ಜನತಾ ಕರ್ಪ್ಯೂ ಉಲ್ಲಂಘಿಸಿ ಜ್ಯೋತಿ ಬಜಾರ್ ಓಪನ್;ಸಚಿವೆ ಜೋಲ್ಲೆ ಆಪ್ತನ ಚಳಿಬಿಡಿ, ಅಂಗಡಿ ಸೀಜ್ ಮಾಡಿದ ಕೆಎಎಸ ಅಧಿಕಾರಿ ಅಪೂರ್ವಾ ಬಿದ್ರಿ

“ಕೋವಿಡ್”ನಿಯಮ ಗಾಳಿಗೆ ತೂರಿದ “ಜೋಲ್ಲೆ ವಡೆತನದ ಬಜಾರ್”: “ಬಜಾರ್ ಸೀಜ್” ಮಾಡಿದ “ಕೆಎಎಸ್ ಅಧಿಕಾರಿ ಅಪೂರ್ವಾ ಬಿದ್ರಿ”
ಬೆಳಗಾವಿ: ಸಚಿವೆ ಶಶಿಕಲಾ ಜೊಲ್ಲೆ ಮತ್ತು ಚೊಕ್ಕೋಡಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಒಡೆತನದ ಜೋತಿ ಬಜಾರ್ ನಿಯಮ ಮೀರಿ ಓಪನ್ ಅಗಿದ್ದು, ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ ದಾಳಿ ನಡೆಸಿ ಬಜಾರ್ ಸೀಜ್ ಮಾಡಿದ್ದಾರೆ.
ರಾಜ್ಯದಲ್ಲಿ ಕರೋನಾ ನಿಯಂತ್ರಣ ಮಾಡುಲು ಸರ್ಕಾರ ಕಠಿಣ ಕ್ರಮ ಕೈಗೊಂಡುದ್ದು,ಅಗತ್ಯ ಸೇವೆ ಹೊರತು ಪಡಿಸಿ ಉಳಿದ ಎಲ್ಲಾವು ಬಂದ ಇರಲಿದೆ. ಜನರಿಗೆ ತೊಂದರೆ ಆಗಬಾರದು ಎಂದು ಸರ್ಕಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ನೀಡಿದೆ.ಆದರೆ ಪ್ರಭವಾವಿ ರಾಜಕಾರಣಿಗಳ ಬಜಾರ್ ನಿಯಮ ಉಲ್ಲಂಘನೆ ಮಾಡಿ ಓಪನ್ ಮಾಡಿ ನಿಯಮ ಗಾಳಿಗೆ ತುರಿದೆ.
ಕೆಎಎಸ್ ಅಧಿಕಾರಿ ಮತ್ತು ಜೋಲ್ಲೆ ಆಪ್ತರ ನಡುವೆ ವಾಗ್ವಾದ
ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ ಅಪೂರ್ವ ಬೀದ್ರಿ (KAS) ಅವರ ನೇತ್ರತ್ವದಲ್ಲಿ ದಾಳಿ ನಡೆದಿದ್ದು, ಜೋಲ್ಲೆ ಒಡೆತನದ ಜೋತಿ ಬಜಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪುರಸಭೆ ಅಧಿಕಾರಿಗಳು ಮುಂದಾಗಿದ್ದಾರೆ.
ಚಿಕ್ಕೋಡಿ ಪಟ್ಟಣದ ಇಂದ್ರಾ ನಗರದಲ್ಲಿರುವ ಜೋತಿ ಬಜಾರ್ ಕೊರೋನಾ ನಿಯಮ ಗಾಳಿಗೆ ತೊರಿ ವ್ಯಾಪಾರ ನಡೆಸುತ್ತಿರುವ ಆರೋಪದ ಅಡಿ ಅಧಿಕಾರಿಗಳು ಬಜಾರ್ ಸೀಜ್ ಮಾಡಿಸಿದ್ದಾರೆ.
ಈ ವೇಳೆ “ಎಲ್ಲದಿರಿ ಜೊಲ್ಲೆ ಬಾಯಿ ಪಿ ಎ, ಯಾಕೆ ಅಂಗಡಿ ತಗೆದಿದ್ದೀರಿ ಎಂದು ಜ್ಯೋತಿ ಬಜಾರ್ ಸಿಬ್ಬಂದಿಗೆ ಅಪೂರ್ವಾ ಬಿದ್ರಿ “ಕೂಗಾಡಿರುವ” ಘಟನೆ ನಡೆದಿದೆ.
ಈ ವೇಳೆ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಆಪ್ತ ಹಾಗೂ ಅಧಿಕಾರಿ ಅಪೂರ್ವ ಮಧ್ಯೆ ವಾಗ್ವಾದ ನಡೆದಿದೆ. ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಮಾಡುತ್ತಿರಾ ಎಂದು ಗರಂ ಆಗಿರುವ ಅಧಿಕಾರಿ, ಬಜಾರ್ ವಿರುದ್ಧ ಪ್ರಕರಣ ದಾಖಲು ಮುಂದಾದಗಿದ್ದಾರೆ.