ಕರ್ನಾಟಕ
ಪಾಲಿಕೆ ಚುನಾವಣೆ;ಬಿಜೆಪಿ ನಾಯಕಿ ಶ್ರದ್ಧಾ ಅಂಗಡಿ ಅಬ್ಬರದ ಪ್ರಚಾರ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದ ಅಖಾಡಕ್ಕೆ ದಿವಂಗತ ಸುರೇಶ್ ಅಂಗಡಿ ಸುಪುತ್ರಿ, ಬಿಜೆಪಿ ನಾಯಕಿ ಶ್ರದ್ಧಾ ಅಂಗಡಿ ಶೆಟ್ಟರ್ ಧುಮುಕಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ58 ವಾರ್ಡುಗಳಲ್ಲಿ ಬಿಜೆಪಿ ಭರ್ಜರಿ ಚುನಾವಣಾ ಪ್ರಚಾರ ಆರಂಭಿಸಿದೆ..ತಾಯಿ, ಸಂಸದೆ ಮಂಗಲ್ ಅಂಗಡಿ ಜೊತೆಗೆ ಶ್ರದ್ಧಾ ಚುನಾವಣಾ ಪ್ರಚಾರದ ಅಖಾಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ ನಂಬರ 11 ರ ಬಿಜೆಪಿ ಅಭ್ಯರ್ಥಿ ಗಜಾನನ ಮಿಸಾಳೆ ಪರ ತಾಯಿ ಮಗಳು ಭರ್ಜರಿ ಪ್ರಚಾರ ನಡೆಸಿದ್ರು..
ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನ ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ರು.. ಮನೆ ಮನೆಗೆ ಪಾದಯಾತ್ರೆ ಮೂಲಕ ತೆರಳಿ ಸಂಸದೆ ಮಂಗಲ್ ಅಂಗಡಿ, ಬಿಜೆಪಿ ನಾಯಕಿ ಶ್ರದ್ಧಾ ಅಂಗಡಿ ಶೆಟ್ಟರ್ ಪ್ರಚಾರ ನಡೆಸಿದ್ರು