ಟಾಪ್ ಸ್ಟೋರಿ

ದೆಹಲಿಯಲ್ಲಿ ಹಾಲು-ಜೇನು ಸಂಗಮ

ಶ್ರೀನಿವಾಸ ಪಟ್ಟಣ

ದೆಹಲಿ: ಅಂತೇ ಕಂತೇಗಳ ಮಧ್ಯೆ ಹಾಲು-ಜೇನು ಸಂಗಮವಾಗಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಲವಲವಿಕೆಯಿಂದ ಹಸನ್ ಮುಖದೊಂದಿಗೆ ಕುಳಿತಿರುವ ಪೋಟೋ ಕರ್ನಾಟಕ ರಾಜ್ಯ ರಾಜಕಾರಣದ ಸ್ಪಷ್ಟವಾದ ಚಿತ್ರಣ ಅನಾವರಣಗೊಂಡಿದೆ.

ಯಸ್…ರಾಜ್ಯದಲ್ಲಿ ಕಳೆದ ಕೆಲ ತಿಂಗಳುಗಳಿಂದ ಬರೀ ಸಿಎಂ ಬದಲಾವಣೆ, ನಾಯಕತ್ವ ಬದಲಾವಣೆ ಮಾತೇ ಸದ್ದು ಮಾಡುತ್ತಿದ್ದವು. ಇದಕ್ಕೆ ಪುಷ್ಟಿ ಕೊಡುವಂತೆ ಕರ್ನಾಟಕದ ಬಿಜೆಪಿ ಸರ್ಕಾರದ ಸಚಿವರು, ಶಾಸಕರುಗಳ ಅಸಮಾಧಾನದ ಮಾತುಗಳೇ ಸಾಕ್ಷಿಯಾಗಿದ್ದವು. ರಾಜಕೀಯ ಅಗ್ನಿ ಪರೀಕ್ಷೆಯನ್ನ ಯಡಿಯೂರಪ್ಪನವರು ಮೌನವಾಗಿಯೇ ಎದುರಿಸಿ ಗೆದ್ದಿದ್ದಾರೆ.


ಸದ್ಯಕ್ಕೆ ಸಿಎಂ ಯಡಿಯೂರಪ್ಪ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಇಬ್ಬರೂ ಮಹಾನ ನಾಯಕರು ಪರಸ್ಪರ ಭೇಟಿ ಮಾಡಿಯಾಗಿ, ಕರ್ನಾಟಕ ರಾಜ್ಯದ ಹಿತವನ್ನ ಕಾಪಾಡುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಲ್ಲದೇ ಸಿಎಂ ಯಡಿಯೂರಪ್ಪ ಪುತ್ರ ವಿಜಯೆಂದ್ರ ತಮ್ಮ ಫೇಸ್ಬುಕ್ ಪುಟದಲ್ಲಿ ಪೋಟೋ ಹಾಕಿ ಹಾಲು-ಜೇನು ಅಂತೇ ಬಿಎಸವೈ ಮೋದಿ ಭೇಟಿ ಬಗ್ಗೆ ಅರ್ಥಗರ್ಭಿತ ವಾದ ಮಾರ್ಮಿಕ ಅನಿಸಿಕೆಯನ್ನ ಹಂಚಿಕೊಂಡಿದ್ದಾರೆ. ಈ ಮೂಲಕ ಬಿಎಸವೈ ವಿರೋಧಿ ಬಣಗಳಿಗೆ ಮೌನವಾಗಿಯೇ ಹೈಕಮಾಂಡ್ ತಮ್ಮ ಬೆನ್ನಿಗೆ ಇದೇ ಎಂಬ ಸಂದೇಶವನ್ನ ರವಾನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!