ಬೆಳಗಾವಿಗರಿಗೆ ಗುಡ್ ನ್ಯೂಸ್ ಕೊಟ್ಟ ಶಾಸಕ ಅನಿಲ್ ಬೆನಕೆ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿ ಜನತೆಗೆ ಬಿಜೆಪಿ ಶಾಸಕ ಅನಿಲ್ ಬೆನಕೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದಶಕಗಳಿಂದ ನೆನೆಗುದ್ದಿಗೆ ಬಿದ್ದಿದ್ದ 24×7 ಕುಡಿಯುವ ನೀರು ಪೂರೈಸುವ ಬಿಗ್ ಪ್ರೊಜೆಕ್ಟ್ ಕಾಮಗಾರಿಗೆ ಚಾಲನೆ ಸಿಕ್ಕಿದೆ
.

ಬುಧವಾರ ನಗರದ ಬಸವನಕೊಳ್ಳದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆಗೆ ಸಂಸದೆ ಮಂಗಲ್ ಅಂಗಡಿ, ಶಾಸಕ ಅನಿಲ್ ಬೆನಕೆ, ಪಾಲಿಕೆ ಕಮೀಷನರ್ ರುದ್ರೇಶ ಗಾಳಿ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ರು.
ಒಂದು ದಶಕದಿಂದ ಬೆಳಗಾವಿ ಮಹಾನಗರ ಜನತೆ ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಜಾತಕ ಪಕ್ಷೀಯಂತೆ ಕಾಯುತ್ತಿದ್ದರು. ಆದ್ರೆ ಈಗ ಎಲ್ಲಾ ವಿಘ್ನಗಳ ನಿವಾರಣೆ ಬಳಿಕ 804 ಕೋಟಿ ರುಪಾಯಿ ಮೌಲ್ಯದ ಕಾಮಗಾರಿ ಗೆ ಚಾಲನೆ ಸಿಕ್ಕಿದೆ.

ಈವರೆಗೂ ಬರೀ ಬೆಳಗಾವಿ ನಗರದ 58 ವಾರ್ಡುಗಳಲ್ಲಿ 10 ವಾರ್ಡುಗಳಲ್ಲಿ ಮಾತ್ರ ನಿರಂತರ ಕುಡಿಯುವ ನೀರಿನ ಯೋಜನೆ ಪ್ರಾಯೋಗಿಕ ವಾಗಿ ಅನುಷ್ಠಾನಗೊಳಿಸಲಾಗಿತ್ತು.
ಈಗ ಉಳಿದ ಎಲ್ಲಾ ವಾರ್ಡುಗಳಿಗೆ ನಿರಂತರ ಕುಡಿಯುವ ನೀರು ಪೂರೈಸುವ ಕಾಮಗಾರಿಯನ್ನ L&T ಕಂಪನಿ ಗೆ ನೀಡಲಾಗಿದೆ. ಸದ್ಯ ಬಸವನಕೋಳ್ಳದಲ್ಲಿ ಹೊಸದಾಗಿ 31 ಎಂಎಲಡಿ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಕಾಮಗಾರಿ ಗೆ ಚಾಲನೆ ಸಿಕ್ಕಿದೆ.

ಇದರಿಂದ 2053 ವರ್ಷದ ವರೆಗೂ 9.67 ಲಕ್ಷ ಜನರಿಗೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಜನಸಂಖ್ಯೆ ಅನುಸಾರವಾಗಿ ಪ್ರತಿಯೊಬ್ಬರಿಗೂ 135 ಲೀ. ನೀರು ಬಳಕೆಗೆ ಅನುಕೂಲವಾಗಲಿದೆ.
ಈ ಬಿಗ್ ಪ್ರೊಜೆಕ್ಟ್ ವಿಶ್ವ ಬ್ಯಾಂಕ್ ನೆರವಿನ ಮೇರೆಗೆ ಕಾರ್ಯರೂಪಕ್ಕೆ ಬರುತ್ತಿದೆ. ಇದರಿಂದ ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿ ಗೆ ಪೂರಕವಾಗಿದೆ. ಇನ್ನೂ ಈ ನಿರಂತರ ಯೋಜನೆಯಿಂದ ಬೆಳಗಾವಿ ಮಹಾನಗರ ದಲ್ಲಿ ಈಗೀರುವ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನಿವಾರಣೆ ಆಗಿದೆ. ಇದರೊಂದಿಗೆ ದಿನವೂ ಪೋಲಾಗುತ್ತಿದ್ದ ನೀರು ಉಳಿತಾಯವಾಗಲಿದೆ. ಮುಂದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಯನ್ನು ಬೆಳಗಾವಿ ಜನತೆ ಎದುರಿಸಬಾರದೆಂಬ ಕಳಕಳಿಯಿಂದ ಈ ಯೋಜನೆ ಗೆ ಚಾಲನೆ ನೀಡಲಾಗಿದೆ.