ಜಿಲ್ಲಾ
ಬೆಳಗಾವಿ ಉತ್ತರದಲ್ಲಿ ಶಾಸಕ ಅನಿಲ್ ಬೆನಕೆಯಿಂದ ಮುಂದೊರೆದ ಅಭಿವೃದ್ಧಿ ಪರ್ವ

ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಶಾಸಕ ಅನಿಲ್ ಬೆನಕೆ ಅವರಿಂದ ಮುಂದೊರೆದ ಅಭಿವೃದ್ಧಿ ಪರ್ವ. ಮಂಗಳವಾರ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ 4 ಕೋಟಿ 50 ಲಕ್ಷ ರುಪಾಯಿ ಅನುದಾನ ದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅನಿಲ್ ಬೆನಕೆ ಚಾಲನೆ ನೀಡಿದ್ರು.

ಬೆಳಗಾವಿ ಉತ್ತರ ಮತಕ್ಷೇತ್ರದ ಜನತೆಗೆ ಕೊಟ್ಟ ಭರವಸೆಯಂತೆ ವಂಟಮೂರಿ ಕಾಲೋನಿ, ಮುತ್ಯಾನಟ್ಟಿ, ಯಮನಾಪುರ, ಬಸವನಕೊಳ್ಳದಲ್ಲಿ ಏಕಕಾಲಕ್ಕೆ ಸಿಸಿ ರಸ್ತೆ ಮತ್ತು ಡ್ರೇನೆಜ್ ಕಾಮಗಾರಿ ಗೆ ಚಾಲನೆ ನೀಡಿದ್ರು.

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯ ಹಾಗೂ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ..ಡಾಂಬರ್ ರಸ್ತೆಗಳು ಆದಷ್ಟು ಬೇಗ ಹಾಳಾಗುವುದರಿಂದ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕ್ಕೆ ಆದ್ಯತೆ ನೀಡಲಾಗಿದೆ.

ಉತ್ತರ ಮತಕ್ಷೇತ್ರದಲ್ಲಿ ಬಾಕಿ ಉಳದಿರುವ ರಸ್ತೆಗಳ ಕಾಮಗಾರಿ ಗೂ ಟೆಂಡರ್ ಕರೆಯಲಾಗಿದೆ. ಶೀಘ್ರವೇ ಎಲ್ಲೆಡೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವ ಕಾರ್ಯವನ್ನ ಮಾಡಲಾಗುವುದು ಎಂದು ಶಾಸಕ ಅನಿಲ್ ಬೆನಕೆ ಹೇಳಿದ್ದಾರೆ.