ಇವರು ಶೋಲೆ ಚಿತ್ರದ ಜೈ…ವೀರು

ಬೆಳಗಾವಿಯ ಜೈ… ವೀರು…
ಬೆಳಗಾವಿ: ಇವರು ಕುಂದಾನಗರಿ ಬೆಳಗಾವಿಯ ಜೈ…. ವೀರು ನೋಡಿ… ಜೈ ವೀರು ಅಂದ ತಕ್ಷಣವೇ ನಮ್ಮ ಕಣ್ಣ ಮುಂದೆ ಬರೋದು ಭಾರತ ಚಿತ್ರರಂಗ ಇತಿಹಾಸದ ಸೂಪರ್ ಹಿಟ್ ಮೂವಿ ಶೋಲೆ ಅಲ್ವಾ..

ಅಲ್ಲಿ ಜೈ ಆಗಿ ಅಮಿತಾಭ್ ಬಚ್ಚನ್ ಹಾಗೂ ವೀರು ಆಗಿ ಧರ್ಮೇಂದ್ರ ನೆನಪಾಗ್ತಾರೆ.. ಹಾಗೇ ಈ ಜೈ…ವೀರು ನೋಡಿ. ಒಬ್ಬರೂ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ್ ಮತ್ತು ಇನ್ನೊಬ್ಬರು ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ.

ಈ ದೃಶ್ಯ ಸೆರೆ ಸಿಕ್ಕಿದ್ದು ಬೆಳಗಾವಿಯ ಚನ್ನಮ್ಮ ವೃತ್ತದ ಬಳಿಯ ಕನ್ನಡ ಸಾಹಿತ್ಯ ಭವನದಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತಿರುವ ಇಬ್ಬರೂ ಶಾಸಕರು. ಹಾಗೇ ಇವರಿಬ್ಬರ ಈ ಪೋಟೋ ಒಂದೇ ಸಾಕು ರಾಜಕಾರಣದಲ್ಲೂ ಹೀಗೂ ಸಿಂಪಲ್ ಆಗಿ ಇರೋ ಸ್ನೇಹಿತರು ಇರ್ತಾರೆ. ಇಂದು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಉಮೇದುವಾರಿಕೆ ಸಲ್ಲಿಕೆ ಗೆ ಮುನ್ನ ಕನ್ನಡ ಸಾಹಿತ್ಯ ಭವನದಲ್ಲಿ ಕೇಸರಿ ನಾಯಕರು ಸಮಾವೇಶ ಗೊಂಡಿದ್ದರು.

ಆಗ ಬಿಜೆಪಿ ಶಾಸಕರಾದ ಅಭಯ ಪಾಟೀಲ್ ಮತ್ತು ಅನಿಲ್ ಬೆನಕೆ ಹೀಗೆ ಸ್ನೇಹಿತರಂತೆ ಶಾಲಾ-ಕಾಲೇಜು ಮೆಟ್ಟಿಲುಗಳ ಮೇಲೆ ಕುಳಿತಂತೆ ಕುಳಿತು ರಾಜಕೀಯ ಚರ್ಚೆ ಯಲ್ಲಿ ಮಗ್ನವಾಗಿದ್ದರು.. ಇಬ್ಬರೂ ಶಾಸಕರು ಸ್ನೇಹಿತರಂತೆ ಕುಳಿತು ತಮ್ಮ ಚರ್ಚೆಯ ಲೋಕದಲ್ಲಿ ಕಳೆದು ಹೋದಾಗ ಸೆರೆ ಸಿಕ್ಕ ಅಪರೂಪದಲ್ಲಿ ಅಪರೂಪವಾದ ಪೋಟೋವಿದೆ. ಇನ್ನೂ ಇಬ್ಬರೂ ಕೈಯಲ್ಲಿ ಬಿಸಿ ಬಿಸಿ ಚಹಾ ಇದ್ದ ಕಪ್ ಹಿಡಿದಾಗ, ಚರ್ಚೆಯೂ ಸಹ ಅಷ್ಟೇ ಬಿಸಿ ಬಿಸಿಯಾಗಿಯೇ ಇರಬೇಕಲ್ವೇ…ಈಗ ಇಬ್ಬರೂ ಶಾಸಕರ ಪೋಟೋ ಸಿಕ್ಕಾಪಟೆ ವೈರಲ್ ಆಗುತ್ತಿದೆ…ಹಾಗೇ ನೋಡಿದ್ರೆ ಬೆಳಗಾವಿಯ ಈ ಜೈ…ವೀರು ತಲೆ ಕೆಡಿಸಿಕೊಂಡಿದ್ದ ಯಾವ ಗಬ್ಬರ್ ಬಗ್ಗೆ ಅನ್ನೋದನ್ನ ಅವರೇ ಹೇಳಬೇಕು..