ಟಾಪ್ ಸ್ಟೋರಿ

ತಮಿಳುನಾಡಿನಲ್ಲಿ ಮಹಿಳೆಯರಿಗೆ ದೇವಸ್ಥಾನದ “ಅರ್ಚಕರ ಹುದ್ದೆ”: ಸರ್ಕಾರ ಸಿದ್ದತೆ

ತಮಿಳುನಾಡಿನಲ್ಲಿ ಮಹಿಳೆಯರಿಗೆ ದೇವಸ್ಥಾನದ “ಅರ್ಚಕರ ಹುದ್ದೆ”: ಸರ್ಕಾರ ಸಿದ್ದತೆ

ಮಹಾಂತೇಶ ಇರಳಿ

ಚೆನ್ನೈ:ಮಹಿಳೆಯರನ್ನು ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಕ ಆಗಬೇಕಾದರೆ, ಅಗಮಾ ಶಾಸ್ತ್ರದಲ್ಲಿ ತರಬೇತಿ ಪಡೆದ ಮಹಿಳೆಯರು, ದೇವಾಲಯದ ಅರ್ಚಕರ ಹುದ್ದೆಗಳನ್ನು ವಹಿಸಿಕೊಳ್ಳಲು ಬಯಸಿದರೆ ಅವರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಸರ್ಕಾರ ಸಿದ್ದವಾಗಿದೆ” ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಈ ಬಗ್ಗೆ ಮಾತನಾಡಿರುವ ಸಚಿವ ಶೇಖರ್​ ಬಾಬು, “ಆಗಮಾ ಶಾಸ್ತ್ರದಲ್ಲಿ ತರಬೇತಿ ಪಡೆದವರಿಗೆ ದೇವಾಲಯದಲ್ಲಿ ಅರ್ಚಕ ಹುದ್ದೆಗೆ ಅವಕಾಶ ನೀಡಲಾಗುವುದು. ದೇವಾಲಯದ ಪುರೋಹಿತರ ಪಾತ್ರವನ್ನು ತೆಗೆದುಕೊಳ್ಳಲು ಇಷ್ಟಪಡುವ ಮಹಿಳೆಯರಿಂದ ಮನವಿಗಳು ಬಂದರೆ, ಖಂಡಿತವಾಗಿ ನಾವು ಅವರನ್ನು ಪರಿಗಣಿಸುತ್ತೇವೆ. ಅಗಮಾ ಸಂಪ್ರದಾಯದಲ್ಲಿ ಅವರ ಪರಿಣತಿಯೇ ಮಾನದಂಡವಾಗಿ ರುತ್ತದೆಯೇ ವಿನಃ ಲಿಂಗ ತಾರತಮ್ಯ ಇಲ್ಲ. ಅವರಿಗೆ ಅಗತ್ಯವಾದ ತರಬೇತಿಯನ್ನು ನೀಡುತ್ತೇವೆ.

ಜೊತೆಗೆ ಅರ್ಚಕರಾಗಿ ನೇಮಿಸುವ ಮೊದಲು ಸಂದರ್ಶನ ನಡೆಸುತ್ತೇವೆ” ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿಸುವ ನಿರ್ಧಾರದ ಜೊತೆಗೆ ಮುಟ್ಟಿನ ಸಮಯದಲ್ಲಿ ದೇವಸ್ಥಾನದ ಆಚರಣೆಗಳಿಂದ ದೂರವಿರಲು “ಮಹಿಳೆಯರಿಗೆ ಐದು ದಿನಗಳ ರಜೆ” ಸೇರಿದಂತೆ ಎಲ್ಲ ಅಂಶಗಳನ್ನು ಪರಿಗಣಿಸುವುದಾಗಿ ಸಚಿವ ಶೇಖರ್‌ ಬಾಬು ಹೇಳಿದ್ದಾರೆ.ದಲಿತರಿಗೆ ಆಗಮ ಶಾಸ್ತ್ರದ ತರಬೇತಿ ನೀಡುವ ಶಾಲೆಯನ್ನು ಈ ಹಿಂದೆ ತಮಿಳುನಾಡಿನಲ್ಲಿ ಆರಂಭಿಸಲಾಗಿತ್ತು. ಅಲ್ಲದೆ, ಅಲ್ಲಿ ತರಬೇತಿ ಪಡೆದ ದಲಿತರೂ ಸಹ ಎಲ್ಲಾ ದೇವಾಲಯ ಗಳಲ್ಲಿ ಅರ್ಚನೆ ಮಾಡಬಹುದು ಎಂಬ ಐತಿಹಾಸಿಕ ಯೋಜನೆಯನ್ನು ಜಾರಿಗೆ ತಂದಿದ್ದರು.

ಮೊದಲ ಬ್ಯಾಚ್​ನಲ್ಲಿ 40ಕ್ಕೂ ಹೆಚ್ಚು ದಲಿತ ವಿದ್ಯಾರ್ಥಿಗಳಿಗೆ ಇಲ್ಲಿ ಆಗಮ ಶಾಸ್ತ್ರ ಬೋಧಿಸಿ ತಮಿಳುನಾಡಿನ ನಾನಾ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಅವರಿಗೆ ಅರ್ಚಕ ಉದ್ಯೋಗ ನೀಡಿದ್ದು ಇತಿಹಾಸ. ದಶಕಗಳ ಹಿಂದೆ ಈ ಯೋಜನೆಗಾಗಿ ಸಾಕಷ್ಟು ಪರ-ವಿರೋಧ ಚರ್ಚೆಯಾಗಿತ್ತು. ಅಲ್ಲದೆ, ಈಗಲೂ ಈ ವಿವಾದ ದ್ರಾವಿಡ ನಾಡಿನಲ್ಲಿ ಜೀವಂತವಾಗಿದೆ. ಆದರೆ, ಇದೀಗ ಅಗಮ ಶಾಸ್ತ್ರದಲ್ಲಿ ತರಬೇತಿ ಪಡೆದ ಮಹಿಳೆಯರನ್ನು ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಿ ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆ ಸಚಿವ ಶೇಖರ್ ಬಾಬು ಘೋಷಿಸಿರುವುದು ಖಟ್ಟರ್​ ಹಿಂದೂಗಳನ್ನು ಮತ್ತಷ್ಟು ಕೆರಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!