ಟಾಪ್ ಸ್ಟೋರಿ

ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಪಕ್ಕಾ ವರದಿ

ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಪಕ್ಕಾ ವರದಿ: ತಮಿಳುನಾಡಿನಲ್ಲಿ ಅಧಿಕಾರ ಕಳೆದುಕೊಂಡ ಆಡಳಿತರೋಢಿ ಪಕ್ಷ..!

ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ ಪಂಚರಾಜ್ಯಗಳ ಚುನಾವಣೆ ಪ್ರಕ್ರಿಯೆ ನಿನ್ನೆ ಅಷ್ಟೇ ಮುಗಿದಿದೆ. ಚುನಾವಣೆ ಮುಗಿಯುತ್ತಿದಂತೆ. ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳನ್ನು ಹೊರ ಬಿದಿದ್ದು, ಯಾರು ವಿಜಯ ಪತಾಕೆ ಹಾರಿಸುತ್ತಾರೆ ಅಂತ ನೋಡೊಣ ಬನ್ನಿ …!

ಪಂಚರಾಜ್ಯ ಚುನಾವಣೆಗಳಲ್ಲಿ ಈಡೀ ದೇಶದ ಚಿತ್ತ ಪಶ್ಚಿಮ ಬಂಗಾಳದ ಕಡೆ ಇತ್ತು. ಪಶ್ಚಿಮ ಬಂಗಾಳದಲ್ಲಿ ಐದು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು, ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ವಿವಿಧ ಸಂಸ್ಥೆಗಳು ತಮ್ಮ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿವೆ.

ಬಂಗಾಳದಲ್ಲಿ ದಿದಿಗೆ ಜೈ

ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹೆಚ್ಚು ಫೇವರಿಟ್ ಆಗಿದ್ದಾರೆ. ಅವರ ತೃಣಮೂಲ ಕಾಂಗ್ರೆಸ್ ರಾಜ್ಯದ 294 ಸ್ಥಾನಗಳಲ್ಲಿ 152- 160 ಸ್ಥಾನಗಳನ್ನು ಗೆಲ್ಲಬಹುದು, ಬಿಜೆಪಿ ಕನಿಷ್ಠ 125-130 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಎನ್‌ಡಿಟಿವಿ ನಡೆಸಿದ ಪೋಲ್ ಆಫ್ ಪೋಲ್ಸ್ (ಎಲ್ಲ ಸಮೀಕ್ಷೆಗಳ ಸಮೀಕ್ಷೆ) ತಿಳಿಸಿದೆ. ಒಟ್ಟು ಆರು ಖಸಗಿ ಸಿದ್ದಿ ವಾಹಿನಿಗಳು ನಡೆಸಿದ ಸಮೀಕ್ಷೆ ಪ್ರಕಾರ, ಒಟ್ಟು ಸರಾಸರಿಯು ಮಮತಾ ಬ್ಯಾನರ್ಜಿ ಬಹುಮತಕ್ಕೆ ತಲುಪಬಹುದೆಂದು ಸೂಚಿಸುತ್ತದೆ.

ಈ ಬಾರಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಲಾಭ ಗಳಿಸುವುದರೊಂದಿಗೆ ತೃಣಮೂಲದ ಪ್ರಮಾಣ ತೀವ್ರವಾಗಿ ಕುಸಿಯುತ್ತದೆ ಎಂದು ಸಮೀಕ್ಷೆಗಳು ಸೂಚಿಸುತ್ತವೆ. ಆದರೆ ಎಲ್ಲ ಸಮೀಕ್ಷೆಗಳ ಸಮೀಕ್ಷೆ ಟಿಎಂಸಿ ಸರಳ ಬಹುಮತ ಪಡೆಯಲಿದೆ ಎನ್ನುತ್ತದೆ..

