DL,RC ಪಡೆಯಲು ಹೀಗೆ ಮಾಡಿ: ಸಾರಿಗೆ ಸಚಿವಾಲಯದ ಹೊಸ ಮಾರ್ಗಸೂಚಿ..!

DL,RC ಪಡೆಯಲು ಹೀಗೆ ಮಾಡಿ: ಸಾರಿಗೆ ಸಚಿವಾಲಯದ ಹೊಸ ಮಾರ್ಗಸೂಚಿ..!
ಮಹಾಂತೇಶ ಇರಳಿ
ನವದೆಹಲಿ: ಕರೋನಾ ಎಡನೆ ಅಲೆಯಿಂದಾಗಿ ಬಹುತೇಕ ರಾಜ್ಯಗಳು ಲಾಕ್‌ಡೌನ್ ಮತ್ತು ಕರ್ಫ್ಯೂ ವಿಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ ಸಂಬಂಧಿತ ಕೆಲಸವನ್ನು ನೀವು ಮಾಡಬೇಕಾದರೆ, ನೀವು ಮೆನೆಯಿಂದ ಹೊರ ಹೋಗಬೇಕಾಗಿಲ್ಲ.
ಹೌದು..! ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊರಡಿಸಿರುವ ಹೊಸ ನಿಯಮದ ಪ್ರಕಾರ, ಕಲಿಯುವವರ ಪರವಾನಗಿ ಪಡೆಯುವ ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್ ನಲ್ಲಿರುತ್ತದೆ ಹಾಗಾಗಿ ವಾಹನ ಸಂಬಂದಿಸಿದ ಕೆಲಸಗಳಿಗೆ ನೀವು ಮನೆಯಿಂದ ಹೊರ ಹೊಗುವ ಅವಶ್ಯಕತೆ ಇಲ್ಲಾ ಎಂದು ತಿಳಿಸಲಾಗಿದೆ.
ನೋಂದಣಿ ಪ್ರಮಾಣಪತ್ರ (RC) ನವೀಕರಣವನ್ನು ಈಗ 60 ದಿನಗಳ ಮುಂಚಿತವಾಗಿ ಮಾಡಬಹುದು, ಇದಲ್ಲದೆ, ತಾತ್ಕಾಲಿಕ ನೋಂದಣಿಯ ಸಮಯ ಮಿತಿಯನ್ನು ಸಹ 1 ತಿಂಗಳಿಂದ 6 ತಿಂಗಳವರೆಗೆ ಹೆಚ್ಚಿಸಲಾಗಿದೆ.
ಲರ್ನರ್ಸ್ ಲೈಸೆನ್ಸ್ ಪ್ರಕ್ರಿಯೆಯಲ್ಲಿ ಸರ್ಕಾರವು ಕೆಲವು ಬದಲಾವಣೆಗಳನ್ನು ಮಾಡಿದೆ. ಅದರ ಪ್ರಕಾರ ನೀವು ಚಾಲನಾ ಪರೀಕ್ಷೆಗೆ ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ, ಈ ಕೆಲಸವನ್ನು ಟ್ಯುಟೋರಿಯಲ್ ಮೂಲಕ ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಮಾಡಬಹುದು.
ಹೆಚ್ಚುತ್ತಿರುವ ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2020 ರ ಫೆಬ್ರವರಿ 1 ರಂದು ಅವಧಿ ಮೀರಿದ ಈ ದಾಖಲೆಗಳನ್ನು ಮುಂದಿನ 30 ಜೂನ್ 2021 ರವರೆಗೆ ಮಾನ್ಯವೆಂದು ಪರಿಗಣಿಸಲಾಗುತ್ತದೆ ಎಂದು ಸಚಿವಾಲಯ ಸುತ್ತೋಲೆ ಹೊರಡಿಸಿದೆ.