ರಾಜ್ಯಕ್ಕೆ 120 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಿದ ಕೇಂದ್ರ

ರಾಜ್ಯಕ್ಕೆ 120 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಿದ ಕೇಂದ್ರ.
ಶ್ರೀನಿವಾಸ ಪಟ್ಟಣ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಂಕಷ್ಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಆಮ್ಲಜನಕವನ್ನು ಹೊತ್ತ ಆಕ್ಸಿಜನ್ ಎಕ್ಷ್‌ಪ್ರೆಸ್ ಕರ್ನಾಟಕ ತಲುಪಿದೆ. 120 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತ 6 ಕಂಟೈನರ್ ಗಳ ಆಕ್ಸಿಜನ್ ಎಕ್ಸ್‌ಪ್ರೆಸ್ ಬೆಂಗಳೂರಿಗೆ ಆಗಮಿಸಿದೆ.
ರಾಜ್ಯದಲ್ಲಿ ಉತ್ಪತ್ತಿಯಾಗುವ ಆಕ್ಸಿಜನನ್ನು ಇಲ್ಲೇ ಬಳಕೆ ಮಾಡಲು ಕೇಂದ್ರದ ಅನುಮತಿಯನ್ನು ಸರ್ಕಾರ ಕೋರಿತ್ತು. ಅಲ್ಲದೆ ಹೈಕೋರ್ಟ್ ಕೂಡಾ ಕರ್ನಾಟಕಕ್ಕೆ ಕೂಡಲೇ ಆಕ್ಸಿಜನ್ ಪೂರೈಕೆ ಮಾಡಬೇಕು ಎಂಬ ಆದೇಶವನ್ನು ನೀಡಿತು. ಅದರಂತೆ ಬೆಂಗಳೂರಿಗರೆ 6 ಟ್ಯಾಂಕರ್ ಗಳ ಮೂಲಕ ಆಕ್ಸಿಜನ್ ಪೂರೈಕೆ ಮಾಡಲಾಗಿದೆ.
ಈ ವೇಳೆ ಅಮಿತ್ ಶಾ ರಾಜ್ಯಕ್ಕೆ ಕೂಡಲೇ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಿದ್ದರು. ಅದರಂತೆ ಸೋಮವಾರ 120 MT ಆಮ್ಲಜನಕವನ್ನು ಹೊತ್ತ 6 ಕಂಟೈನರ್ ಗಳ ಆಕ್ಸಿಜನ್ ಎಕ್ಸ್‌ಪ್ರೆಸ್ ಕರ್ನಾಟಕ ತಲುಪಿದೆ.
ಒಟ್ನಲ್ಲಿ ಎಲ್ಲಡೆ ಆಕ್ಸಿಜನ್ ಕೊರೆತೆ ಉಂಟಾಗಿದ್ದು, ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಕೋರ್ಟ್ ಮೂಲಕ ಫೈಟ್ ಮಾಡಿ, ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಮಾಡಿಸಿಕೊಂಡಿದೆ. ಇಗಲಾದರು ರಾಜ್ಯದಲ್ಲಿ ಆಕ್ಸಿಜನ್ ಗಾಗಿ ಹಾಹಾಕಾರ ಕಡಿಮೆ ಆಗುತ್ತಾ ಎಂಬುದನ್ನು ಕಾದು ನೋಡಬೇಕು.