ಗುಡ್ ನ್ಯೂಸ್

ಅನಿಲ್ ಬೆನಕೆ ಡೆವಲಪ್ಮೆಂಟ್ ಕ್ಲಾಸ್ಗೆ ನಗರ ಸೇವಕರ ಫುಲ್ ಹಾಜರಾತಿ…!

ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಇವತ್ತು ಮೇಷ್ಟ್ರು ಆಗಿದ್ದರು. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ನೂತನವಾಗಿ ಗೆದ್ದು ಬಂದ ಎಲ್ಲಾ ನಗರ ಸೇವಕರಿಗೆ ಅಭಿವೃದ್ಧಿ ಜೊತೆ ಜೊತೆಗೆ ಜನಸೇವೆ ಪಾಠವನ್ನ ಮಾಡಿದ್ರು. ಇನ್ನೂ ಶಾಸಕ ಅನಿಲ್ ಬೆನಕೆ ಡೆವಲಪ್ಮೆಂಟ್ ಕ್ಲಾಸ್ಗೆ ನಗರ ಸೇವಕರ ಫುಲ್ ಹಾಜರಾತಿ.

ಸಂಡೇ ಎಲ್ಲರೂ ವೀಕೆಂಡ್ ಮೋಜು, ಮಸ್ತಿ ಹಾಗೂ ಫ್ಯಾಮಿಲಿ ಜೊತೆಗೆ ಪಿಕ್ನಿಕ್ ಮೂಡನಲ್ಲಿ ಇರತ್ತಾರೆ.. ಆದ್ರೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ‌ ಅನಿಲ್ ಬೆನಕೆ ಮಾತ್ರ ಟೀಚರ್ ಆಗಿ ಡೆವಲಪ್ಮೆಂಟ್ ಮಂತ್ರ ಹೇಳಿದ್ರು ನೋಡಿ.

ಇಂದು ಬೆಳಗಾವಿ ಮಹಾನಗರ ಪಾಲಿಕೆ ಕೌನ್ಸಿಲ್ ಹಾಲ್ ನಲ್ಲಿ ಅನಿಲ್ ಬೆನಕೆ ಪಾಲಿಕೆ ನೂತನ ಸದಸ್ಯರ ಸಭೆ ನಡೆಸಿದರು. ಈ ಸಭೆಗೆ ಉತ್ತರ ಮತಕ್ಷೇತ್ರದ ಬಿಜೆಪಿ, ಕಾಂಗ್ರೆಸ ಮತ್ತು ಪಕ್ಷೇತರ ಆಗಿ ಗೆದ್ದು ಬಂದಿರುವ ಎಲ್ಲಾ ಸದಸ್ಯರನ್ನ ಖುದ್ಧಾಗಿ ಆಹ್ವಾನ ನೀಡಿ ಸಭೆಗೆ ಹಾಜರಾಗುವಂತೆ ಕೋರಿಕೊಂಡಿದ್ದರು. ಅದರಂತೆ ಇಂದು ಅನಿಲ್ ಬೆನಕೆ ಕರೆದ ಮೊದಲ ಸಭೆಯಲ್ಲಿ ಬಹುತೇಕ ಎಲ್ಲಾ ಸದಸ್ಯರು ಹಾಜರಾಗಿದ್ದರು.

ಸಭೆಯಲ್ಲಿ ಎಲ್ಲಾ ಸದಸ್ಯರು ಪರಸ್ಪರ ಪರಿಚಯ ಮಾಡಿಕೊಂಡರು..ಆ ಬಳಿಕ ಸಭೆಗೆ ಹಾಜರಾಗಿದ್ದ ಸದಸ್ಯರಿಗೆ ಅಭಿವೃದ್ಧಿ ಮತ್ತು ಜನಸೇವೆ ಪಾಠವನ್ನ ಮಾಡಿದ್ರು..ಬೆಳಗಾವಿ ಉತ್ತರ ಮತಕ್ಷೇತ್ರದ ಅಭಿವೃದ್ಧಿ ಯಲ್ಲಿ ನೂತನ ನಗರ ಸೇವಕರ ಪಾತ್ರವೇನು ಹಾಗೂ ಪ್ರತಿಯೊಬ್ಬ ಸದಸ್ಯರು ತಮ್ಮ ತಮ್ಮ ವಾರ್ಡುಗಳಲ್ಲಿ ಹೇಗೆ ಕೆಲಸ ಮಾಡಬೇಕು. ವಾರ್ಡುಗಳಲ್ಲಿ ಇರುವಂತಹ ಕುಡಿಯುವ ನೀರಿನ ಸಮಸ್ಯೆ, ರಸ್ತೆ ನಿರ್ಮಾಣ, ಉದ್ಯಾನ ವನ ನಿರ್ಮಾಣ, ಬೀದಿ ದೀಪ ಅಳವಡಿಕೆ, ಒಳ ಚರಂಡಿಗಳ ನಿರ್ಮಾಣ ಹಾಗೂ ವಾರ್ಡುಗಳಲ್ಲಿ ಮಠ, ಮಂದಿರ, ಚರ್ಚ್, ಮಸೀದಿ ಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ರು..

