ಕ್ರೈಂ

ಅಪಹರಣವಾದ 24 ಗಂಟೆಯಲ್ಲೇ ಶಿಶು ರಕ್ಷಣೆ ಮಾಡಿದ ಪೊಲೀಸರು…!

ಅಪಹರಣವಾದ 24 ಗಂಟೆಯಲ್ಲೇ ಶಿಶು ರಕ್ಷಣೆ ಮಾಡಿದ ಪೊಲೀಸರು.!

ಶ್ರೀನಿವಾಸ ಪಟ್ಟಣ

ಗೋವಾ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಅಪಹರಣ ಮಾಡಲಾಗಿದ್ದ ಒಂದೂವರೆ ತಿಂಗಳ ಶಿಶುವನ್ನು ಕೇವಲ 24 ಗಂಟೆಗಳಲ್ಲೇ ಪೊಲೀಸರು ರಕ್ಷಿಸಿದ್ದಾರೆ. ಈ ಬಗ್ಗೆ ಅಲ್ಲಿನ ಸಿಎಂ ಅವರು ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಈ ಘಟನೆ ನಡೆದಿದ್ದು, ಗೋವಾದಲ್ಲಿ. ಅಪಹರಣ ಮಾಡಿದ 24 ತಾಸಿನಲ್ಲಿ ಮಗಯವನ್ನು ರಕ್ಷಣೆಗೆ ಮಾಡಿದ್ದ ಪೊಲೀಸರ ಕೆಲಸಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ ಹರ್ಷ ವ್ಯಕ್ತ ಪಡಿಸಿದ್ದಾರೆ. ‌

ಜೂನ್‌ 11 ರಂದು, ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಅಪರಿಚಿತ ಮಹಿಳೆಯೊಬ್ಬರು ಶಿಶು ಅಪಹರಿಸಿದ್ದಾರೆ ಎಂಬ ಮಾಹಿತಿ ಅಗಾಕೈಮ್ ಪೊಲೀಸ್‌ ಠಾಣೆಗೆ ಲಭ್ಯವಾಗಿದ್ದು, ಮಗು ಅಪಹರಿಸಿದ್ದ ಮಹಿಳೆಯನ್ನು ಉತ್ತರ ಗೋವಾದ ಸಾಲೇಲಿ ಗ್ರಾಮದಲ್ಲಿ ಬಂಧಿಸಲಾಗಿದೆ.

ಶಿಶುವಿನ ತಾಯಿ ಲಲಿತಾ ನಾಯಕ್‌ ಅವರನ್ನು ಭೇಟಿಯಾದ ಅಪರಿಚಿತ ಮಹಿಳೆಯೊಬ್ಬರು, ಮಾತನಾಡಿಸುವ ನೆಪದಲ್ಲಿ ಅವರ (ತಾಯಿಯ) ಗಮನವನ್ನು ಬೇರೆಡೆಗೆ ಸೆಳೆದು ಮಗು ಅಪಹರಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡಗಳು ಲಭ್ಯವಾದ ನಿಖರ ಮಾಹಿತಿಯನ್ನು ಆಧರಿಸಿ ಬಿಚೋಲಿಮ್‌ ಮತ್ತು ವಲ್ಪೋಯಿ ನಗರ, ಸುತ್ತಮುತ್ತ ಹುಡುಕಾಟ ಆರಂಭಿಸಿದವು. ಬಳಿಕ ಸಾಲೇಲಿ ಗ್ರಾಮವನ್ನು ಸುತ್ತುವರಿದು, ಆಸ್ಪತ್ರೆ ಮತ್ತು ತಾಯಿ ನೀಡಿದ ಹೇಳಿಕೆಗಳಿಗೆ ಹೊಂದಿಕೆಯಾಗುವ ಮಗುವನ್ನು ಪತ್ತೆಹಚ್ಚಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!