ಮುಂಬೈ ಆಯ್ತು ಇನ್ನೂ ದೆಹಲಿಯತ್ತ RJ!!?

ಮುಂಬೈ ಆಯ್ತು ಇನ್ನೂ ದೆಹಲಿಯತ್ತ ಸಾಹುಕಾರ
ಬಿ.ಎಲ್.ಸಂತೋಷರನ್ನ ಮೀಟ್ ಮಾಡ್ತಾರಾ ಆರಜೆ
ಬೆಳಗಾವಿ, ಮಾಜಿ ಸಚಿವ, ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ರಾಜಕೀಯ ನಡೆ ನಿಗೂಢವಾಗಿದೆ. ಸದ್ಯದರಲ್ಲಿಯೇ ಆರ್.ಜೆ ದೆಹಲಿಗೆ ಭೇಟಿ ನೀಡಲಿದ್ದಾರಾ?. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ, ಆರ.ಎಸ.ಎಸ ಪ್ರಮುಖ ಬಿ.ಎಲ್.ಸಂತೋಷ ಅವರನ್ನ ಭೇಟಿಯಾಗಲಿದ್ದಾರಾ?. ಗೋಕಾಕ ಸಾಹುಕಾರನ ದೆಹಲಿ ಭೇಟಿ ಹಿಂದಿನ ಸೀಕ್ರೆಟ್ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಿಡಿ ಕೇಸನಂತ ಫುಲ್ ಸೈಲೆಂಟ್ ಆಗಿದ್ದ ರಮೇಶ ಜಾರಕಿಹೊಳಿ ಈಗ ಫುಲ್ ಆಕ್ಟಿವ್ ಆಗಿದ್ದಾರೆ. ಇನ್ನು 8 ರಿಂದ 10 ದಿನಗಳಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನ ತಿಳಿಸುವುದಾಗಿ ಹೇಳಿದ್ದಾರೆ. ಸ್ವಪಕ್ಷೀಯ ನಾಯಕರಿಂದ ಬೆನ್ನಿಗೆ ಚೂರಿ ಹಾಕಿದ್ದಕ್ಕೆ ರಮೇಶ ಜಾರಕಿಹೊಳಿ ಮನನೊಂದಿದ್ದಾರೆ. ಹೀಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನ ಹೊರಹಾಕಿದ್ದಾರೆ.
ಈಗಾಗಲೇ ರಮೇಶ ಜಾರಕಿಹೊಳಿ ಮುಂಬೈನಲ್ಲಿ ತಮ್ಮ ರಾಜಕೀಯ ಗುರು ದೇವೇಂದ್ರ ಫಡ್ನವೀಸ್ ಅವರನ್ನ ಮಾಡಿದ್ದಾರೆ. ಯಾವುದೇ ಆತುರದ ನಿರ್ಧಾರ ಮಾಡದಂತೆ ಫಡ್ನವೀಸ್ ಆರ.ಜೆಗೆ ಸಲಹೆ ನೀಡಿದ್ದಾರೆ. ಅದರಂತೆ ರಮೇಶ ಜಾರಕಿಹೊಳಿ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ಬಳಿಕ ಬೆಳಗಾವಿ ಜಿಲ್ಲೆ ಅಥಣಿಯ ಆರ.ಎಸ.ಎಸ ಪ್ರಮುಖರಾದ ಅರವಿಂದರಾವ್ ದೇಶವಾಂಡೆ ಅವರನ್ನ ಭೇಟಿ ಮಾಡಿದ್ದಾರೆ. ರಾಜಕೀಯ ನಿರ್ಧಾರಗಳ ಬಗ್ಗೆ ಅವರ ಗಮನಕ್ಕೆ ತೆಗೆದುಕೊಂಡು ಬಂದಿದ್ದಾರೆ.
ಆರ.ಎಸ.ಎಸ ಪ್ರಮುಖ ಅರವಿಂದರಾವ್ ದೇಶಪಾಂಡೆ ಭೇಟಿ ಬಳಿಕ ರಮೇಶ ಜಾರಕಿಹೊಳಿ ದೆಹಲಿಗೆ ಹೋಗಲಿದ್ದಾರೆ. ದೆಹಲಿಯಲ್ಲಿ ರಾಷ್ಟ್ಪೀಯ ನಾಯಕ ಬಿ.ಎಲ್.ಸಂತೋಷ ಅವರನ್ನ ಭೇಟಿ ಮಾಡಲಿದ್ದಾರೆ ಎಂಬ ಮಾತುಗಳು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ. ಈಗಗಾಲೇ ರಮೇಶ ಜಾರಕಿಹೊಳಿ ತಮ್ಮ ಸಹೋದರರ ಜೊತೆಗೆ ಗೋಕಾಕನಲ್ಲಿ ಗೌಪ್ಯವಾಗಿ ಸಭೆಯನ್ನ ನಡೆಸಿದ್ದಾರೆ. ದೆಹಲಿಯಲ್ಲಿ ಬಿ.ಎಲ್. ಸಂತೋಷ ಅವರ ಭೇಟಿ ಬಳಿಕ ಆರಜೆ ತಮ್ಮ ರಾಜೀನಾಮೆ ನಿರ್ಧಾರದ ಬಗ್ಗೆ ಅಂತಿಮ ತೀರ್ಮಾನವನ್ನ ತೆಗೆದುಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಮೇಶ ಜಾರಕಿಹೊಳಿಯನ್ನ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಆಪ್ತರು ಮನವಿ ಮಾಡಿದ್ದಾರೆ. ಬಿಎಲ್ ಸಂತೋಷ ಭೇಟಿ ಬಳಿಕ ರಮೇಶ ಜಾರಕಿಹೊಳಿ ರಾಜಕೀಯ ನಡೆ ಸ್ಪಷ್ಟವಾಗಲಿದೆ.