ರಾಜ್ಯದ “ಹೈ” ತೀರ್ಪಗೆ ತೆಲೆ ಬಾಗಿದ ಕೇಂದ್ರ..!

ರಾಜ್ಯದ “ಹೈ” ತೀರ್ಪಗೆ ತೆಲೆ ಬಾಗಿದ ಕೇಂದ್ರ..!
ಶ್ರೀನಿವಾಸ ಪಟ್ಟಣ
ದೆಹಲಿ: 1,200 ಮೆಟ್ರಿಕ್ ಟನ್ ಆಮ್ಲಜನಕವನ್ನು ಕರ್ನಾಟಕಕ್ಕೆ ಕಳುಹಿಸುವಂತೆ ಕೋರಿ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ನಿನ್ನೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿ, ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ರಾಜ್ಯಕ್ಕೆ ಆಮ್ಲಜನಕ ನೀಡುವ ಬಗ್ಗೆ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವು, ಎಲ್ಲ ಆಯಾಮ, ಅಂಕಿಸಂಖ್ಯೆಗಳನ್ನು ಒಳಗೊಂಡಿದೆ. ಇದರ ವಿರುದ್ಧದ ಕೇಂದ್ರದ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ” ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಕರ್ನಾಟಕದ ದೈನಂದಿನ ದ್ರವ ವೈದ್ಯಕೀಯ ಆಮ್ಲಜನಕದ ಹಂಚಿಕೆಯನ್ನು 965 ಮೆಟ್ರಿಕ್ ಟನ್ನಿಂದ 1,200 ಮೆಟ್ರಿಕ್ ಟನ್‌ಗೆ ಹೆಚ್ಚಿಸುವಂತೆ ಮೊನ್ನೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಈ ಆದೇಶದ ವಿರುದ್ಧ ಕೇಂದ್ರ ಸರ್ಕಾರವು ನಿನ್ನೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ರಾಜ್ಯದಲ್ಲಿ ಆಮ್ಲಜನಕ ಕೊರತೆ ಹೋಗಲಾಡಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದೊಂದಿಗೆ ಕೇಳುವ ಧೈರ್ಯವೆ ಇಲ್ಲ. ಕೊನೆಗೆ ಹೈಕೋರ್ಟ್ ಆ ಕೆಲಸ ಮಾಡಿ ರಾಜ್ಯದ ನೆರವಿಗೆ ಬಂದರೆ, ಅದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸುವ ಮೂಲ ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಬಗೆಯಲು ಯತ್ನಿಸಿದೆ.
ರಾಜ್ಯಗಳ ಸಮಂಜಸವಾದ ಬೇಡಿಕೆಗಳಿಗೆ ಕೇಂದ್ರವು ಹಿಂಜರಿಯುವುದಿಲ್ಲ. ನಾವು ಹೈಕೋರ್ಟ್ ಆದೇಶದ ಬಗ್ಗೆ ಕಾಳಜಿ ವಹಿಸುತ್ತೇವೆ ಮತ್ತು ಪ್ರತಿ ಹೈಕೋರ್ಟ್ ನಿರ್ದೇಶಿಸಿದ ಎಲ್ಲವನ್ನೂ ಕಾರ್ಯಸಾಧ್ಯ ಮಾಡಲಾಗದು’ಎಂದು ಕೇಂದ್ರ ವಾದಿಸಿತ್ತು. ಆದರು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಎದುರು ಮುಖ ಭಂಗ ಆಗಿದೆ.