ಯಡಿಯೂರಪ್ಪ ಮಾಜಿ ಮಾಧ್ಯಮ ಸಲಹೆಗಾರ ಕರೋನಾಗೆ ಬಲಿ..!

ಯಡಿಯೂರಪ್ಪ ಮಾಜಿ ಮಾಧ್ಯಮ ಸಲಹೆಗಾರ ಕರೋನಾಗೆ ಬಲಿ..!
ಮಹಾಂತೇಶ ಇರಳಿ
ಬೆಂಗಳೂರು: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಹಾಗೂ ಬಿ.ಎಸ್ ಯಡಿಯೂರಪ್ಪನವರ ಮಾಜಿ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್ ರವರು ನಿಧನರಾಗಿದ್ದಾರೆ.
65 ವರ್ಷದ ಮಹಾದೇವ ಪ್ರಕಾಶ್ ರವರು ಕೊರೊನಾ ಸೋಂಕು ಇದ್ದ ಕಾರಣ 10 ದಿನದ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚೇತರಿಸಿಕೊಳ್ಳದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಸಿಎಂ ಯಡಿಯೂರಪ್ಪ ಹಾಗೂ ಸಿ.ಟಿ ರವಿ ಸಂತಾಪ
“ಖ್ಯಾತ ಲೇಖಕ, ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ ವಿಧಿವಶರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ನನ್ನ ಮಾಧ್ಯಮ ಸಲಹೆಗಾರರಾಗಿಯೂ ಅವರು ಕೆಲಸ ಮಾಡಿದ್ದರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ” ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ನನ್ನ ಆತ್ಮೀಯರೂ, ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು ಹಾಗೂ ಅಂಕಣಕಾರರಾದ ಶ್ರೀ ಮಹಾದೇವ ಪ್ರಕಾಶ್ ಅವರು ನಮ್ಮನ್ನಗಲಿದ್ದಾರೆ ಅನ್ನುವ ಸುದ್ದಿ ಕೇಳಿ ಆಘಾತವಾಗಿದೆ. ಶ್ರೀಯುತರು ಪ್ರಚಲಿತ ರಾಜಕೀಯ ವಿಚಾರಗಳನ್ನು ತಮ್ಮ ಅಂಕಣಗಳ ಮೂಲಕ ವಿಶ್ಲೇಷಣೆ ಮಾಡುತ್ತಿದ್ದ ಶೈಲಿ ನನ್ನನ್ನೂ ಸೇರಿದಂತೆ ಅಪಾರ ಓದುಗರ ವರ್ಗವನ್ನು ಇವರ ಅಭಿಮಾನಿಯನ್ನಾಗಿಸಿತ್ತು. ಇವರ ಅಗಲುವಿಕೆ ವೈಯುಕ್ತಿಕವಾಗಿ ನನಗೆ, ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ. ಅಗಲಿದ ಅವರಾತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸೋಣ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ತಿಳಿಸಿದ್ದಾರೆ.