಂದ್ರು..

ಕಾಂಗ್ರೆಸ ಅಭ್ಯರ್ಥಿ ಚನ್ನರಾಜ ಹಟ್ಟಿಹೋಳಿ ಮತ್ತು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದ್ರೆ.

ಇತ್ತ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಯಾವುದೇ ಶಕ್ತಿ ಪ್ರದರ್ಶನ ಮಾಡದೇ ಸಿಂಪಲ್ ಆಗಿ ನಾಮಪತ್ರ ಸಲ್ಲಿಸಿದ್ರು. ಮಹಾಂತೇಶ ಕವಟಗಿಮಠ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ನಾಯಕರು ಸಾಥ್ ಕೊಡುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ರು..