ಟಾಪ್ ಸ್ಟೋರಿ

ಸಿಕ್ಕಾಪಟ್ಟೆ ಟ್ರೋಲ್ ಆದ ಜೂಹಿ ಚಾವ್ಲಾ..!

ಸಿಕ್ಕಾಪಟ್ಟೆ ಟ್ರೋಲ್ ಆದ ಜೂಹಿ ಚಾವ್ಲಾ..!

ಮಹಾಂತೇಶ ಇರಳಿ

ದೆಹಲಿ: 5ಜಿ ನೆಟ್‌ವರ್ಕ್‌ನ್ನು ಜಾರಿಗೊಳಿಸಬಾರದು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನಟಿ ಜೂಹಿ ಚಾವ್ಲಾ ದೆಹಲಿ ಹೈಕೋರ್ಟ್ಗ ಗೆ ಅರ್ಜಿ ಸಲ್ಲಿಸಿದ್ದರು.

ಇ ಕುರಿತು ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿ, ಜೂಹಿ ಚಾವ್ಲಾಗೆ 20 ಲಕ್ಷ ದಂಡ ವಿಧಿಸಿ ಕೋರ್ಟ್ ಆದೇಶಿಸಿ ನೀಡಿದೆ. ಈ ಸುದ್ದಿ ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಜೂಹಿ ಚಾವ್ಲಾ ಅವರನ್ನು ಅನೇಕರು ಜನರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಜೂಹಿ ಚಾವ್ಲಾ ಅವರನ್ನು ಬಗೆಬಗೆಯಾಗಿ ಟ್ರೋಲ್ ಮಾಡಲಾಗಿದ್ದು, ಒಂದಕ್ಕಿಂತ ಒಂದು ಮಿಮ್‌ಗಳು ನಗೆ ತರಿಸುವುದಲ್ಲದೇ ಏನೋ ಮಾಡಲು ಹೋಗಿ ಇನ್ನೇನೋ ಮಾಡಿದಂತಾಯಿತು ಎಂದಾಗಿದೆ ಜೂಹಿ ಪರಿಸ್ಥಿತಿ ಎಂದು ಕಾಲು ಎಳೆದಿದ್ದಾರೆ.

ಜೂಹಿ ಚಾವ್ಲಾ ಹಾಗೂ ಸಾಮಾಜಿಕ ಕಾರ್ಯಕರ್ತರಾದ ವೀರೇಶ್ ಮಲಿಕ್ ಮತ್ತು ತೀನಾ ವಚಾನಿ ಸಲ್ಲಿಸಿದ್ದ ಅರ್ಜಿಯಲ್ಲಿ, 5 ಜಿ ತಂತ್ರಜ್ಞಾನವನ್ನು ಜಾರಿಗೆ ತರಲು ದೂರಸಂಪರ್ಕ ಉದ್ಯಮವು ಯೋಜನೆ ರೂಪಿಸಿದ್ದರೆ, ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ ಮತ್ತು ಭೂಮಿಯ ಮೇಲಿನ ಯಾವುದೇ ಸಸ್ಯಗಳು ಈ ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ದಿನದ 24 ಗಂಟೆಗಳು, ವರ್ಷದ 365 ದಿನಗಳು, ಆರ್‌ಎಫ್‌ ವಿಕಿರಣದ ಮಟ್ಟವು ಇಂದು ಅಸ್ತಿತ್ವದಲ್ಲಿರುವುದಕ್ಕಿಂತ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!