ಮೇ 10 ರಿಂದ 14 ದಿನ ರಾಜ್ಯ ಸಂಪೂರ್ಣ ಸ್ಥಬ್ದ: ಎಣ್ಣೆ ಖರೀದಿಗೆ ಅವಕಾಶ.

ಮೇ 10 ರಿಂದ 14 ದಿನ ರಾಜ್ಯ ಸಂಪೂರ್ಣ ಸ್ಥಬ್ದ: ಎಣ್ಣೆ ಖರೀದಿಗೆ ಅವಕಾಶ.
ಮಹಾಂತೇಶ ಇರಳಿ
ಬೆಂಗಳೂರು: ಜನತಾ ಕರ್ಫೂ ಮಾಡಿದರು ಕೋವಿಡ್ ಮಾಹಾಮಾರಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ
ರಾಜ್ಯದಲ್ಲಿ, ಬರುವ ಸೋಮವಾರ 10 ರಿಂದ 24 ರವೆಗೆ ಒಟ್ಟು 14 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜನತಾ ಕರ್ಫ್ಯೂ ಬದಲಾಗಿ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡುವ ನಿರ್ಧಾರವನ್ನು ಸಚಿವರು ಕೋವಿಡ್ ಉಸ್ತುವಾರಿಗಳು ಸಲಹೆ ಮೇರೆಗೆ ಲಾಕ್ ಡೌನ ಮಾಡುವ ತಿರ್ಮಾನ ಸರ್ಕಾರ ಕೈಗೊಂಡಿದೆ.
ಮೇ 10 ಬೆಳಗ್ಗೆ 10 ಗಂಟೆಯಿಂದ ಮೇ 24 ರ ವರೆಗೆ ಅಂದರೆ 14 ದಿನಗಳ ಕಾಲ ಲಾಕ್ ಡೌನ್ ಇರಲಿದ್ದು, ಅವಶ್ಯ ವಸ್ತುಗಳಿಗೆ ಖರೀದಿಗೆ ಬೆಳಗ್ಗೆ 6 ರಿಂದ ಬಳಗ್ಗೆ 10 ರವೆಗೆ ಅವಕಾಶ ನೀಡಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗಳ ವಾಹನಗಳಿಗೆ ಅವಕಾಶ ಇರಲಿದೆ ಎಂದು ಸಿಎಂ ಅವರು ತಿಳಿಸಿದರು.
ರಸ್ತೆ ನಿರ್ಮಣ, ಕಟ್ಟಡ ಕಾಮಗಾರಿಗೆ ಅವಕಾಶ, ಮದುವೆಗಳಿಗೆ 50 ಜನರಿಗೆ ಮಾತ್ರ ಅವಕಾಶ ಇರಲಿದೆ.
ಈ ವೇಳೆ ಅಂತರರಾಜ್ಯ ಅಂತರ ಜಿಲ್ಲಿಗೆ ಪ್ರಯಾಣಿಸಲು ಅವಕಾಶ ಇರೊದಿಲ್ಲ. ಶಾಲಾ ಕಾಲೇಜುಗಳು ಸಂಪೂರ್ಣ ಬಂದ ಇರಲಿದೆ. ಇನ್ನೂ 14 ದಿನ ಎಲ್ಲಾ ನಿಗಮಗಳ ಬಸ್ ಸಂಚಾರ ಬಂದ್ ಇರಲಿದೆ. ಸಾರ್ವಜನಿಕ ಸ್ಥಳಗಳು ಸಂಪೂರ್ಣ ಬಂದ ಇರಲಿದೆ. ಸಿನೆಮಾ ಹಾಲ್, ಜಿಮ್, ಶಾಪಿಂಗ್ ಮಾಲ್ ಸಂಪೂರ್ಣ ಬಂದ್ ಇರಲಿದೆ. ಧಾರ್ಮಿಕ ಕೇಂದ್ರಗಳು ಬಂದ್ ಇರಲಿದೆ. ಆದರೆ ಧಾರ್ಮಿಕ ಕ್ರೇಂದ್ರಗಳಲ್ಲಿ ಪೂಜೆಗೆ ಮಾತ್ರ ಅವಕಾಶ ಇರಲಿದೆ. ಬೆಳಗ್ಗೆ 6 ರಿಂದ 10 ರವರೆಗೆ ಎಣ್ಣೆ ಪಾರ್ಸಲ್ ಗೆ ಅವಕಾಶ ಇದೆ. ಬಹುತೇಕ ಸರ್ಕಾರದ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಇದೆ. ಕೈಗಾರಿಕಾಗಳಿಗೆ ಶರತ್ತು ಬದ್ಧ ಅವಕಾಶ, ಮಾರ್ಗಸೂಚಿ ಮೀರಿ ಪ್ರಯಾಣಿಸಿದರೆ ಸೂಕ್ತ ಕಾರಣ ನೀಡಬೇಕು. ಒಂದು ವೇಳೆ ಮಾರ್ಗಸೂಚಿ ಉಲ್ಲಂಘನೆ ಮಾಡಿ, ಯಾರಾದ್ರು ಹೊರಗೆ ಬಂದ್ರೆ ಪೊಲೀಸ್ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.