ಟಾಪ್ ಸ್ಟೋರಿ

ಜನಮನ ಗೆದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ;ಈಗ ಕರ್ನಾಟಕ ಐಕಾನ್

ಜನರ ಮನಗೆದ್ದ ಸಿಂಪಲ್ ಕ್ವೀನ್ ಲಕ್ಷ್ಮಿ ಹೆಬ್ಬಾಳಕರ

ಬೆಳಗಾವಿ: ಇವರು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿಯಾಗಿದ್ದರು, ಕಾಂಗ್ರೆಸ್ ಪಕ್ಷದ ವಕ್ತಾರ ಆಗಿದ್ದರೂ ಜನರ ಮನದಲ್ಲಿ ಗುರುತಿಸಿಕೊಂಡಿರುವುದು ಸಿಂಪಲ್ ಲೀಡರ್ ಅಂತಾ. ಸರಳತೆ, ಸಜ್ಜನಿಕೆ, ಆತ್ಮೀಯತೆ, ನಾನಿದೀನಿ ಅಂತಾ ಧೈರ್ಯ ತುಂಬುವ ನಾಯಕಿ ಅಂದ್ರೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ. ಈ ಜನ ನಾಯಕಿ ಸಿಂಪ್ಲಿಸಿಟಿ ಜನ ಮನಗೆದ್ದಿದೆ. ಲಕ್ಷ್ಮಿ ಹೆಬ್ಬಾಳಕರ ಡೆವಲಪ್ಮೆಂಟ್ ಕ್ವೀನ್ ಅಷ್ಟೇ ಅಲ್ಲ ಕರ್ನಾಟಕದ ಐನಾಕ್ ರಾಜಕಾರಣಿ ಅಂತಲೂ ಗುರುತಿಸಿಕೊಂಡಿದ್ದಾರೆ.

ಯಸ್..ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅಂದ್ರೆ ಸಾಕು ಸದಾ ಒಂದಿಲ್ಲೊಂದು ರಾಜಕೀಯ ಚದುರಂಗದಲ್ಲಿ ಗಮನ ಸೆಳೆಯುವ ನಾಯಕಿ. ಯಾಕೆಂದರೆ ಲಕ್ಷ್ಮಿ ಹೆಬ್ಬಾಳಕರಗೆ ಇನ್ನೊಂದು ಗುಣವೇ ಹೇಳಿದನ್ನ ಮಾಡಿ ತೋರಿಸುವುದು. ಇದೇ ಕಾರಣಕ್ಕೆ ಲಕ್ಷ್ಮಿ ಹೆಬ್ಬಾಳಕರ ಹಳ್ಳಿಯಿಂದ ದಿಲ್ಲಿ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ..

ಲಕ್ಷ್ಮಿ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಮತ್ತು ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಒಮ್ಮೊಮ್ಮೆ ಸ್ಪರ್ಧೆ ಮಾಡಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.. ಈ ಎರಡು ಸೋಲು ರಾಜಕೀಯ ಇತಿಹಾಸದ ಪುಟದಲ್ಲಿ ಅಳಿಸಿ ಹಾಕುವಂತಹ ಗೆಲುವನ್ನ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಜನರು ಲಕ್ಷ್ಮಿ ಹೆಬ್ಬಾಳಕರ ಅವರಿಗೆ ನೀಡಿದ್ದಾರೆ.