ಬೆಳಗಾವಿ ಮತಕ್ಷೇತ್ರದ ನೂತನ ಸದಸ್ಯರನ್ನ ಪಕ್ಷಾತೀತವಾಗಿ ಟೀಮ್ ಅನಿಲ್ ಬೆನಕೆ ಅನ್ನೋ ತಂಡದೊಂದಿಗೆ ಅಭಿವೃದ್ಧಿ ಗೆ ಒತ್ತು ನೀಡಲಾಗುತ್ತಿದೆ. ಆಯಾ ವಾರ್ಡಿನ ಸದಸ್ಯರಿಗೆ ಅಭಿವೃದ್ಧಿ ಸೂತ್ರದ ಟಾಸ್ಕ್ ನೀಡಿದ್ದಾರೆ. ಜನರ ಮೂಲಭೂತ ಸಮಸ್ಯೆ, ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳ ಪಟ್ಟಿಯನ್ನ ಮಾಡಿ ಎರಡು ದಿನದಲ್ಲಿ ಶಾಸಕರಿಗೆ ನೀಡುವಂತೆ ಹೇಳಿದ್ದಾರೆ.

ಪಾಲಿಕೆ ಸದಸ್ಯರು ನೀಡಿದ ಮಾಹಿತಿಯನ್ನ ಆಧರಿಸಿ ಅಧಿಕಾರ ಜೊತೆಗೆ ಆ ವಾರ್ಡುಗಳಿಗೆ ಶಾಸಕ ಅನಿಲ್ ಬೆನಕೆ ಖುದ್ದು ಭೇಟಿ ನೀಡಲಿದ್ದಾರೆ..ಸ್ಥಳದಲ್ಲಿಯೇ ಅಧಿಕಾರಿಗಳ ಮೂಲಕ ಸಮಸ್ಯೆ ಪರಿಹರಿಸುವ ಕಾರ್ಯವನ್ನ ಮಾಡಲಿದ್ದಾರೆ. ಇಷ್ಟೇ ಅಲ್ಲದೇ ಉತ್ತರ ಮತಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳು, ಟೆಂಡರ್ ಹಂತದಲ್ಲಿ ಇರುವ ಕಾಮಗಾರಿ ಗಳ ವಿವರಗಳನ್ನ ಆಯಾ ಪಾಲಿಕೆ ಸದಸ್ಯರಿಗೆ ನೀಡುವುದಾಗಿ ಶಾಸಕ ಅನಿಲ್ ಬೆನಕೆ ಹೇಳಿದ್ದಾರೆ. ಇದರ ಜೊತೆಗೆ ಆಯಾ ವಾರ್ಡುಗಳಲ್ಲಿ ಜನರ ಬೇಡಿಕೆ ಗೆ ಅನುಗುಣವಾಗಿ ಅಭಿವೃದ್ಧಿ ಕೆಲಸಗಳನ್ನ ಎಲ್ಲರೂ ಒಟ್ಟಾಗಿ ಮಾಡೋಣಾ ಎಂದು ನೂತನ ಸದಸ್ಯರಿಗೆ ಶಾಸಕ ಅನಿಲ್ ಬೆನಕೆ ಹೊಸ ಸದಸ್ಯರ ಜವಾಬ್ದಾರಿ ಮತ್ತು ಬೆಳಗಾವಿ ಅಭಿವೃದ್ಧಿಯಲ್ಲಿ ಅವರ ಪಾತ್ರದ ಬಗ್ಗೆ ತಿಳಿ ಹೇಳಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!