ಜಿಲ್ಲಾ
ಬಡವರ ಗಲ್ಲಿಯಲ್ಲಿ ಸಿಸಿ ರಸ್ತೆಗೆ ಶಾಸಕ ಅನಿಲ್ ಬೆನಕೆ ಚಾಲನೆ

ಕಣಬರ್ಗಿಯಲ್ಲಿ 1 ಕೋಟಿ ಕಾಮಗಾರಿಗೆ ಶಾಸಕ ಅನಿಲ್ ಬೆನಕೆ ಚಾಲನೆ
ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದ ಕಣಬರ್ಗಿಯಲ್ಲಿ ಒಂದು ಕೋಟಿ ಮೌಲ್ಯದ ಕಾಮಗಾರಿ ಗೆ ಬಿಜೆಪಿ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದ್ದಾರೆ..

ಮಂಗಳವಾರ ಕಣಬರ್ಗಿಯಲ್ಲಿ ಶಾಸಕಅನಿಲ್ ಬೆನಕೆ ಜನರ ಬೇಡಿಕೆಯಂತೆ ವಾಲ್ಮೀಕಿ ಗಲ್ಲಿ, ರಾಮತೀರ್ಥ ಗಲ್ಲಿಯಲ್ಲಿ ಸಿಸಿ ರಸ್ತೆಗಳು ಹಾಗೂ ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿದ್ರು..

ಅದರಲ್ಲೂ ಕಣಬರ್ಗಿಯ ಪ್ರಮುಖ ವೃತ್ತದಿಂದ ಧರ್ಮವೀರ ಸಂಭಾಜಿ ಮಹಾರಾಜರ ಪ್ರತಿಮೆ ವರೆಗೂ ಸಿಸಿ ರಸ್ತೆ ಕಾಮಗಾರಿ ಗೆ ಚಾಲನೆ ನೀಡಿರುವುದು ವಿಶೇಷ.
ಈ ಸಂದರ್ಭದಲ್ಲಿ ಕಣಬರ್ಗಿ ಗ್ರಾಮದ ಪ್ರಮುಖರು, ನಗರ ಸೇವಕರು, ಪದಾಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.