ಗುಡ್ ನ್ಯೂಸ್

1,000 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಮುಂದಾದ ನಿತಾ ಅಂಬಾನಿ

1,000 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಮುಂದಾದ ನಿತಾ ಅಂಬಾನಿ

ಶ್ರೀನಿವಾಸ ಪಟ್ಟಣ

ಗುಜರಾತ: ದೇಶದಲ್ಲಕ ಕರೋನಾ ಸೃಷ್ಠಿಸುತ್ತಿರುವ ಅವಾಂತರಕ್ಕೆ ಎಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಸರ್ಕಾರ ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದು, ಸಾಕಷ್ಟು ಜನ ದಾನಿಗಳು ಸರ್ಕಾರಕ್ಕೆ ಸಹಾಯ ನೀಡುತ್ತಿದ್ದು, ಅಹಾಯ ಮಾಡುತ್ತಿರುವ ಪಟ್ಟಿಗೆ ದೇಶದ ಅಗರ್ಭ ಶ್ರೀಮಂತ ಕೂಡಾ ಸೇರಿಕೊಂಡಿದ್ದಾರೆ.

ಹೌದು ದೇಶದಲ್ಲಿ ಕರೊನಾ ಕಟ್ಟಿಹಾಕಲು ರಿಲಯನ್ಸ್
ಫೌಂಡೇಷನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಗುಜರಾತಿನ ಜಾಮ್ ನಗರದಲ್ಲಿ ಆಮ್ಲಜನಕ ಪೂರೈಕೆಯೊಂದಿಗೆ 1,000 ಬೆಡ್‌ಗಳ ಕೋವಿಡ್ ಕೇರ್ ಸೌಲಭ್ಯಗಳನ್ನು ಸ್ಥಾಪಿಸುತ್ತಿದೆ ಎಂದು ತಿಳಿಸಿದ್ದಾರೆ‌‌

ಜಾಮ್ ನಗರದ ಸರ್ಕಾರಿ ದಂತವೈದ್ಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇನ್ನು ಒಂದು ವಾರದಲ್ಲಿ 400 ಹಾಸಿಗೆಗಳ ಕೋವಿಡ್ ಕೇರ್ ಸೌಲಭ್ಯವನ್ನು ಆರಂಭಿಸಲಾಗುವುದು. ಬಳಿಕ, ಮುಂದಿನ ಎರಡು ವಾರಗಳ ಸಮಯದಲ್ಲಿ ಜಾಮ್ ನಗರದ ಬೇರೊಂದು ಸ್ಥಳದಲ್ಲಿ 600 ಹಾಸಿಗೆಗಳ ಮತ್ತೊಂದು ಕೋವಿಡ್ ಕೇರ್ ಸೌಲಭ್ಯ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದ್ದಾರೆ.‌

ಭಾರತವು ಕೋವಿಡ್ ಎರಡನೆಯ ವಿರುದ್ಧ ಹೋರಾಡುತ್ತಿರುವಾಗ, ನಮಗೆ ಸಾಧ್ಯವಾದ ಪ್ರತಿ ಮಾರ್ಗದಲ್ಲಿಯೂ ಸಹಾಯ ಮಾಡಲು ಬದ್ಧರಾಗಿದ್ದೇವೆ. ಹೆಚ್ಚುವರಿ ವೈದ್ಯಕೀಯ ಸವಲತ್ತುಗಳು ಈ ಸಮಯದ ಅತ್ಯಂತ ಮಹತ್ವದ ಅಗತ್ಯಗಳಲ್ಲಿ ಒಂದಾಗಿದೆ.‌

ಈ ಪಿಡುಗು ಆರಂಭವಾದ ಸಮಯದಿಂದಲೂ ರಿಲಯನ್ಸ್ ಫೌಂಡೇಷನ್, ನಮ್ಮ ಭಾರತೀಯ ಜತೆಗಾರರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಅಮೂಲ್ಯ ಜೀವಗಳನ್ನು ಕಾಪಾಡಲು ನಾವು ಅವಿರತ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇವೆ. ನಾವು ಜತೆಗೂಡಿ ಈ ಹೋರಾಟದಲ್ಲಿ ಗೆಲ್ಲಬಹುದು ಮತ್ತು ಗೆಲ್ಲುತ್ತೇವೆ’ ಎಂದು ರಿಲಯನ್ಸ್
ಫೌಂಡೇಷನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು ತಿಳಿಸಿದ್ದಾರೆ.‌

Related Articles

Leave a Reply

Your email address will not be published. Required fields are marked *

Back to top button
error: Content is protected !!