ಕೆರಳದಲ್ಲಿ ಬಿಜೆಪಿಗೆ ಲಾಭ ಆದ್ರು, ಎಲ್‌ಡಿಎಫ್ ಅಧಿಕಾರಕ್ಕೆ

ಕೇರಳದಲ್ಲಿ ಈಗಿನ ಎಡಪಂಥೀಯ ಎಲ್‌ಡಿಎಫ್ ಕೂಟವು 140 ಸ್ಥಾನಗಳಲ್ಲಿ 85 ಸ್ಥಾನಗಳೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ 53 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಅದು ಸರಿಯೆಂದು ಸಾಬೀತಾದರೆ, ಕೇರಳದ ರಾಜಕೀಯದಲ್ಲಿ ಆಡಳಿತ ಪಕ್ಷ ಪುನರಾಯ್ಕೆಗೊಂಡ ಮೊದಲ ನಿದರ್ಶನ ಇದಾಗಲಿದೆ. ಕೇರಳದಲ್ಲಿ ಎರಡು ಸ್ಥಾನಗಳೊಂದಿಗೆ ಬಿಜೆಪಿ ತನ್ನ ಅಸ್ತಿತ್ವವನ್ನು ತೋರಿಸಲು ಸಜ್ಜಾಗಿದೆ ಎಂದು ಸಮೀಕ್ಷೆಯ ಸಮೀಕ್ಷೆ ತಿಳಿಸಿದೆ.

ಡಿಎಂಕೆ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ ತಮಿಳು ಜನ

ತಮಿಳುನಾಡಿನಲ್ಲಿ, ಡಿಎಂಕೆ ನೇತೃತ್ವದ ಕೂಟ ಸಲೀಸಾಗಿ ಅಧಿಕಾರಕ್ಕೆ ಬರಲಿದೆ. ಡಿಎಂಕೆ ಕೂಟ 234 ಸ್ಥಾನಗಳಲ್ಲಿ 160 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಆಡಳಿತಾರೂಢ ಮತ್ತು ಬಿಜೆಪಿಯ ಮಿತ್ರ ಪಕ್ಷ ಎಐಡಿಎಂಕೆ ತನ್ನ ವರ್ಚಸ್ವಿ ನಾಯಕಿ ಜೆ.ಜಯಲಲಿತಾ ಅವರ ನಿಧನದ ನಂತರ ನಡೆದ ಮೊದಲ ರಾಜ್ಯ ಚುನಾವಣೆಯಲ್ಲಿ 66 ಸ್ಥಾನಗಳನ್ನು ಗಳಿಸಲಿದೆ ಎಂದು ನಿರ್ಗಮನ ಸಮೀಕ್ಷೆಗಳು ತಿಳಿಸಿವೆ. .

ಅಸ್ಸಾಂನಲ್ಲಿ ಕಾಂಗ್ರೆಸ್ ಗೆ ಬಿಗ್ ಶಾಕ್

ಅಸ್ಸಾಂನಲ್ಲಿ ಕಾಂಗ್ರೆಸ್‌ಗೆ ಮತ್ತೆ ನಿರಾಶೆ ಕಾದಿದೆ ಎಂದು ಎಕ್ಸಿಟ್ ಪೋಲ್ಸ್ ಸೂಚಿಸುತ್ತವೆ, ಬಿಜೆಪಿ 126 ಸ್ಥಾನಗಳಲ್ಲಿ 72 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ತನ್ನ ಹಿಂದಿನ ಭದ್ರಕೋಟೆ ಮರಳಿ ಗೆಲ್ಲಲು ಆಕ್ರಮಣಕಾರಿಯಾಗಿ ಪ್ರಚಾರ ಮಾಡಿದ ಕಾಂಗ್ರೆಸ್ 53 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಪುದುಚೇರಿಯಲ್ಲಿ “ಕೈ” ಹಿಡಿದ ಮತದಾರ

ಪುದುಚೇರಿಯಲ್ಲಿ ಕಾಂಗ್ರೆಸ್‌ಗೆ ಕಷ್ಟವಾದರೂ ಮರಳಿ ಅಧಿಕಾರಕ್ಕೆ ಬರುವ ಸೂಚನೆಗಳಿವೆ.ಇತ್ತಿಚಿನ ದಿನಗಳಲ್ಲಿ ಕಾಂಗ್ರೆಸ್ ತನ್ನ ಪ್ರದರ್ಶನ ಕಡಿಮೆ ತೊರಿಸುತ್ತಿದೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಜನ ತಿರಸ್ಕಾರ ಮಾಡಿದರು ಕೇಂದ್ರಾಡಳಿ ಪ್ರದೇಶವಾದ ಪುದುಚೇರಿಯಲ್ಲಿ ಮತದಾರ ಕಾಂಗ್ರೆಸ ಗೆ ಜೈ ಅಂದಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!