ಇದೇ ಕಾರಣಕ್ಕೆ ಬೆಳಗಾವಿಗರಿಗೆ ಡಿಸಿಪಿ ವಿಕ್ರಮ್ ಆಮ್ಟೆ ಇಷ್ಟವಾಗೋದು

ಇದೇ ಕಾರಣಕ್ಕೆ ಬೆಳಗಾವಿಗರಿಗೆ ಡಿಸಿಪಿ ವಿಕ್ರಮ್ ಆಮ್ಟೆ ಇಷ್ಟವಾಗೋದು
ಬೆಳಗಾವಿ: ಬೆಳಗಾವಿ ಡಿಸಿಪಿ ವಿಕ್ರಮ್ ಆಮ್ಟೆ ಬರ್ಥ್ ಡೇ ಗೆ ಸರ್ಪ್ರೈಸ್ ಎಂಟ್ರಿಕೊಟ್ಟು ಈಗ ಎಲ್ಲರ ಮನಸ್ಸು ಗೆದ್ದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸಿ ನಿವೃತ್ತಯಾದ 92 ವರ್ಷದ ಪ್ರಾಯದ ಹಿರಿಯ ಜೀವಿಯ ಜನುಮ ದಿನಕ್ಕೆ ಸ್ವಯಂ ಡಿಸಿಪಿ ವಿಕ್ರಮ್ ಆಮ್ಟೆ ಸಾಹೇಬರು ಸಿಂಪಲ್ ಆಗಿ, ತಮ್ಮ ಮಗನೊಂದಿಗೆ ಅವರ ಮನೆಗೆ ಹೋಗಿ ಅವರ ಜನ್ಮದಿನದ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಬೆಳಗಾವಿಯ ಸದಾಶಿವ ನಗರದ ಮಹಾದೇವ ಈಶ್ವರ ಜಾಧವ ಅವರ ಜನ್ಮದಿನ. ಪೊಲೀಸ್ ಇಲಾಖೆ ಯಲ್ಲಿ ಸೇವೆ ಸಲ್ಲಿಸಿದ ನಿವೃತ್ತಿ ಪಿಎಸ್ಐ ಜಾಧವ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಿಂಪಲ್ ಆಗಿ ಜನ್ಮದಿನ ಆಚರಿಸಿಕೊಂಡರು.

ಒಬ್ಬ ಪೊಲೀಸ್ ಇಲಾಖೆ ನಿವೃತ್ತ ಅಧಿಕಾರಿ, ಹಿರಿಯ ಜೀವಿಯ ಜನ್ಮದ ಇರುವುದು ಗೊತ್ತಾಗುತ್ತಿದ್ದಂತೆ ಡಿಸಿಪಿ ವಿಕ್ರಮ್ ಆಮ್ಟೆ ಅವರು ನೇರವಾಗಿ ಅವರ ಮನೆ ಹುಡುಕಿಕೊಂಡು ಅವರ ಮನೆಗೆ ಹೋಗಿದ್ದಾರೆ. ಸರ್ಪ್ರೈಸ್ ಆಗಿಯೇ ಅವರ ಕುಟುಂಬ ಸದಸ್ಯರೊಂದಿಗೆ ಕೇಕ್ ಕಟ್ ಮಾಡಿ, ಅವರಿಗೆ ಕೇಕ್ ತಿನಿಸಿ ತಮ್ಮ ಸರಳತೆ, ಹೃದಯ ವೈಶಾಲ್ಯತೆಯನ್ನ ಮೆರೆದಿದ್ದಾರೆ.

ವಿಕ್ರಮ್ ಆಮ್ಟೆ ಬೆಳಗಾವಿ ಉಪ ಪೊಲೀಸ್ ಆಯುಕ್ತರ ಆಗಿದ್ದರೂ, ತುಂಬಾ ಸರಳ ಮತ್ತು ಭಾವನಾತ್ಮಕ ಸ್ನೆಹಜೀವಿ ಆಗಿದ್ದಾರೆ.. ತಮ್ಮದೇ ಇಲಾಖೆ ನಿವೃತ್ತ ಪೊಲೀಸ್ ಅಧಿಕಾರಿ ಮನೆಗೆ ಹೋಗಿ ಶುಭಕೋರುವ ಮೂಲಕ ಅವರ ನಿಸ್ವಾರ್ಥ ಸೇವೆಗೊಂದು ಸೆಲ್ಯೂಟ್ ಹೊಡೆದಿದ್ದಾರೆ. ಇದೇ ಕಾರಣ ಕ್ಕೆ ವಿಕ್ರಮ್ ಆಮ್ಟೆ ಸಾಹೇಬರು ಬೆಳಗಾವಿಗರಿಗೆ ಇಷ್ಟವಾಗ್ತಾರೆ.