ಟಾಪ್ ಸ್ಟೋರಿ

ಕೋವಿಡ್-19 ಎದುರಿಸಲು ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಕರೆ

ಕೋವಿಡ್-19 ಎದುರಿಸಲು ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಕರೆ

ಮಹಾಂತೇಶ ಇರಳಿ

ದೆಹಲಿ: ಕೊರೋನಾ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕಾಗಿ ಜಾಗತಿಕ ಸಮುದಾಯ ಒನ್ ಹೆಲ್ತ್ ಒನ್ ಅರ್ತ್ ಕಾರ್ಯವಿಧಾನ ಅಳವಡಿಕೆಗೆ ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಅವರು, ಜಿ-7 ಶೃಂಗಸಭೆಯ ಅಧಿವೇಶನದ ವರ್ಚ್ಯುಯಲ್ ಭಾಷಣ ಮೂಲಕ ಕರೆ ನೀಡಿದ್ದಾರೆ.

7 ಶೃಂಗಸಭೆಯ ಅಧಿವೇಶನದ ವರ್ಚ್ಯುಯಲ್ ಸಭೆಯಲ್ಲಿ ಯುಕೆ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಾಲಿ, ಜಪಾನ್, ಅಮೆರಿಕಾಗಳು ಜಿ-7 ರಾಷ್ಟ್ರಗಳಾಗಿದ್ದು, ಆಯೋಜಕ ರಾಷ್ಟ್ರ, ಬ್ರಿಟನ್ ಶೃಂಗಸಭೆಯಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲು ಭಾರತ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾಗಳನ್ನು ಆಹ್ವಾನಿಸಿತ್ತು.

ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ “ಮುಂದಿನ ಸಾಂಕ್ರಾಮಿಕಗಳ ತಡೆಗೆ ಜಾಗತಿಕ ಏಕತೆ, ನಾಯಕತ್ವ, ಒಗ್ಗಟ್ಟಿಗೆ ಕರೆ ನೀಡಿದ್ದು, ಪ್ರಜಾಸತ್ತೀಯಹಾಗೂ ಪಾರದರ್ಶಕ ಸಮಾಜಗಳಿಗೆ ಇಂತಹ ಸವಾಲುಗಳನ್ನು ನಿಭಾಯಿಸುವಲ್ಲಿ ವಿಶೇಷ ಜವಾಬ್ದಾರಿ ಇದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದೇ ವೇಳೆ ಡಬ್ಲ್ಯುಟಿಒ ಮುಂದಿಡಲಾಗಿರುವ, ಕೋವಿಡ್-19 ಸಂಬಂಧಿತ ತಂತ್ರಜ್ಞಾನಗಳನ್ನು ಪೇಟೆಂಟ್ ಮುಕ್ತಗೊಳಿಸುವ ಭಾರತ ಮತ್ತು ದಕ್ಷಿಣ ಆಫ್ರಿಕಾದ ಪ್ರಸ್ತಾವನೆಗೆ ಪ್ರಧಾನಿ ಮೋದಿ ಜಿ-7 ಬೆಂಬಲವನ್ನೂ ಕೋರಿದ್ದು ಜಾಗತಿಕ ಆರೋಗ್ಯ ಆಡಳಿತದ ಸುಧಾರಣೆಗೆ ಸಾಮೂಹಿಕ ಪ್ರಯತ್ನಗಳಿಗೂ ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!