ಜಿಲ್ಲಾ
ನಿಖಿಲ್ ಮುರಕುಟೆ ಪ್ರಚಾರ ಕಚೇರಿ ಉದ್ಘಾಟಿಸಿದ ಅನಿಲ್ ಬೆನಕೆ,ಮಹೇಶ ಕುಮಟಳ್ಳಿ

ಬಿಜೆಪಿ ಪ್ರಚಾರ ಕಚೇರಿ ಉದ್ಘಾಟಿಸಿದ ಶಾಸಕರಾದ ಅನಿಲ್ ಬೆನಕೆ, ಮಹೇಶ ಕುಮಟಳ್ಳಿ
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ ನಂಬರ 14 ರ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯನ್ನ ಬಿಜೆಪಿ ಶಾಸಕರಾದ ಅನಿಲ್ ಬೆನಕೆ ಮತ್ತು ಮಹೇಶ ಕುಮಟಳ್ಳಿ ಉದ್ಘಾಟಿಸಿದರು.
ವಾರ್ಡ್ ನಂಬರ 14 ರ ಬಿಜೆಪಿ ಅಭ್ಯರ್ಥಿ ನಿಖಿಲ್ ಮುರಕುಟೆ ಪ್ರಚಾರ ಕಚೇರಿ ಉದ್ಘಾಟಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಶಾಸಕ ಅನಿಲ್ ಬೆನಕೆ, ಮಹೇಶ ಕುಮಟಳ್ಳಿ ಚಾಲನೆ ನೀಡಿದರು.
ಬಿಜೆಪಿ ಅಭ್ಯರ್ಥಿ ನಿಖಿಲ್ ಗೆಲುವಿಗಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು. ಬಿಜೆಪಿ ಸರ್ಕಾರದ ಸಾಧನೆಗಳನ್ನ ಜನರಿಗೆ ತಲುಪಿಸಬೇಕು. ಪಕ್ಷದ ಅಭ್ಯರ್ಥಿ ಗೆಲುವಿಗೆ ಹಗಲು ರಾತ್ರಿ ಶ್ರಮಿಸುವಂತೆ ಬಿಜೆಪಿ ಕರೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.