ಕಮಲ ಅರಳಿಸಲು ಅಭಯ ಪಾಟೀಲ್ ರಣತಂತ್ರ..!

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ವಶಕ್ಕೆ ಪಡೆಯಲು ಚುನಾವಣಾ ಉಸ್ತುವಾರಿ, ಶಾಸಕ ಅಭಯ ಪಾಟೀಲ್ ಭರ್ಜರಿ ರಣತಂತ್ರ ರೂಪಿಸಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಈ ಬಾರಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹಗಲು ರಾತ್ರಿಯನ್ನೆ ಶ್ರಮಿಸುತ್ತಿದ್ದಾರೆ..
ಬೆಳಗಾವಿ ದಕ್ಷಿಣ ಮತಕ್ಷೇತ್ರದ 25 ವಾರ್ಡ್ ಗಳಲ್ಲಿದ್ದು, ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ 33 ವಾರ್ಡುಗಳಿವೆ. ಇಲ್ಲಿ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ಕೊಡಿಸಿ ಅಖಾಡಕ್ಕೆ ಇಳಿಸಿದ್ದಾರೆ. ಈಗಾಗಲೇ ಅಭಯ ಪಾಟೀಲ್ ಪ್ರತಿಯೊಂದು ವಾರ್ಡನಲ್ಲಿ ಪ್ರಚಾರ ಸಭೆ ನಡೆಸಿದ್ದಾರೆ. ಯಾಕೇ ಈ ಬಾರಿ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಬೇಕು ಎನ್ನುವುದನ್ನ ಮತದಾರರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ, ಎಂಇಎಸ, ಆಪ್ ಆದ್ಮಿ ಪಾರ್ಟಿ ಸೇರಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಹೀಗಾಗಿ ಅಭಿವೃದ್ಧಿ ಮತ್ತು ಹಿಂದುತ್ವದ ಮಂತ್ರದಡಿ ಮತಬೇಟೆಯನ್ನ ಅಭ್ಯರ್ಥಿಗಳ ಪರ ಅಭಯ ಪಾಟೀಲ್ ಮಾಡುತ್ತಿದ್ದಾರೆ. ಇಂದು ನಾಳೆ ಬರೀ ಮನೆ ಮನೆ ಪ್ರಚಾರಕ್ಕೆ ಅವಕಾಶವಿದೆ. ಇದೇ ಕಾರಣಕ್ಕೆ ಅಭಯ ಪಾಟೀಲ್ ಕೊನೆಕ್ಷಣದ ವರೆಗೂ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಆಕ್ಟಿವ್ ಆಗಿ ಪ್ರಚಾರದ ಜೊತೆಗೆ, ರಾಜಕೀಯ ದಾಳವನ್ನ ಉರಳಿಸುತ್ತಿದ್ದಾರೆ. ಪ್ರಜ್ಞಾವಂತ ಮತದಾರರನ್ನ ಅಭಿವೃದ್ಧಿ ಪರಿಕಲ್ಪನೆಗೆ ಜೋಡಿಸುವ ಕಾರ್ಯವನ್ನ ಸದ್ದಿಲ್ಲದೆ ಮಾಡುತ್ತಿದ್ದಾರೆ.
ಈಗಾಗಲೇ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸ್ಟಾರ್ ಪ್ರಚಾರಕರು ಬಂದು ಮತಯಾಚನೆ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಸಚಿವರಾದ ಉಮೇಶ್ ಕತ್ತಿ, ಶಶಿಕಲಾ ಜೋಲ್ಲೆ, ಭೈರತ್ತಿ ಬಸವರಾಜ, ಕೆ.ಎಸ.ಈಶ್ವರಪ್ಪ ಸೇರಿ ಘಟಾನುಘಟಿ ನಾಯಕರೇ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಅಲ್ಲದೇ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಎರಡನೇ ಬಾರಿಗೆ ಪಕ್ಷದ ಚಿನ್ಹೆ ಮೇಲೆ ಅಭ್ಯರ್ಥಿಗಳ ನ್ನ ಕಣಕ್ಕಿಳಿದೆ. ಹೀಗಾಗಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಾಡಿ ಮಿಡಿ, ರಾಜಕೀಯ ತಂತ್ರಗಾರಿಕೆ ಗೊತ್ತಿರುವ ಅಭಯ ಪಾಟೀಲ್ ಅವರನ್ನೇ ಚುನಾವಣಾ ಉಸ್ತುವಾರಿ ಆಗಿ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಇದೇ ಕಾರಣಕ್ಕೆ ಈ ಬಾರಿ ಮಿಷನ್ 45 ಪ್ಲಸ್ ಘೋಷಣೆ ವಾಕ್ಯದೊಂದಿಗೆ ಅಭಯ ಪಾಟೀಲ್ ಟೀಮ್ ಭರ್ಜರಿ ಚುನಾವಣಾ ರಣತಂತ್ರದೊಂದಿಗೆ ಅಬ್ಬರದ ಪ್ರಚಾರ ಮುಗಿಸಿದೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಶೂನ್ಯದಿಂದ ಆಟ ಆರಂಭಿಸಿರುವ ಬಿಜೆಪಿ ಅಚ್ಚರಿಯ ಫಲಿತಾಂಶದೊಂದಿಗೆ ಪಾಲಿಕೆ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದೆ.