ಜಿಲ್ಲಾ

ಆಂಬ್ಯಲೆನ್ಸ್ ನೀಡಿ, ಸ್ವತಃ ಚಲಾಯಿಸಿ ಗಮನ ಸೆಳೆದ ಶಾಸಕಿ ಅಂಜಲಿ ನಿಂಬಾಳ್ಕರ್

ಆಂಬ್ಯಲೆನ್ಸ್ ನೀಡಿ, ಸ್ವತಃ ಚಲಾಯಿಸಿ ಗಮನ ಸೆಳೆದ ಶಾಸಕಿ ಅಂಜಲಿ ನಿಂಬಾಳ್ಕರ್

ಬೆಳಗಾವಿ:ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ನಾಲ್ಕು ಆ್ಯಂಬುಲೆನ್ಸ್ ಖರೀದಿಸಿ ಇಂದು ಖಾನಾಪೂರ ತಾಲೂಕು ಆಸ್ಪತ್ರೆಗೆ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಹಸ್ತಾಂತರಿಸಿದರು.

ಇದೆ ವೇಳೆ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಆ್ಯಂಬುಲೆನ್ಸ್ ಓಡಿಸುವ ಮೂಲಕ ಗಮನ ಸೆಳೆದರು. ತಾಲೂಕು ಆಸ್ಪತ್ರೆಯ ಆವರಣದಲ್ಲಿ ನಾಲ್ಕು ಆ್ಯಂಬುಲೆನ್ಸ್ಗಳಿಗೆ ಚಾಲನೆ ನೀಡಿದ ಅವರು ನಂತರ ಪಟ್ಟಣದಲ್ಲಿ ಆ್ಯಂಬುಲೆನ್ಸ್ ಓಡಿಸಿ ತಾಲೂಕಿನ ಜನರ ಗಮನ ಸೆಳೆದರು.

ಕಳೆದ ವರ್ಷ ಶಾಸಕಿ ಅಂಜಲಿ ಸರ್ಕಾರದಿಂದ ಖಾನಾಪುರ ತಾಲೂಕಾಸ್ಪತ್ರೆಗೆ ನಾಲ್ಕು ಆ್ಯಂಬುಲೆನ್ಸ್ ಮಂಜೂರು ಮಾಡಿಸಿದ್ದರು. ಕೊರೊನಾ ಒಂದನೇ ಅಲೆ ಹೊಡೆತಕ್ಕೆ ತತ್ತರಿಸಿದ್ದ ಖಾನಾಪುರ ಕ್ಷೇತ್ರದಲ್ಲೀಗ ಎರಡನೇ ಅಲೆಯ ಅಬ್ಬರವೂ ಜೋರಾಗಿದೆ. ನೆರೆಯ ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಖಾನಾಪುರ ತಾಲೂಕಿನ ಬಹುತೇಕರು ವಲಸೆ ಹೋಗುತ್ತಾರೆ. ಉಭಯ ರಾಜ್ಯಗಳಲ್ಲಿ ಲಾಕ್​​​ಡೌನ್ ಇರುವ ಕಾರಣ ಅವರೆಲ್ಲ ತಮ್ಮೂರಿಗೆ ಮರಳಿದ್ದಾರೆ. ಹೀಗಾಗಿ ವಲಸಿಗರಿಂದ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ‌ಮುಖ್ಯ ಕಾರಣವಾಗಿದೆ.

ಅದಕ್ಕಾಗಿ ಈ ಕೋವಿಡ್ ವೇಳೆಯಲ್ಲಿ ತನ್ನ ಕ್ಷೇತ್ರದ ಜನತೆಯ ಕಷ್ಟ ತಿಳಿಯಲು ಶಾಸಕಿ ಅಂಜಲಿ ಈ ಹಿಂದೆ ಖುದ್ದಾಗಿ ಸ್ಕೂಟಿ ಏರಿ ತನ್ನ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ ಕ್ಷೇತ್ರದ ಜನತೆಯ ಆರೋಗ್ಯ ಕಾಳಜಿಯನ್ನು ಮೇರಿದಿದ್ದರು. ಈಗ ಮತ್ತೆ ತಾಲೂಕ ಆಸ್ಪತ್ರೆಗೆ ನಾಲ್ಕು ಅಂಬ್ಯಲೆನ್ಸ್ ಗಳಿಗೆ ಚಾಲನೆ ನೀಡುವುದಲ್ಲದೇ ವಾಹನಗಳನ್ನು ಖುದ್ದಾಗಿ ಚಲಾಯಿಸುವ ಮೂಲಕ ಕ್ಷೇತ್ರದ ಜನರ ಗಮನ ಸೆಳೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!