ಮಹಾಂತೇಶ ಕವಟಗಿಮಠಗೆ ಮೊದಲನೇ ಪ್ರಾಶಸ್ತ್ಯ ಒಂದೇ ಮತ ಹಾಕಿ ಗೆಲ್ಲಿಸಿ:ಯಡಿಯೂರಪ್ಪ

ಮಹಾಂತೇಶ ಕವಟಗಿಮಠಗೆ ಒಂದೇ ಮತ ಹಾಕಿ:ಬಿ.ಎಸ್.ಯಡಿಯೂರಪ್ಪ
ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರವಾಗಿ ಒಂದೇ ಮತವನ್ನ ಹಾಕಿ ಗೆಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಭಾನುವಾರ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ಬಿಜೆಪಿ ಜನಸ್ವರಾಜ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ 30 ಜಿಲ್ಲೆಗಳಲ್ಲಿ ನಮ್ಮ ಮಂತ್ರಿಗಳು ಜನಸ್ವರಾಜ್ ಸಮಾವೇಶ ಮಾಡ್ತಿದ್ದು, ಬೆಳಗಾವಿಯಲ್ಲಿ ಮುಕ್ತಾಯವಾಗ್ತಿದೆ. ಒಂದು ಕೋಟಿವರೆಗೂ ಗ್ರಾ.ಪಂ.ಗೆ ಅನುದಾನ ಕೊಡಲು ಶುರು ಮಾಡಿದ್ದೇವೆ. ಮಾದರಿ ಗ್ರಾಮ ಪಂಚಾಯತಿ ಮಾಡುವ ಅವಕಾಶ ನಿಮಗಿದೆ. ಹಣಬಲ, ಹೆಂಡಬಲ, ತೋಲ್ಬಲ,ಅಧಿಕಾರ ಬಲ, ಜಾತಿ ವಿಷಬೀಜ ಬಿತ್ತಿ ಕಾಂಗ್ರೆಸ್ ಚುನಾವಣೆ ಮಾಡುವ ಕಾಲ ಒಂದಿತ್ತು.

ಈಗ ಸ್ವಾರ್ಥಕ್ಕೆ ಕಾಂಗ್ರೆಸ್ ರಾಜಕಾರಣ ಮಾಡಿದ ಪರಿಣಾಮ ನರೇಂದ್ರ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಇವತ್ತು ಸ್ವಲ್ಪ ಕರ್ನಾಟಕದಲ್ಲಿ ಉಸಿರಾಡುತ್ತಿದ್ದಾರೆ. ಈ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯಾದ್ಯಂತ ಸಂಚರಿಸಿ ಸಂಘಟನೆ ಮಾಡ್ತಿನಿ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಮುಂದಿನ ವಿಧಾನಸಭೆ ಚುನಾವಣೆ ನಮಗೆ ಸವಾಲಾಗಿದೆ. ಮೊದಲ ಪ್ರಾಶಸ್ತ್ಯ ಮತ ಒಂದೇ ಒಂದು ನೀಡಿ, ಎರಡನೇ ಬಗ್ಗೆ ಯೋಚನೆ ಮಾಡಬೇಡಿ. ಮೊದಲನೇ ಸುತ್ತಿನಲ್ಲಿ ಗೆಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ ವಿರುದ್ಧ ಯಡಿಯೂರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.