ಕರ್ನಾಟಕ

ಸಂಚಾರಿ ವಿಜಯ್ ಅಂಗಾಂಗ ದಾನ: ಮಹಿಳೆಗೆ ಕಿಡ್ನಿ ಕಸಿ ಸಕ್ಸಸ್

ಸಂಚಾರಿ ವಿಜಯ್ ಅಂಗಾಂಗ ದಾನ: ಮಹಿಳೆಗೆ ಕಿಡ್ನಿ ಕಸಿ ಸಕ್ಸಸ್

ಶ್ರೀನಿವಾಸ ಪಟ್ಟಣ

ಬೆಂಗಳೂರು: ಬೈಕ್ ಅಪಘಾತದಲ್ಲಿ ಮೆದುಳು ನಿಷ್ಕ್ರಿಯದಿಂದಾಗಿ ಮೃತಪಟ್ಟ ನಟ ಸಂಚಾರಿ ವಿಜಯ್ ಅವರ ಕಿಡ್ನಿಯನ್ನು ಮಹಿಳೆಯೊಬ್ಬರಿಗೆ ಜೋಡಣೆ ಮಾಡಲಾಗಿದ್ದು ಸಂಚಾರಿ ವಿಜಯ್ ಅವರು ಸಾವಿನ ನಂತರವೂ ಹಲವರಿಗೆ ಹೊಸ ಜೀವನವನ್ನು ನೀಡಿದ್ದಾರೆ.

ಬೆಂಗಳೂರಿನ ಲಗ್ಗೆರೆ ಮೂಲದ 34 ವರ್ಷ ವಯಸ್ಸಿನ ಮಹಿಳೆಗೆ ವಿಜಯ್ ಅವರ ರಕ್ತದ ಗುಂಪು, ಡಿಎನ್ ಎ, ಕಿಡ್ನಿ ಗಾತ್ರ ಎಲ್ಲವೂ ಹೊಂದಾಣಿಕೆಯಾಗಿತ್ತು. ಹೀಗಾಗಿ ಕಿಡ್ನಿಯನ್ನು ಯಶಸ್ವಿಯಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಟ್ರಾನ್ಸ್ ಪ್ಲಾಂಟೇಷನ್ ಮಾಡಲಾಗಿದೆ.

ಮಂಗಳವಾರ ರಾತ್ರಿ ಸರ್ಕಾರ ನಡೆಸುತ್ತಿರುವ ಜೀವ ಸಾರ್ಥಕತೆ ಸಂಸ್ಥೆಗೆ ಅಪೊಲೋ ಆಸ್ಪತ್ರೆಯ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಮಹಿಳೆಗೆ ದಿವಂಗತ ನಟನ ಕಿಡ್ನಿ ನೀಡುವುದಾಗಿ ತಿಳಿಸಲಾಗಿತ್ತು.

ಇದರಂತೆ ಮೂರು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಗೆ ಯಶಸ್ವಿಯಾಗಿ ಕಿಡ್ನಿ ಜೋಡಣೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದ ನೆಫ್ರಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಇ.ಮಹೇಶ್ ಅವರು ಮಾತನಾಡಿ, ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ವಾರದೊಳಗಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!