ಒಬ್ಬ ರಾಜಕಾರಣಿ ಜನರ ಮಧ್ಯೆ ಹೇಗೆ ಇರಬೇಕು ಅನ್ನೋದಕ್ಕೆ ಲಕ್ಷ್ಮಿ ಹೆಬ್ಬಾಳಕರ ಜೀವಂತ ಸಾಕ್ಷಿ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮನೆ ಮಗಳಂತೆ ಲಕ್ಷ್ಮಿ ಹೆಬ್ಬಾಳಕರ ಮೊದಲು ಅವರ ಮತಕ್ಷೇತ್ರದ ಜನರ ಸಂಕಷ್ಟದಲ್ಲಿ ಒಬ್ಬರಾಗುತ್ತಾರೆ..ನೊಂದ ಬಡಜೀವಿಗಳ ಕಣ್ಣೀರು ಒರೆಸುವ ಕಾರ್ಯವನ್ನ ಮನೆ ಮಗಳಾಗಿ ಮಾಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೊನ್ನೆ ನಡೆದ ಬಡಾಲ ಅಂಕಲಗಿ ಮನೆ ಕುಸಿದ ದುರ್ಘಟನೆಯೇ ಸಾಕ್ಷಿ. ಆ ಘಟನೆ ಸಂಬಂಧಿಸಿದ ತಕ್ಷಣವೇ ಸ್ಥಳದಲ್ಲಿ ಇದ್ದುಕೊಂಡು ನೊಂದ ಕುಟುಂಬದ ಕಣ್ಣೀರು ಒರೆಸುವ ಮೂಲಕ ಮನೆ ಮಗಳಾಗಿ ತನ್ನ ಕರ್ತವ್ಯ ವನ್ನ ನಿರ್ವಹಣೆ ಮಾಡಿದ್ದಾರೆ. ಇದೇ ಕಾರಣಕ್ಕೆ ಲಕ್ಷ್ಮಿ ಹೆಬ್ಬಾಳಕರ ಅವರನ್ನ ಕ್ಷೇತ್ರದ ಮತ್ತು ರಾಜ್ಯದ ಜನತೆ ಪ್ರೀತಿಗೆ ಪಾತ್ರವಾಗುತ್ತಾರೆ.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ರಾಜಕೀಯ ಇತಿಹಾಸದಲ್ಲಿಯೇ ಅಭಿವೃದ್ಧಿ ಪರ್ವವನ್ನ ಕ್ಷೇತ್ರದ ಜನತೆ ಗೆ ತೋರಿಸಿಕೊಟ್ಟಿದ್ದಾರೆ. ಹೈಟೆಕ್ ರಸ್ತೆಗಳು, ಸುಸರ್ಜಿತವಾದ ಶಾಲೆ ಕಟ್ಟಡಗಳ‌ ಅಭಿವೃದ್ಧಿ ಹಾಗೂ ಕ್ಷೇತ್ರದಲ್ಲಿ ನೀರಾವರಿ ಯೋಜನೆ ಗಳು, ಸಮುದಾಯ ಭವನಗಳ ನಿರ್ಮಾಣ ಕಾರ್ಯ ಮತ್ತು ಮಠಮಂದಿರಗಳ‌ ಕಾರ್ಯಕ್ಕೆ ಲಕ್ಷ್ಮಿ ಹೆಬ್ಬಾಳಕರ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.

ರಾಜಕೀಯ ವೈರಿಗಳ ಪ್ರತಿಯೊಂದು ದಾಳವನ್ನ ಅಷ್ಟೇ ಚಾಣಾಕ್ಷತನದಿಂದ ಎದುರಿಸಲು ಎದೆಗಾರಿಕೆಯನ್ನ ಲಕ್ಷ್ಮಿ ಹೆಬ್ಬಾಳಕರ ಕಾಲಕ್ಕೆ ತಕ್ಕಂತೆ ಪ್ರದರ್ಶನ ಮಾಡುತ್ತಲೇ ಬಂದಿದ್ದಾರೆ. ರಾಜಕೀಯವಾಗಿ ಲಕ್ಷ್ಮಿ ಹೆಬ್ಬಾಳಕರ ಈಗ ಕರ್ನಾಟಕ ಮಹಿಳಾ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ..

ಬೆಳಗಾವಿ ತಾಲೂಕಿನ ರಾಜಕೀಯ ಇತಿಹಾಸ ದಲ್ಲಿ ಮಂತ್ರಿ ಸ್ಥಾನ ಯಾರಿಗೂ ಸಿಕ್ಕಿಲ್ಲ. ಎಲ್ಲಾ ರಾಜಕೀಯ ಷಡ್ಯಂತ್ರ ಗಳನ್ನ ಮೀರಿ ಮಂತ್ರಿ ಸ್ಥಾನಕ್ಕೆ ಅರ್ಹವಾದ ನಾಯಕಿಯಾಗಿ ಹೊರಹೊಮ್ಮಿದ್ದಾರೆ.. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಯಾದ್ರೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಸಚಿವ ಸ್ಥಾನದಂತಹ ದೊಡ್ಡ ಪದವಿ ಮನೆಗೆ ಬಾಗಿಲಿಗೆ ಹುಡುಕಿಕೊಂಡು ಬರುವಷ್ಟು ಪ್ರಭಾವಿ, ಜನ ನಾಯಕಿಯಾಗಿ ಲಕ್ಷ್ಮಿ ಹೆಬ್ಬಾಳಕರ ಬೆಳೆದು ನಿಂತುಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!