ಚೆಸ್ ವಿಶ್ವಚಾಂಪಿಯನ್ ವಿರುದ್ಧ “ಕಿಚ್ಚ ಸುದೀಪ್” ಕಣಕ್ಕೆ.!

ಚೆಸ್ ವಿಶ್ವಚಾಂಪಿಯನ್ ವಿರುದ್ಧ “ಕಿಚ್ಚ ಸುದೀಪ್” ಕಣಕ್ಕೆ.!
ಮಹಾಂತೇಶ ಇರಳಿ
ಬೆಂಗಳೂರು: ಬಹು ಭಾಷಾ ನಟ, ಕನ್ನಡಿಗರಲ್ಲಿ ಕೋಟಿಗೋಬ್ಬ ಕಿಚ್ಚ ಸುದೀಪ್, ಇದೀಗ ಚೆಸ್ ಗ್ರ್ಯಾಂಡ್ಮಾಸ್ಟರ್ ವಿಶ್ವನಾಥನ್ ಆನಂದ್ ವಿರುದ್ಧ ಕಣಕ್ಕೆ ಇಳಿಯಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಕೋವಿಡ್ನಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ವಿಶ್ವನಾಥನ್ ಆನಂದ್ ಅವರು ಇತರ ಕೆಲವು ಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸೆಲೆಬ್ರಿಟಿಗಳ ವಿರುದ್ಧ ಚೆಸ್ ಆಡಲಿದ್ದಾರೆ. ಆಟವಾಡುವ ಮೂಲಕ ದೇಣಿಗೆ ಸಂಗ್ರಹ ಮಾಡಲಿದ್ದಾರೆ.
ಗೂಗಲ್ ಸಹಯೋಗದಲ್ಲಿ ಚೆಸ್.ಕಾಮ್ ‘ಚೆಕ್ಮೇಟ್ ಕೋವಿಡ್’ ಸೆಲೆಬ್ರಿಟಿ ಆವೃತ್ತಿಯನ್ನು ನಡೆಸುತ್ತಿದ್ದು, ಭಾನುವಾರ ಸಂಜೆ 5ರಿಂದ ರಾತ್ರಿ 8 ಗಂಟೆಯವರೆಗೆ ಐದು ಬಾರಿ ವಿಶ್ವಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರು ಎರಡು ಬ್ಯಾಚ್ಗಳಲ್ಲಿ ಅರ್ಧ ಗಂಟೆಗಳಂತೆ ಹಲವು ಗಣ್ಯರೊಂದಿಗೆ ಏಕಕಾಲದಲ್ಲಿ ಚೆಸ್ ಆಡಲಿದ್ದಾರೆ. ಸುದೀಪ್ ತಮ್ಮ ಪತ್ನಿ ಪ್ರಿಯಾ ಜೊತೆ ಚೆಸ್ ಮನೆಯಲ್ಲಿ ಚೆಸ್ ಆಡುವುದಾಗಿ ಮೂಲಗಳು ತಿಳಿಸಿವೆ
ನಟರಾದ ಅಮೀರ್ ಖಾನ್, ಕಿಚ್ಚ ಸುದೀಪ್, ರಿತೇಷ್ ದೇಶ್ಮುಖ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಜೂನ್ 13ರಂದು ಚೆಸ್ ಗ್ರ್ಯಾಂಡ್ಮಾಸ್ಟರ್ ವಿಶ್ವನಾಥನ್ ಆನಂದ್ ಅವರನ್ನು ಎದುರಿಸಲಿದ್ದಾರೆ ಎಂದು ತಿಳಿದು ಬಂದಿದೆ.