ಜಿಲ್ಲಾ
ಅನಿಲ್ ಬೆನಕೆಯಿಂದ ಅಭ್ಯರ್ಥಿ ಪರ ಮನೆ ಮನೆಗೆ ಪ್ರಚಾರ

ಬೆಳಗಾವಿ:ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಶಾಸಕ ಅನಿಲ್ ಬೆನಕೆ ಭರ್ಜರಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಪಾಲಿಕೆ ವಾರ್ಡ್ ನಂಬರ 46ರ ಅಭ್ಯರ್ಥಿ ಹನುಮಂತ ಕೊಂಗಾಳಿ ಪರ ಬಿಜೆಪಿ ಶಾಸಕ ಅನಿಲ್ ಬೆನಕೆ, ಬಿಜೆಪಿ ಯುವ ಮುಖಂಡರಾದ ಮಹಾಂತೇಶ ವಕ್ಕುಂದ, ಈರಯ್ಯ ಕೋತ ಸೇರಿ ಕಾರ್ಯಕರ್ತರು ಪ್ರಚಾರ ನಡೆಸಿದ್ರು.
ಬೆಳಗಾವಿ ಉತ್ತರ ಮತಕ್ಷೇತ್ರದ ರಾಮತೀರ್ಥ ನಗರದ ಮನೆ ಮನೆಗೆ ಹೋಗಿ ಪ್ರಚಾರ ನಡೆಸಿದ್ರು..ಬಿಜೆಪಿ ಚುನಾವಣಾ ಪ್ರಣಾಳಿಕೆ ನೀಡಿ ಪಕ್ಷದ ಅಭ್ಯರ್ಥಿ ಗೆ ಮತ ನೀಡುವಂತೆ ಶಾಸಕ ಅನಿಲ್ ಬೆನಕೆ ಮನವಿ ಮಾಡಿದ್ರು.
ವಾರ್ಡ ನಂಬರ 46 ರಲ್ಲಿ ಅನಿಲ್ ಬೆನಕೆ ಬೆಳಗ್ಗೆಯಿಂದಲೇ ಪ್ರಚಾರದ ಅಖಾಡಕ್ಕೆ ಧುಮುಕುವ ಮೂಲಕ ಭರ್ಜರಿ ಪ್ರಚಾರ ಕೈಗೊಂಡರು.