ಕರ್ನಾಟಕ

ಕಾಂಗ್ರೆಸ್, ಬಿಜೆಪಿ ಗೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಶಕ್ತಿ ಪ್ರದರ್ಶನ

ಬೆಳಗಾವಿ: ಬೆಳಗಾವಿ ಎರಡು ಸ್ಥಳೀಯ ಸಂಸ್ಥೆ ಸ್ಥಾನಕ್ಕೆ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಬೆಳಗಾವಿ ಜಿಲ್ಲೆಯ ಪರಿಷತ್ ಚುನಾವಣೆಯಲ್ಲಿ ಲಖನ್ ಎಂಟ್ರಿ ಸಾಕಷ್ಟು ಕುತೂಹಲ ಕೆರಳಿಸಿದೆ. ಇಂದು ಜಾರಕಿಹೊಳಿ ಬ್ರದರ್ಸ್ ಕಿರಿಯ ಸಹೋದರ ಲಖನ್ ಜಾರಕಿಹೊಳಿ ತಮ್ಮ ಉಮೇದುವಾರಿಕೆ ಸಲ್ಲಿಸುವ ಮೂಲಕ ಚುನಾವಣಾ ಕಣವನ್ನ ರಂಗೇರಿಸಿದ್ದಾರೆ.


ಹಾಗೇ ನೋಡಿದ್ರೆ ಲಖನ್ ಜಾರಕಿಹೊಳಿ ಇಂದು ಬೆಳಗಾವಿ ಚೆನ್ನಮ್ಮ ವೃತ್ತದ ಗಣೇಶ ಮಂದಿರ ದಲ್ಲಿ ವಿಶೇಷ ಸಲ್ಲಿಸಿದ್ರೆ.. ಆ ಬಳಿಕ ಬೆಳಗಾವಿ ನಗರದ ವಿವಿಧ ಮಹಾಪುರುಷರ ಮೂತ್ತಿಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಗೆ ಆಗಮಿಸಿ, ಚುನಾವಣಾ ಅಧಿಕಾರಿ ಆರ.ವೆಂಕಟೇಶ ಕುಮಾರ ಅವರಿಗೆ ನಾಮಪತ್ರ ಸಲ್ಲಿಸಿದರು.

ಲಖನ್ ಜಾರಕಿಹೊಳಿಗೆ ಯಾವುದೇ ಸಹೋದರರು ಸಾಥ್ ನೀಡಿದ್ದರೂ, ಸಹೋದರರ ಪರವಾಗಿ ವಿವೇಕರಾವ್ ಪಾಟೀಲ್, ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ ಜಾರಕಿಹೊಳಿ ಸೇರಿ ಜಾರಕಿಹೊಳಿ ಬ್ರದರ್ಸ್ ಆಪ್ತರು ಸಾಥ್ ನೀಡಿದ್ದು ಎದ್ದು ಕಾಣುತ್ತಿತ್ತು.


ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿ ಯಾಗಿ ಅಖಾಡಕ್ಕೆ ಇಳಿದಿದ್ದರಿಂದ ನಾಮಪತ್ರ ಸಲ್ಲಿಕೆ ದಿನವೇ ಅಪಾರ ಜನಶಕ್ತಿಯೊಂದಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡಿದರು..ಜಾರಕಿಹೊಳಿ ಬ್ರದರ್ಸ್ ಬೆಂಬಲಿತ ಸಾವಿರಾರು ಸದಸ್ಯರು, ಅಭಿಮಾನಿಗಳು ಆಗಮಿಸಿದ್ದರು. ಇತ್ತ ಕಾಂಗ್ರೆಸ ಅಭ್ಯರ್ಥಿ ಚನ್ನರಾಜ ಹಟ್ಟಿಹೋಳಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಂತೆ ಅತ್ತ ಲಖನ್ ಜಾರಕಿಹೊಳಿ ತಮ್ಮ‌ಅಪಾರ ಬೆಂಬಲಿಗರು ಮತ್ತು ಮತದಾರರೊಂದಿಗೆ ಆಗಮಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದರು. ಆ ಬಳಿಕ ಮಾತನಾಡಿದ ಲಖನ್ ಜಾರಕಿಹೊಳಿ, ನಮ್ಮ ಕಾರ್ಯಕರ್ತರು, ಅಭಿಮಾನಿಗಳು ಹೇಳಿದಕ್ಕೆ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿರುವೆ.

ಈ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇವೆ.ನಮಗೆ ಯಾರು ಪ್ರತಿಸ್ಪರ್ಧಿಗಳೇ ಇಲ್ಲ. ನಮ್ಮ ಸಹೋದರನ ಅವರ ಪಕ್ಷದ ಪರವಾಗಿ ಕೆಲಸ ಮಾಡ್ತಾರೆ. ಸತೀಶ್ ಅಣ್ಣಾ ನಮ್ಮ ಅಣ್ಣಾ ಅವರು , ನಾನು ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯುದಿಲ್ಲ ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!