ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೋಳಿ ಶಕ್ತಿ ಪ್ರದರ್ಶನ

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೋಳಿ ಶಕ್ತಿ ಪ್ರದರ್ಶನ
ಬೆಳಗಾವಿ: ಬೆಳಗಾವಿ ಎರಡು ಸ್ಥಾನಗಳ ಪರಿಷತ್ ಚುನಾವಣೆ ಗೆ ಇಂದು ಕಾಂಗ್ರೆಸ ಅಭ್ಯರ್ಥಿ ಚನ್ನರಾಜ ಹಟ್ಟಿಹೋಳಿ ಭರ್ಜರಿ ಶಕ್ತಿ ಪ್ರದೇಶನ ಮಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೋಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಪುತ್ರ ಮೃಣಾಲ್ ಸೇರಿ ಕುಟುಂಬ ಸದಸ್ಯರು ಸುಳೇಬಾವಿ ಗ್ರಾಮದೇವತೆ ಲಕ್ಷ್ಮಿ ದೇವಸ್ಥಾನ ದಲ್ಲಿ ಬಿ ಫಾರ್ಮ್ ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲದೇ ಇಂದು ಸಂಕಷ್ಟಿ ಚತುರ್ಥಿ ಇರುವುದರಿಂದ ಬೆಳಗಾವಿ ಹಿಂಡಲಗಾದ ಸುಪ್ರಸಿದ್ಧ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು…

ಆ ಬಳಿಕ ನೇರವಾಗಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಗೆ ತೆರಳಿದ ಕಾಂಗ್ರೆಸ ಅಭ್ಯರ್ಥಿ ಚನ್ನರಾಜ ಹಟ್ಟಿಹೋಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿಯರಾದ ಅಂಜಲಿ ನಿಂಬಾಳಕರ, ಲಕ್ಷ್ಮಿ ಹೆಬ್ಬಾಳಕರ, ಮಾಜಿ ಶಾಸಕ ಫಿರೋಜ್ ಸೇಠ್ ಸೇರಿ ಕೈ ನಾಯಕರೊಂದಿಗೆ ಚುನಾವಣಾ ಅಧಿಕಾರಿ ಆರ.ವೆಂಕಟೇಶ ಕುಮಾರ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಕೆ ಸಲ್ಲಿಸಿದ್ರು…

ಆ ಬಳಿಕ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚನ್ನರಾಜ ಹಟ್ಟಿಹೋಳಿ ಪರ ಕೈ ನಾಯಕರು ಶಕ್ತಿಪ್ರದರ್ಶನ ಮಾಡಿದ್ರು.. ನಗರದ ಸಿಪಿಎಡ್ ಮೈದಾನದಿಂದ ಚನ್ನಮ್ಮ ವೃತ್ತದ ವರೆಗೂ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಮೆರವಣಿಗೆ ಮೂಲಕ ಆಗಮಿಸಿ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ಗಳಿಗೆ ಶಕ್ತಿ ಪ್ರದರ್ಶನ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಈ ಪರಿಷತ್ ಚುನಾವಣೆ ನಡೆಯುತ್ತಿದೆ. ನನ್ನ ಸಹೋದರ , ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೋಳಿ ಗೆಲುವು ಖಚಿತ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಇನ್ನೂ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದೇ ಸೈಲೆಂಟ್ ಆಗಿಯೇ ರಾಜಕೀಯ ದಾಳ ಉರುಳಿಸಿದ್ದಾರೆ.

ಅತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಹ ಕಾಂಗ್ರೆಸ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ.ಈ ಚುನಾವಣೆಯಲ್ಲಿ ಕಾಂಗ್ರೆಸನಿಂದ ಒಂದೇ ಅಭ್ಯರ್ಥಿ, ಒಂದೇ ಮತ ಅಂತಾ ಹೇಳುವ ಮೂಲಕ ಕೈ ಅಭ್ಯರ್ಥಿ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ ಕಾಂಗ್ರೆಸ್ಸಿನ ಹಾಲಿ, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತಿ ಸದಸ್ಯರು ಕಾಂಗ್ರೆಸನ ಶಕ್ತಿ ಪ್ರದೇಶಕ್ಕೆ ಸಾಕ್ಷಿ ಆಗಿದ್ದು ವಿಶೇಷ.