ತಮಿಳುನಾಡಿನ ನೂತನ ಸಿಎಂ ಆಗಿ ಸ್ಟಾಲಿನ್ ಅಧಿಕಾರ ಸ್ವೀಕಾರ: ಮೊದಲ ದಿನವೇ ಬಂಪರ್ ಘೋಷಣೆ ಮಾಡಿದ ಸ್ಟಾಲಿನ್..!

ತಮಿಳುನಾಡಿನ ನೂತನ ಸಿಎಂ ಆಗಿ ಸ್ಟಾಲಿನ್ ಅಧಿಕಾರ ಸ್ವೀಕಾರ: ಮೊದಲ ದಿನವೇ ಬಂಪರ್ ಘೋಷಣೆ ಮಾಡಿದ ಸ್ಟಾಲಿನ್..!
ಮಹಾಂತೇಶ ಇರಳಿ
ಚೆನ್ನೈ: ತಮಿಳುನಾಡಿನ ನೂತನ ಸಿಎಂ ಆಗಿ ಡಿಎಂಕೆ ಮುಖ್ಯಸ್ಥ ಎಂ. ಕೆ ಸ್ಟಾಲಿನ್ ಅವರು ಹಾಗೂ ಅವರೊಂದಿಗೆ ಸಂಪುಟಕ್ಕೆ 33 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ
ಕೋವಿಡ್ ಹಿನ್ನೆಲೆಯಲ್ಲಿ ಚೆನ್ನೈನ ರಾಜಭವನದಲ್ಲಿ ಇಂದು ಬೆಳಿಗ್ಗೆ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಪ್ರತಿಜ್ಞಾವಿಧಿ ಬೋಧಿಸಿದರು.
ನೂತನ ಜಲಸಂಪನ್ಮೂಲ ಸಚಿವರಾಗಿ ಹಿರಿಯ ಡಿಎಂಕೆ ನಾಯಕ ದುರೈಮುರುಗನ್, ಹಣಕಾಸು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವರಾಗಿ ಪಳನಿವೇಲ್ ತ್ಯಾಗರಾಜನ್, ಆರೋಗ್ಯ ಸಚಿವರಾಗಿ ಎಂಎ ಸುಬ್ರಮಣಿಯನ್, ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾಗಿ ಎಂಆರ್‌ಕೆ ಪನೀರ್‌ಸೆಲ್ವಂ ಪ್ರಮಾಣ ವಚನ ಸ್ವೀಕರಿಸಿದ್ದಾರೆ
ಪರಿಸರ ಸಚಿವಾಲಯಕ್ಕೆ ಶಿವ ವಿ ಮೆಯ್ಯನಾಥನ್, ಕಾರ್ಮಿಕ ಕಲ್ಯಾಣ ಸಚಿವರಾಗಿ ಸಿವಿ ಗಣೇಶನ್ ಆಯ್ಕೆಯಾಗಿದ್ದಾರೆ. ಎನ್‌ಆರ್‌ಐ ಇಲಾಖೆ, ಅಲ್ಪಸಂಖ್ಯಾತರು, ನಿರಾಶ್ರಿತರು ಮತ್ತು ವಕ್ಫ್ ಮಂಡಳಿ ಸಚಿವರಾಗಿ ಗಿಂಗೀ ಎಸ್ ಮಸ್ತಾನ್, ಮೀನುಗಾರಿಕೆ ಸಚಿವೆಯಾಗಿ ಅನಿತಾ ಆರ್ ರಾಧಾಕೃಷ್ಣನ್, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವರಾಗಿ ಟಿ ಮಾನೊ ತಂಗರಾಜ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ದಿನದಂದೆ ಎಂ.ಕೆ. ಸ್ಟಾಲಿನ್ ಅವರು, ಪಡಿತರ ಚೀಟಿದಾರರಿಗೆ ನಗದು ರೂಪದಲ್ಲಿ ಕೊರೊನಾ ಪರಿಹಾರ ಸೇರಿದಂತೆ ಐದು ಪ್ರಮುಖ ಯೋಜನೆಗಳಿಗೆ ಇಂದು ಅವರು ಸಹಿ ಹಾಕಿದ್ದಾರೆ.
ಸಾರ್ವಜನಿಕರಿಗೆ ದೈನಂದಿನ ಖರ್ಚಿನಲ್ಲಿನ ಉಳಿತಾಯ ಮಾಡುವಂತಾಗಲು, ಸರ್ಕಾರಿ ಡೈರಿಯಾದ ‘ಅವಿನ್’ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ಮೂರು ರೂಗಳನ್ನು ಇಳಿಸಿದ್ದಾರೆ. ಇದು ಮೇ 16 ರಿಂದ ಜಾರಿಗೆ ಬರಲಿದೆ.