ಬೆಳಗಾವಿ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ; ಅಭಯ ಪಾಟೀಲ್ ನಿರ್ಣಾಯಕ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೇಸರಿ ಪತಾಕಿ ಹಾರಿಸಿದ ಶಾಸಕ ಅಭಯ ಪಾಟೀಲ್ ಅವರೇ ಈಗ ಬಿಜೆಪಿ ಮೊದಲ ಮೇಯರ್, ಮೊದಲ ಉಪ ಮೇಯರ್ ಆಯ್ಕೆಯಲ್ಲಿ ನಿರ್ಣಾಯಕ.
ಹೌದು..ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಯಲ್ಲಿ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ..ಇದು ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಚಿನ್ಹೆ ಮೇಲೆ ಸ್ಪರ್ಧಿಸಿ ಕಮಲ ಪಡೆ ತನ್ನ ಇತಿಹಾಸವನ್ನೆ ನಿರ್ಮಿಸಿದೆ.
ಈಗ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೊದಲ ಮೇಯರ್ , ಮೊದಲ ಉಪ ಮೇಯರ್ ಯಾರಾಗ್ತಾರೆ ಅನ್ನೋ ಕುತೂಹಲ ಕೆರಳಿಸಿದೆ. ಬಿಜೆಪಿ ಮೇಯರ್, ಉಪ ಮೇಯರ್ ಆಯ್ಕೆಯಲ್ಲಿ ಶಾಸಕ ಅಭಯ ಪಾಟೀಲ್ ನಿರ್ಣಾಯಕ ಆಗಿದ್ದಾರೆ.. ಯಾಕೆಂದರೆ ಪಾಲಿಕೆ 58 ವಾರ್ಡನಲ್ಲಿ 35 ಸ್ಥಾನಗಳು ಬಿಜೆಪಿ ತೆಕ್ಕೆಗೆ ಬಂದಿವೆ. ಇದರಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ 25 ವಾರ್ಡನಲ್ಲಿ 22 ಬಿಜೆಪಿ ಗೆಲುವು ಸಾಧಿಸಿದ್ದು, ಇದು ಶಾಸಕ ಅಭಯ ಪಾಟೀಲ್ ನಾಯಕತ್ವದ ಮ್ಯಾಜಿಕ್. ಇನ್ನೂ ಉತ್ತರ ಮತಕ್ಷೇತ್ರದಲ್ಲಿ 33 ವಾರ್ಡನಲ್ಲಿ 13 ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಅದರಲ್ಲೂ ಎಂಇಎಸ ವಿರುದ್ಧ ಮರಾಠಾ ಮತ್ತು ಮರಾಠಾ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿದ್ದಾರೆ.. ಹೀಗಾಗಿ ಅಭಯ ಪಾಟೀಲ್ ಸೂಚಿಸುವ ವ್ಯಕ್ತಿಯೇ ಮೇಯರ್ ಆಗಲಿದ್ದಾರೆ.. ಇನ್ನೂ ಉತ್ತರ ಮತಕ್ಷೇತ್ರಕ್ಕೆ ಉಪ ಮೇಯರ್ ಸ್ಥಾನ ದೊರೆಯುವ ಸಾಧ್ಯತೆಯಿದೆ..ಈಗಾಗಲೇ ಬೆಳಗಾವಿ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮೀಸಲಾಗಿದ್ದು, ಉಪ ಮೇಯರ್ ಸಾಮಾನ್ಯ ಮಹಿಳಾ ಮೀಸಲಾಗಿದೆ. ಹೀಗಾಗಿ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿನ ಮರಾಠಾ ಅಥವಾ ಮರಾಠಾ ಭಾಷಿಕರ ಅಭ್ಯರ್ಥಿ ಮೇಯರ್ ಆಗಬಹುದು. ಅತ್ತ ಉತ್ತರದಲ್ಲಿ ಲಿಂಗಾಯತರ ಮುಣಿಸು ತಣಿಸಲು ಲಿಂಗಾಯತ ಮಹಿಳಾ ಅಭ್ಯರ್ಥಿ ಗೆ ಉಪ ಮೇಯರ್ ಸ್ಥಾನವನ್ನ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.