10 ಬೆಡ್ ಗಳ ಕ್ಯಾಂಟನ್ಮೆಂಟ್ ಬೋರ್ಡ್ ಆಸ್ಪತ್ರೆಗೆ
ಅನಿಲ ಬೆನಕೆ ಚಾಲನೆ..!

10 ಬೆಡ್ ಗಳ ಕ್ಯಾಂಟನ್ಮೆಂಟ್ ಬೋರ್ಡ್ ಆಸ್ಪತ್ರೆಗೆ
ಅನಿಲ ಬೆನಕೆ ಚಾಲನೆ..!
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಹಾಗಾಗಿ ಕೋವಿಡ್ ಹತೊಟೆಗೆ ತರಲು ಕ್ಯಾಂಟನ್ಮೆಂಟ್ ಅಧಿಕಾರಿಗಳು 10 ಬೆಡ್ ಗಳ ಕೋವಿಡ್ ಆಸ್ಪತ್ರೆ ನಿರ್ಮಿದ್ದು, ಶಾಸಕ ಅನಿಲ ಬೆನಕೆ ಅವರು ಚಾಲನೆ ನೀಡಿದ್ದಾರೆ.
ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಇರುವ ಕ್ಯಾಂಟನ್ಮೆಂಟ್ ಆಸ್ಪತ್ರೆಗೆ ಕ್ಯಾಂಟನ್ಮೆಂಟ್ ಬೋರ್ಡ್ ಅಧಿಕಾರಿಗಳು ಬೇಕಾಗುವ ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕ್ಯಾಂಟನ್ಮೆಂಟ್ ಬೋರ್ಡ್ ಅಧಿಕಾರಿಗಳಿಂದ ಮೊದಲಿನಿಂದಲೂ ಕೆಲಸ ಮಾಡುತ್ತಿದೆ.
ಕ್ಯಾಂಟನ್ಮೆಂಟ್ ಆಸ್ಪತ್ರೆಯ ವೈದ್ಯರ ಹಾಗೂ ಇತರೆ ವೈದ್ಯರ ಸಹಾಯದಿಂದ ಇಂದು 10 ಬೆಡ್ ಗಳ ಆಸ್ಪತ್ರೆ ನಿರ್ಮಾಣ ಮಾಡಿಲಾಗಿದ್ದು, 5 ಸಾವಿರ ಮಾಸ್ಕ್, ಸಾನಿಟೈಸರ್, ಸೇರಿದಂತೆ ಆಸ್ಪತ್ರೆಗೆ ಪ್ರಾಥಮಿಕವಾಗಿ ಬೇಕಾಗುವ ಅಗತ್ಯ ಸಾಮಗ್ರಿಗಳನ್ನು ಶಾಸಕ ಅನಿಲ ಬೆನಕೆ ಅವರು ನೀಡಿದ್ದಾರೆ.
ಈ ವೇಳೆ ಕ್ಯಾಂಟನ್ಮೆಂಟ್ ಸಿಇಒ ಬರ್ಛಶ್ವಾ, ಡಾ. ಜುಬಿನ್, ರೋಹಿತ ದೇಶಪಾಂಡೆ, ಕಿರಣ ನಿಪ್ಪಾಣಕರ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.