ಮಿರ್ಚಿ ಭಜಿ ತಿಂದ ತಾಯಿ,ಮಗ ಸಾವು..!?

ಮಿರ್ಚಿ ಭಜಿ ತಿಂದ ತಾಯಿ, ಮಗ ಸಾವು
ಬೆಳಗಾವಿ: ಮಿರ್ಚಿ ಭಜಿ ತಿಂದ ತಾಯಿ, ಮಗ ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದಲ್ಲಿ ನಡೆದಿದೆ..ಭಾನುವಾರ ನಡೆದ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ..
ಹುದಲಿ ಗ್ರಾಮ ಪಾರ್ವತಿ ಮಳಗಳಿ 53 ವಯಸ್ಸು ಮತ್ತು ಮಗ ಸೋಮನಿಂಗಪ್ಪ ಮಳಗಳಿ 28!ಮೃತಪಟ್ಟ ದುರ್ದೈವಿಗಳು. ಭಾನುವಾರದಂದು ಹೋಲದ ಕೆಲಸಕ್ಕೆ ಹೋಗಿದ್ದ ತಾಯಿ, ಮಗ ಸಂಜೆ ಮನೆಗೆ ಬಂದಿದ್ದಾರೆ.


ಮನೆಯಲ್ಲಿ ಭಜಿ ಸೇವಿಸಿದ ತಾಯಿ, ಮಗನಿಗೆ ತಕ್ಷಣವೇ ಅಸ್ವಸ್ಥರಾಗಿ ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣವೇ ಅವರನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಇಬ್ಬರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸದ್ಯ ಇಬ್ಬರೂ ಮೃತದೇಹವನ್ನ ಮರಣೋತ್ತರ ಪರೀಕ್ಷೆ ಗೆ ಒಳಪಡಿಸಿ ಅಂತ್ಯಕ್ರಿಯೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಮಾರಿಹಾಳ ಪೊಲೀಸರು ಕಾಯುತ್ತಿದ್ದು, ಈ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ..ಇಬ್ಬರೂ ಸಾವಿನ ರಹಸ್ಯ ಮರಣೋತ್ತರ ಪರೀಕ್ಷೆ ಬಳಿಕವೇ ಸ್ಪಷ್ಟವಾಗಲಿದೆ. ತಾಯಿ, ಮಗನ ಸಾವಿಗೆ ವಿಷಪೂರಿತ ಆಹಾರ ಸೇವನೆಯಿಂದ ಆಗಿದೇಯಾ ಅಥವಾ ಮತ್ತೆ ಬೇರೆ ಕಾರಣದಿಂದ ಆಗಿದೆ ಅನ್ನೋದನ್ನ ಪೊಲೀಸರ ತನಿಖೆ ಯಿಂದ ಗೊತ್ತಾಗಬೇಕಿದೆ.