ಬೆಳಗಾವಿ ಪಾಲಿಕೆ ಕಮಲ ಅರಳಿಸಿ ಕಿಂಗ್ ಮೇಕರ್ ಆದ ಅಭಯ ಪಾಟೀಲ್

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಶಾಸಕ, ಚುನಾವಣಾ ಉಸ್ತುವಾರಿ ಹೊತ್ತಿದ್ದ ಅಭಯ ಪಾಟೀಲ್ ಅವರೇ ಅಸಲಿ ಕಿಂಗ್ ಮೇಕರ್..
ಬೆಳಗಾವಿ ಪಾಲಿಕೆ ಇತಿಹಾಸದಲ್ಲಿಯೇ ಕಮಲ ಅರಳಿಸಿದ ರೂವಾರಿ ಅಭಯ ಪಾಟೀಲ. ಪಾಲಿಕೆ ಚುನಾವಣೆಯಲ್ಲಿಯೇ ಈಗ ಎಂಇಎಸ ಸಂಪೂರ್ಣ ಧೂಳಿಪಟವಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ 58 ವಾರ್ಡುಗಳಲ್ಲಿ ಪಕ್ಷದ ಚಿನ್ಹೆ ಮೇಲೆ ಸ್ಪರ್ಧ ಮಾಡೋ ಐಡಿಯಾ ಪಕ್ಷದ ವರಿಷ್ಠರಿಗೆ ಕೊಟ್ಟಿದ್ದೇ ಶಾಸಕ ಅಭಯ ಪಾಟೀಲ್.. ಭಾಷಾ ರಾಜಕಾರಣ ಕ್ಕೆ ಫುಲ್ ಸ್ಟಾಪ್ ಹಾಕುವುದಕ್ಕಾಗಿಯೇ ಕೇಸರಿ ಪಡೆ ಭರ್ಜರಿ ತಯಾರಿ ತೆರೆ ನಡೆಸಿತ್ತು..ಅದರಂತೆ 58 ವಾರ್ಡುಗಳಲ್ಲಿ ಬಿಜೆಪಿ 55 ವಾರ್ಡನಲ್ಲಿ ಮಾತ್ರ ಪಕ್ಷದ ಚಿನ್ಹೆ ಮೇಲೆ ಅಖಾಡಕ್ಕೆ ಇಳದಿತ್ತು..ಇನ್ನೊಂದು ವಾರ್ಡನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಾಗೂ ಉಳಿದೆರಡು ವಾರ್ಡನಲ್ಲಿ ಬಿಜೆಪಿ ಅಭ್ಯರ್ಥಿ ಕಣದಲ್ಲಿಯೇ ಇರಲಿಲ್ಲ.. ಈಗ ಪಾಲಿಕೆ ಚುನಾವಣೆಯಲ್ಲಿ 35 ಸ್ಥಾನಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
.
ಅದರಲ್ಲೂ ಬೆಳಗಾವಿ ದಕ್ಷಿಣ ಮತಕ್ಷೇತ್ರದ 25 ವಾರ್ಡನಲ್ಲಿ ಬಿಜೆಪಿ ಗೆದ್ದಿದ್ದು 22 ಸ್ಥಾನಗಳಲ್ಲಿ ಹಾಗೂ ಎಂಇಎಸ 1 ಮತ್ತು ಕಾಂಗ್ರೆಸ 2 ಸ್ಥಾನದಲ್ಲಿ ಗೆಲುವು ಸಾಧಿಸಿದೆ.. ಬಿಜೆಪಿ ಗೆ ಭದ್ರವಾದ ಅಡಿಪಾಯ ಹಾಕಿಕೊಟ್ಟಿದ್ದು ಶಾಸಕ ಅಭಯ ಪಾಟೀಲ್ ಮತಕ್ಷೇತ್ರದಲ್ಲಿ ಅನ್ನೋದು ವಿಶೇಷ.
ಪಾಲಿಕೆಯಲ್ಲಿ ಕಮಲ ಅರಳಿಸುವಲ್ಲಿ ಅಭಯ ಪಾಟೀಲ್ ತಂತ್ರಗಾರಿ ತುಂಬಾ ಮಹತ್ವದ್ದಾಗಿದೆ. ಅಭಯ ಪಾಟೀಲ್ ಇದೇ ಮೊದಲ ಬಾರಿಗೆ ಯಾವುದೇ ವಿವಾದ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಿದ್ದರು..ಪಕ್ಷದ ನಿಷ್ಠಾವಂತ ಮತ್ತು ಎಂಇಎಸ ವಿರುದ್ಧ ಪ್ರಭಾವಿ ಅಭ್ಯರ್ಥಿಗಳನ್ನ ಅಖಾಡಕ್ಕೆ ಇಳಿ ಗೆಲ್ಲಿಸಿದ್ದರು..ಹಿಂದುತ್ವದ, ಅಭಿವೃದ್ಧಿ ಮಂತ್ರದೊಂದಿಗೆ ಅಭಯ ಪಾಟೀಲ್ ಮತದಾರರನ್ನ ಬಿಜೆಪಿಯತ್ತ ವಾಲುವಂತೆ ಮಾಡಿದ್ದಾರೆ. ಹಾಗೇ ನೋಡಿದ್ರೆ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿಯೇ ಎಂಇಎಸ ಪ್ರಭಾವ ಹೆಚ್ಚಾಗಿತ್ತು.. ಮತದಾರರು ಅಭಯ ಪಾಟೀಲ್ ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಮನಸೋತು ಭಾವನಾತ್ಮಕ ರಾಜಕೀಯ ಕ್ಕೆ ತಿಲಾಂಜಲಿ ಹಾಡಿ, ಬಿಜೆಪಿಯ ಅಭಿವೃದ್ಧಿ ರಾಜಕಾರಣ ಕ್ಕೆ ಜೈ ಜೈ ಎಂದಿದ್ದಾರೆ. ಇನ್ನೂ ಪ್ರತಿಯೊಂದು ವಾರ್ಡನಲ್ಲೂ ಅಭಯ ಪಾಟೀಲ್ ತಾನೇ ಅಭ್ಯರ್ಥಿ ಅನ್ನೋದನ್ನ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಮರಾಠಾ, ನೇಕಾರರು, ಹಿಂದುಳಿದ, ಲಿಂಗಾಯತ ಸೇರಿ ಅನ್ಯ ಭಾಷಿಕ,ಜಾತಿಯ ಮತದಾರರು ಅಭಯ ಪಾಟೀಲ್ ಬೆನ್ನಿಗೆ ನಿಲ್ಲುವ ಮೂಲಕ ಇನ್ನಷ್ಟು ರಾಜಕೀಯ ಶಕ್ತಿಯನ್ನ ತುಂಬಿದ್ದಾರೆ.