ಕೊರೊನಾ ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಲು ಫಿಲ್ಡಿಗಿಳಿದ ಶಾಸಕ ಅನಿಲ್ ಬೆನಕೆ ಟೀಮ್

ಕೋವಿಡ್ ನಿರ್ವಹಣೆಗೆ ತಂಡ ರಚನೆ: ಕೋವಿಡ್ ಸೋಕಿತರಿಗೆ ಅಗತ್ಯ ನೇರವು ನೀಡಲು ಅನಿಲ ಬೆನಕೆ ಸಿದ್ದತೆ
ಬೆಳಗಾವಿ: ದೇಶದಾದ್ಯಂತ ಕರೋನಾ ರೋಗ ಹೆಚ್ಚುತ್ತಿದ್ದು, ಕರೋನಾ ಸೋಂಕಿತರು ಬೆಡ್, ಆಕ್ಸಿಜನ್ ಸಿಗದೆ ನರಳಿ ನರಳಿ ಸಾಯುತ್ತಿದ್ದಾರೆ. ಆದರೆ ಬೆಳಗಾವಿಯಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ನಿಗಿಸಲು ಶಾಸಕ ಅನಿಲ ಬೆನಕೆ ಮುಂದಾಗಿದ್ದು, ಬೆಡ್, ಆಕ್ಸಿಜನ್ ಸಿಲಿಂಡರ್ ಹಾಗೂ ಆಂಬುಲೆನ್ಸ್ ಸೇವೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ.
ಬೆಳಗಾವಿ ನಗರದ ಜನರಿಗೆ ಉಚಿತ ಸೇವೆ ನೀಡಲು ತಮ್ಮ ಕಾರ್ಯಕರ್ತರ ತಂಡೆ ರಚನೆ ಮಾಡಿರುವ ಅವರು,
ಚರ್ಚೆ ನಡೆಸಿ, ನಗರಲ್ಲಿ ಕೋವಿಡ್ ಸೋಂಕಿತರು ಮೂಲಭುತ ಸೌಲಭ್ಯಗಳು ಸಿಗದೆ ಯಾರು ನರಳಬಾರದು, ಸಮಸ್ಯೆಗಳನ್ನು ಬಗೆಹರಿಸಲು ಶಾಸಕ ಅನಿಲ ಬೆನಕೆ ಅವರು ತಂಡ ರಚನೆ ಮಾಡಿದ್ದಾರೆ.ಈ ತಂಡದ ಸದಸ್ಯರು ಒಂದು ಸಾಹಾಯವಾಣಿ ಬಿಡುಗಡೆ ಮಾಡಿ, ಯಾರಿಗೆ ಆಕ್ಸಿಜನ್ ಸಿಲೆಂಡ್, ಬೆಡ್ ಹಾಗೂ ಆಂಬುಲೆನ್ಸ್ ವೆವಸ್ಥೆ ಬೇಕೊ, ಅವರಿಗೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ
ಈ ಕುರಿತು ಮಾಹಿತಿ ನೀಡಿರು ಅವರು, ಕರೋನಾ ನಿಯಂತ್ರಣ ಸಂಬಂಧ ಕೆಲಸ ಮಾಡಲು ಅನೇಕ ಸಾಮಾಜಕ ಕಾರ್ಯಕರ್ತರು ಮುಂದಾಗಿದ್ದಾರೆ. ಕರೋನಾ ರೋಗದ ಲಕ್ಷಣಗಳು ಜನರಿಗೆ ಬಂದರೆ ಆಸ್ಪತ್ರೆಗೆ ಹೊಗುವ ಅವಸ್ಯಕತೆ ಇಲ್ಲ, ಅವರು ಮನೆಯಲ್ಲಿ ಇದ್ದು, ಚಿಕಿತ್ಸೆ ಪಡೆಯಬೇಕು, ಅವರಿಗೆ ಬೇಕಾಗುವ ಅಗತ್ಯ ನೇರವು ನಮ್ಮ ತಂಡ ನೀಡಲಿದೆ. ಒಂದು ವೇಳೆ ಆಸ್ಪತ್ರೆಗೆ ಹೋಗುವ ಪ್ರಸಂಗ ಬಂದರೆ ತಮ್ಮ ತಂಡ, ಆ ರೋಗಿಗೆ ಆಸ್ಪತ್ರೆಯಲ್ಲಿ ಬೆಡ್ ದೊರಕಿಸುವ ಸ್ಯವಸ್ಥೆಯನ್ನು ಮಾಡಲಿದ್ದಾರೆ. ಪ್ರಾಥಮಿಕವಾಗಿ 25 ಸಿಲೇಂಡ್ ಗಳ ವೆವಸ್ಥೆ ಮಾಡಿದ್ದೇವೆ, ಸೋಂಕಿತರ ಸಂಖ್ಯೆ ಹೆಚ್ಚಾದರೆ ಇನ್ನೂ ಸಿಲೆಂಡ್ ಗಳ ಸಂಖ್ಯೆಯು ಜಾಸ್ತಿ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಅನಿಲ ಬೆನಕೆ ಅವರ ತಂಡದಲ್ಲಿ ಪೃಥ್ವಿ ಸಿಂಗ್, ಸುರೇಂದ್ರ ಅನಗೊಳಕರ್, ಬಾಳು, ಸೇರಿದಂತೆ ಅನೇಕು ಪ್ರತಿ ನಿತ್ಯ ದಿನದ 24 ಗಂಟೆಗಳ ಕೋವಿಡ್ ಸೋಂಕಿತರಿಗೆ ನೆರವಾಗಲಿದ್ದಾರೆ.