RJ ಕೇದಾರನಾಥ ದರ್ಶನದ ರಹಸ್ಯ

ಬೆಳಗಾವಿ: ಗೋಕಾಕ ಸಾಹುಕಾರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈಗ ಮತ್ತೆ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ..ಕೇದಾರನಾಥ ದರ್ಶನ ಮಾಡಿರುವ ರಮೇಶ್ ಜಾರಕಿಹೊಳಿ ಬೋಮ್ಮಾಯಿ ಸಂಪುಟದಲ್ಲಿ ಮಂತ್ರಿ ಆಗೋದು ಫಿಕ್ಸ್ ಆಗಿದೆ ಅಂತಾಯ ಹೇಳಲಾಗುತ್ತಿದೆ.

ಸದ್ಯ ರಾಜ್ಯ ರಾಜಕಾರಣದಲ್ಲಿ ರಮೇಶ್ ಜಾರಕಿಹೊಳಿ ನಿಗೂಢ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾಕೆಂದರೆ ಮಂತ್ರಿಗಿರಿಗಾಗಿ ಕೇದಾರನಾಥನ ಮೊರೆ ಹೋಗಿದ್ದಾರೆ ಮಾಜಿ ಸಚಿವ ರಮೇಶ ಜಾರಕಿಹೊಳಿ. ಕೇದಾರನಾಥನ ದರ್ಶನದ ಮೂಲಕ ಆದಷ್ಟು ಬೇಗ್ ಎಲ್ಲಾ ಸಂಕಷ್ಟ ದೂರವಾಗಿ ಮಂತ್ರಿಗಿರಿ ಸಿಗಲೆಂದು ಪ್ರಾರ್ಥನೆ ಮಾಡಿದ್ದಾರೆ. ರಮೇಶ ಜಾರಕಿಹೊಳಿಗೆ ಪುತ್ರ ಅಮರನಾಥ ಜಾರಕಿಹೊಳಿ ಹಾಗೂ ಅಳಿಯ ಅಂಬಿರಾವ್ ಸಾಥ್ ನೀಡಿದ್ದಾರೆ.

ಉತ್ತರಾಖಂಡ ರಾಜ್ಯದಲ್ಲಿರುವ ಕೇದಾರನಾಥಗೆ ರಮೇಶ್ ಜಾರಕಿಹೊಳಿ ಪ್ರತಿ ವರ್ಷವೂ ಹೋಗ್ತಾರೆ. ಅದರಲ್ಲೂ ಉತ್ತರ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕೇದಾರನಾಥಗೆ ಹೆಲಿಕಾಪ್ಟರ್ ಮೂಲಕ ತೆರಳಿ ದರ್ಶನ ಪಡೆದುಕೊಂಡಿದ್ದಾರೆ ಆರಜೆ.

ಈ ಹಿಂದೆಯೂ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯಾಗುವ ಮುನ್ನ ಕೇದಾರನಾಥನ ದರ್ಶನ ಪಡೆದಿದ್ದ ರಮೇಶ ಜಾರಕಿಹೊಳಿ. ಈಗ ಮತ್ತೆ ಕೇದಾರನಾಥನ ದರ್ಶನ ಬಳಿಕ ದೆಹಲಿಯಲ್ಲಿ ಬೀಡು ಬಿಟ್ಟಿರುವ ಗೋಕಾಕ ಸಾಹುಕಾರ್. ಇನ್ನೂ ದೆಹಲಿಯಲ್ಲಿ ಇದ್ದುಕೊಂಡೆ
ರಮೇಶ ಸಾಹುಕಾರ ತಮಗೂ ಮತ್ತು ಆಪ್ತರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..ರಮೇಶ್ ಜಾರಕಿಹೊಳಿಯವರ ರಾಜಕೀಯ ನಡೆ ರಹಸ್ಯವನ್ನ ಬಗ್ಗೆ ಸ್ವಯಂ ಅವರೇ ಬಿಚ್ಚಿಡಬೇಕಿದೆ.