ಶ್ರದ್ಧಾ ಅಂಗಡಿಗೆ ತಂದೆಯೇ ರಾಜಕೀಯ ಗುರು…

ರಾಜಕೀಯ ಎಂಟ್ರಿಕೊಟ್ಟ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ; ತಂದೆಯೇ ರಾಜಕೀಯ ಗುರು
ಬೆಳಗಾವಿ: ದಿವಂಗತ ಕೇಂದ್ರ ಸಚಿವ ಸುರೇಶ್ ಅಂಗಡಿ ಕಿರಿಯ ಸುಪುತ್ರಿ ಶ್ರದ್ಧಾ ರಾಜಕೀಯ ಎಂಟ್ರಿಕೊಟ್ಟಿದ್ದಾರೆ.. ಸದ್ದಿಲ್ಲದೆ ಶ್ರದ್ಧಾ ಅಂಗಡಿ ಶೆಟ್ಟರ್ ಬೆಳಗಾವಿ ಲೋಕಸಭೆ ವ್ಯಾಪ್ತಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ.

ಇನ್ನೂ ತಂದೆಯಂತೆ ಪುತ್ರಿ ಶ್ರದ್ಧಾ ಈಗ ಬೆಳಗಾವಿ, ಬೈಲಹೊಂಗಲ, ರಾಮದುರ್ಗ, ಸವದತ್ತಿ, ಗೋಕಾಕ ಹೀಗೆ 8 ವಿಧಾನಸಭಾ ಮತಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಶ್ರದ್ಧಾ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸೊಸೆಯಾದ್ರು..ಬೆಳಗಾವಿ ಲೋಕಸಭೆ ವ್ಯಾಪ್ತಿಯಲ್ಲಿ ರಾಜಕೀಯವಾಗಿ ಆಕ್ಟಿವ್ ಆಗಿದ್ದಾರೆ. ಲೋಕಸಭೆ ಉಪ ಚುನಾವಣೆ ಯಲ್ಲಿ ಅಂಗಡಿ ಸಹೋದರಿಯರು ಸ್ಫೂರ್ತಿ, ಶ್ರದ್ಧಾ ತಾಯಿ ಪರ ಭರ್ಜರಿ ಪ್ರಚಾರ ನಡೆಸಿದ್ರು..ಆ ನಂತರ ಎದುರಾದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ತಾಯಿಯೊಂದಿಗೆ ಅಂಗಡಿ ಸಹೋದರಿಯರು ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡು ಗಮನ ಸೆಳೆದಿದ್ದರು.

ಈಗ ಸುರೇಶ ಅಂಗಡಿ ಪುತ್ರಿಯರಾದ ಸ್ಫೂರ್ತಿ ಪಾಟೀಲ್ ಮತ್ತು ಶ್ರದ್ಧಾ ಶೆಟ್ಟರ್ ತಂದೆ ಬಿಸಿನೆಸ್ ಮತ್ತು ಶಿಕ್ಷಣ ಸಂಸ್ಥೆ ಜವಾಬ್ದಾರಿ ಜೊತೆ ಜೊತೆಗೆ ಸುರೇಶ್ ಅಂಗಡಿ ಅವರಂತೆಯೇ ಜನರ ಮಧ್ಯೆ ಹೋಗಿ ಬೇರೆಯುವ ಮತ್ತು ಅವರ ಸಮಸ್ಯೆಗಳನ್ನ ಪರಿಹರಿಸುವ ಕಾರ್ಯವನ್ನ ತೆರೆಮರೆಯಲ್ಲಿ ಮಾಡುತ್ತಿದ್ದಾರೆ.

ಈಗಿಂದಲೇ ಅಂಗಡಿ ಸಹೋದರಿಯರು ತಂದೆ ರಾಜಕೀಯ ಕೋಟೆಯನ್ನ ಹಾಗೇಯೇ ಇನ್ನಷ್ಟು ಭದ್ರಗೊಳಿಸುವ ಕಾರ್ಯದಲ್ಲಿ ಮಗ್ನವಾಗಿದ್ದಾರೆ. ಇದೇ ಕಾರಣಕ್ಕಾಗಿ ತಾಯಿ, ಸಂಸದೆ ಮಂಗಲ್ ಅಂಗಡಿ ಅವರಗಿಂತಲೂ ಅವರ ಪುತ್ರಿಯರ ಹವಾ ಬೆಳಗಾವಿ ಲೋಕಸಭೆ ಯಲ್ಲಿ ಜೋರಾಗಿದೆ. ಇದೇ ಕಾರಣಕ್ಕೆ ದಸರಾ ಹಬ್ಬದ ಪ್ರಯುಕ್ತ ನಡೆದ ದುರ್ಗಾ ಮಾತಾ ದೌಡ್ ಕಾರ್ಯಕ್ರಮದಲ್ಲಿ ಶ್ರದ್ಧಾ ಶೆಟ್ಟರ್ ಎಡಬಿಡದೆ ಪಾಲ್ಗೊಳ್ಳುತ್ತಿದ್ದಾರೆ..


ಬೆಳಗಾವಿ ಲೋಕಸಭೆ ವ್ಯಾಪ್ತಿಯಲ್ಲಿ ಒಂದಿಲ್ಲೊಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಶ್ರದ್ಧಾ ಕಾಣಿಸಿಕೊಳ್ಳುತ್ತಿದ್ದಾರೆ..ಇಡೀ ಕಾರ್ಯಕ್ರಮದಲ್ಲಿ ಶ್ರದ್ಧಾ ಶೆಟ್ಟರ್ ಅವರೇ ಯುವ ನಾಯಕಿಯಾಗಿ, ರಾಜಕೀಯ ಕೇಂದ್ರ ಬಿಂದುವಾಗಿ ಗಮನ ಸೆಳೆಯುತ್ತಿದ್ದಾರೆ.


ಇದೇ ಕಾರಣಕ್ಕೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶ್ರದ್ಧಾ ಶೆಟ್ಟರ್ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಗಿರಕಿ ಹೊಡೆಯುತ್ತಿವೆ.. ಸದ್ಯ ತಂದೆಯ ಕನಸಿನ ಯೋಜನೆಗಳು, ಜನರಿಗೆ ಕೊಟ್ಟ ಭರವಸೆ ಗಳನ್ನ ಈಡೇರಿಸುವ ಕಾಯಕದಲ್ಲಿ ಶ್ರದ್ಧಾ ತಲ್ಲೀನರಾಗಿದ್ದಾರೆ..