ಟಾಪ್ ಸ್ಟೋರಿ

ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆಗೆ ಬೋಮ್ಮಾಯಿ ಸಂಪುಟದಲ್ಲಿ ಮರಾಠಾ ಕೋಟಾದಡಿ ಮಂತ್ರಿಗಿರಿ..!?

ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆಗೆ ಬೋಮ್ಮಾಯಿ ಸಂಪುಟದಲ್ಲಿ ಮರಾಠಾ ಕೋಟಾದಡಿ ಮಂತ್ರಿಗಿರಿ..!?

ನ್ಯೂಸ್1ಕರ್ನಾಟಕ

ಬೆಳಗಾವಿ:ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ನೂತನ ಸಚಿವ ಸಂಪುಟದಲ್ಲಿ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆಗೆ ಮಂತ್ರಿ ಸ್ಥಾನ ಸಿಗುತ್ತಾ…ನೂತನ ಸಚಿವ ಸಂಪುಟದಲ್ಲಿ ಅನಿಲ್ ಬೆನಕೆ ಜಾಕಪಾಟ್ ಹೊಡೆದ್ರು ಅಚ್ಚರಿ ಪಡಬೇಕಿಲ್ಲ.

ಯಸ್… ಹೀಗೊಂದು ಚರ್ಚೆ ಬೆಳಗಾವಿ ಬಿಜೆಪಿ ಪಾಳ್ಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಯಾಕೆಂದರೆ ಬೋಮ್ಮಾಯಿ ಸಂಪುಟದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ್ ಗೆ ಕೊಕ್ ನೀಡುವ ಸಾಧ್ಯತೆಯಿದೆ. ಹೀಗಾಗಿ ಮತ್ತೊಬ್ಬ ಮರಾಠಾ ಸಮುದಾಯದ ಶಾಸಕನಿಗೆ ಮಂತ್ರಿಗಿರಿ ನೀಡುವ ಬಗ್ಗೆ ಚರ್ಚೆ ಆರಂಭವಾಗಿದೆ. ಅನಿಲ್ ಬೆನಕೆ ಮರಾಠಾ ಸಮುದಾಯವನ್ನ ಪ್ರತಿನಿಧಿಸುತ್ತಾರೆ. ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವ ಅನಿಲ್ ಬೆನಕೆ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ.

ಅದರಲ್ಲೂ ಬೆಳಗಾವಿ, ಕಾರವಾರ, ಬೀದರ, ಕಲಬುರಗಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮರಾಠಾ ಸಮುದಾಯದ ಮತಗಳು ಪ್ರತಿಯೊಂದು ಕ್ಷೇತ್ರದಲ್ಲಿ ಇವೆ. ಇನ್ನೂ ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಖಾನಾಪುರ ಮತಕ್ಷೇತ್ರದಲ್ಲಿ ನಿರ್ಣಾಯಕ ಮತಗಳೇ ಮರಾಠಾ ಮತಗಳು. ಕಳೆದ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಮತಗಳು ವಿಭಜನೆ ಆಗಿದ್ದವೂ.. ಒಂದು ಲಕ್ಷಕ್ಕೂ ಅಧಿಕ ಮತಗಳು ಎಂಇಎಸ ಅಭ್ಯರ್ಥಿ ಪಾಲಾಗಿದ್ದವು. ಹೀಗಾಗಿ ಮರಾಠಾ ಮತಗಳನ್ನ ಸೆಳೆಯಲು ಅನಿಲ್ ಬೆನಕೆ ಗೆ ಮಂತ್ರಿಗಿರಿ ದೊರೆಯಬಹುದು ಎಂದು ಹೇಳಾಗುತ್ತಿದೆ.

ಹಾಗೇ ನೋಡಿದ್ರೆ ಶಾಸಕ ಅನಿಲ್ ಬೆನಕೆ ಕತ್ತಿ, ಜಾರಕಿಹೊಳಿ ಬ್ರದರ್ಸ್ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ.. ಅತ್ತ ನೂತನ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಜೊತೆಗೆ ಅನ್ಯೋನ್ಯತೆ ಹೊಂದಿದ್ದಾರೆ.. ಇನ್ನೂ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿಚ ಪ್ರಹ್ಲಾದ ಜೋಶಿ ಇಬ್ಬರು ನಾಯಕರ ಆಶೀರ್ವಾದವೂ ಇದೇ.

ಇನ್ನೂ ಬಿಜೆಪಿ ಹೈಕಮಾಂಡ್ ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿಎಂ ಬಸವರಾಜ ಬೋಮ್ಮಾಯಿ ನೇತೃತ್ವದ ಹೊಸ ಸಂಪುಟ ರಚನೆ ಮಾಡುತ್ತಿದೆ. ಅದರಲ್ಲೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಾಗೂ ತಾಪಂ, ಜಿಪಂ ಚುನಾವಣೆ ಗೂ ಸಿದ್ಧತೆ ಆರಂಭಿಸಿದೆ. ಆಕ್ಟಿವ್ ಆಗಿರುವ ನಾಯಕನ್ನ ಮಂತ್ರಿ ಮಾಡಲು ಜಾತಿವಾರು ಲೆಕ್ಕಾಚಾರದಡಿ ಸಂಪುಟ ರಚನೆ ಮಾಡಲಾಗುತ್ತಿದೆ. ಹಾಗೇ ನೋಡಿದ್ರೆ ರಾಜ್ಯದಲ್ಲಿ 70 ಲಕ್ಷ ಮರಾಠಾ ಸಮುದಾಯದ ಜನಸಂಖ್ಯೆಯಿದೆ. ಮರಾಠಾ ಮತಗಳು ವಿಭಜನೆ ತಡೆಯಲು ಮರಾಠಾ ಶಾಸಕನಿಗೆ ಮಂತ್ರಿಗಿರಿ ನೀಡುವು ಪಕ್ಕಾ ಅಂತಾ ಹೇಳಲಾಗುತ್ತಿದೆ. ಬೋಮ್ಮಾಯಿ ಸಂಪುಟದಲ್ಲಿ ಶ್ರೀಮಂತ ಪಾಟೀಲ ಗೆ ಕೊಕ್ ಕೊಟ್ಟರೆ ಅನಿಲ್ ಬೆನಕೆ ಗೆ ಮಂತ್ರಿಗಿರಿ ಸಿಗುತ್ತಾ ಅನ್ನೋದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!