ಎಲ್ಲರ ಹೃದಯ ಗೆದ್ದ ಬೆಳಗಾವಿ ಎಂಜಿನಿಯರಿಂಗ್ ಸ್ನೇಹಿತರು

ಬೆಳಗಾವಿ: ಇವರು ಸ್ನೇಹಿತರು ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳು.. ವೀಕೆಂಡ್ ಸಂಡೆಯನ್ನ ಈ ಮೂವರು ಸ್ನೇಹಿತರು ಕಲರಫುಲ್ ಮಾಡಿದ್ದಾರೆ.. ಈ ಮೂರು ವಿದ್ಯಾರ್ಥಿ ಸ್ನೇಹಿತರು ಹಸಿದವರ ಹೊಟ್ಟೆ ಅನ್ನವನ್ನ ನೀಡುವ ಕಾರ್ಯವನ್ನ ಸದ್ದಿಲ್ಲದೆ ಮಾಡಿದ್ದಾರೆ.

ಬೆಳಗಾವಿ ನಿವಾಸಿಗಳಾದ ರುತುಜಾ ಪಾಟೀಲ್, ವೈಷ್ಣವಿ ಮೊಕಾಶಿ ಹಾಗೂ ಪ್ರಣವ ಪದ್ಮನ್ನವರ ಸ್ನೇಹಿತರೆ ಈ ಸಮಾಜಮುಖಿ ಕಾರ್ಯವನ್ನ ಮಾಡಿದ್ದಾರೆ.. ಈ ಮೂರು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಓದುತ್ತಿದ್ದಾರೆ..ಎಂಜಿನಿಯರಿಂಗ್ ಅಂದಮೇಲೆ ವೀಕೆಂಡ್ ಬಂದ್ರೆ ಸಾಕು ಪಿಕ್ನಿಕ್, ಪಾರ್ಟಿ ಹಾಗೂ ಮೂವಿ ಅಂತಾ ಲೈಫ್ ಅನ್ನ ಮೋಜು ಮಸ್ತಿಯಲ್ಲಿ ಕಳೆಯುವುದು ಸಾಮಾನ್ಯ. ಆದ್ರೆ ಈ ಬೆಳಗಾವಿಯ ಮೂವರು ಸ್ನೇಹಿತರು ಕಾರಿನಲ್ಲಿ ತಮ್ಮ ಮನೆಯಲ್ಲಿ ಮಾಡಿದ್ದ ಆಹಾರವನ್ನ ತೆಗೆದುಕೊಂಡು ಹೋಗಿ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯವನ್ನ ಮಾಡಿದ್ದಾರೆ.

ಬೆಳಗಾವಿ ಗಣೇಶಪುರ, ಹಿಂಡಲಗಾ ಸುತ್ತಲಿನ ಮಕ್ಕಳಿಗೆ ಮನೆಯಿಂದ ತಂದ ಆಹಾರವನ್ನ ನೀಡಿ ಅವರ ಹಸಿವನ್ನ ತನಿಸುವ ಕಾರ್ಯವನ್ನ ಮಾಡಿದ್ದಾರೆ. ಇಂತಹ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಮ್ಮ ಬೆಳಗಾವಿಯವರು, ಸಮಾಜಮುಖಿ ಕಾರ್ಯವನ್ನ ಯಾವುದೇ ಪ್ರಚಾರವಿದಲ್ಲೇ ಮಾಡುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಕೊಟ್ಟ ತಂದೆ ತಾಯಿ ಹೆಮ್ಮೆಯ ಪಡುವ ಕಾರ್ಯವನ್ನ ಇವರು ಮಾಡಿದ್ದಾರೆ. ಈ ವಿದ್ಯಾರ್ಥಿ ಸ್ನೇಹಿತರಿಗೆ ನಮ್ಮದೊಂದು ಸಲಾಂ